ಗಜೇಂದ್ರ ಮೋಕ್ಷ ಕೊಳಕ್ಕೆ ಸಿಕ್ಕಿತು ಕಸದಿಂದ ಮುಕ್ತಿ

KannadaprabhaNewsNetwork |  
Published : Feb 04, 2026, 01:30 AM IST
3ಕೆಎಂಎನ್‌ಡಿ-7ಮಂಡ್ಯದ ಗಜೇಂದ್ರ ಮೋಕ್ಷ ಕೊಳವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ. | Kannada Prabha

ಸಾರಾಂಶ

ಕಸದಿಂದ ತುಂಬಿಹೋಗಿದ್ದ ಐತಿಹಾಸಿಕ ಗಜೇಂದ್ರ ಮೋಕ್ಷ ಕೊಳದ ಸುತ್ತ ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾಮಗಾರಿ ನಡೆಸುವ ಮೂಲಕ ಕೊಳದ ಸೌಂದರ್ಯೀಕರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಸದಿಂದ ತುಂಬಿಹೋಗಿದ್ದ ಐತಿಹಾಸಿಕ ಗಜೇಂದ್ರ ಮೋಕ್ಷ ಕೊಳದ ಸುತ್ತ ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾಮಗಾರಿ ನಡೆಸುವ ಮೂಲಕ ಕೊಳದ ಸೌಂದರ್ಯೀಕರಣಗೊಳಿಸಿದರು.

ಹಲವಾರು ತಿಂಗಳಿಂದ ಗಜೇಂದ್ರ ಮೋಕ್ಷ ಕೊಳದ ಸುತ್ತಲೂ ಎಲೆಗಳು ಉದುರಿ ಗಿಡಗಳು ಬೆಳೆದುಕೊಂಡು ಕೊಳ ತನ್ನ ನೈಜ ಸೌಂದರ್ಯವನ್ನು ಕಳೆದುಕೊಂಡಿತ್ತು. ಇದನ್ನು ಗಮನಿಸಿದ ಎಸ್‌.ಕೆ.ವಿಶ್ವಕರ್ಮ ಸೇವಾ ಟ್ರಸ್ಟ್‌ ಅಧ್ಯಕ್ಷ ಎಚ್‌.ರಮೇಶ್‌, ಜಿಲ್ಲಾ ನಿರ್ದೇಶಕಿ ರಾಧಾ ಹಾಗೂ ಸಾರ್ವಜನಿಕರು ಕೊಳದ ಸೌಂದರ್ಯ ಹೆಚ್ಚಿಸಲು ಸ್ವಚ್ಛತಾ ಕಾಮಗಾರಿ ನಡೆಸುವಂತೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಅವರು ಆರೋಗ್ಯ ನಿರೀಕ್ಷಕರು, ಕಮ್ಯುನಿಟಿ ಮೊಬಲೈಸರ್ಸ್‌, ಸ್ವಚ್ಛತಾ ಸಿಬ್ಬಂದಿ, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಕೊಳದ ಸ್ವಚ್ಛತಾ ಕಾಮಗಾರಿಯನ್ನು ನಡೆಸಿದರು. ಕೊಳದ ಸುತ್ತಲೂ ಗಿಡ-ಗಂಟೆಗಳನ್ನೆಲ್ಲಾ ತೆರವುಗೊಳಿಸಿದರು. ಕೊಳದ ಸುತ್ತಲಿನ ಆವರಣವನ್ನೆಲ್ಲಾ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಕೊಳ, ಅರಳೀಕಟ್ಟೆ, ಬನ್ನೀಮರ ಹಾಗೂ ಸುತ್ತಲಿನ ಪರಿಸರ ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾದರು.

ಈ ಪ್ರದೇಶದಲ್ಲಿ ಖಾಲಿ ಇದ್ದ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು. ಇದರಿಂದ ಕೊಳದ ಪರಿಸರ ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡಿದರು. ಕಲ್ಯಾಣಿ ಸ್ವಚ್ಛತೆ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘನೆ

ಮಂಡ್ಯ:

ನಗರದ ಕಾಳಿಕಾಂಬ ದೇವಾಲಯ ಮುಂಭಾಗದ ಶ್ರೀಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಶಿವರಾತ್ರಿ ಹಬ್ಬದ ವಿಶೇಷ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸ್ವಚ್ಛತಾ ಸೇವೆ ಕಾರ್ಯಗಳನ್ನು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ವೀಕ್ಷಿಸಿದರು.

ಜಿಲ್ಲಾಡಳಿತ, ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ನಾಯಕ ಸಮಾಜದಿಂದ ಶಿವರಾತ್ರಿ ಹಬ್ಬದ ದಿನದಂದು ಜಾಗರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಅಂಗವಾಗಿ ನಗರಸಭೆ ಆಯುಕ್ತೆ ಪಂಪಶ್ರೀ ನೇತೃತ್ವದಲ್ಲಿ ಸ್ವಚ್ಛತಾ ಸೇವಾ ಕಾರ್ಯ ನಡೆಸಿದರು.

ಇದೇ ವೇಳೆ ಸ್ಥಳಕ್ಕಾಗಮಿಸಿದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರು ಗಜೇಂದ್ರಮೋಕ್ಷ ಕೊಳ, ಯೋಗಮಂಟಪ, ಅಶ್ವತ್ಥಕಟ್ಟೆ ಆವರಣದಲ್ಲಿ ನಡೆದಿರುವ ಸ್ವಚ್ಛತಾ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಎಂ.ಬಿ.ರಮೇಶ್, ರಾಧಾ ರಮೇಶ್, ಮಹೇಂದ್ರನ್, ಕೃಷ್ಣಕುಮಾರ್, ಕೀಲಾರ ಚನ್ನೇಗೌಡ, ಪೂರ್ಣಿಮಾ ಗೊಮಟೇಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ