ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಾದಾಪುರ ಗ್ರಾಮದ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳ ಬಗ್ಗೆ ಪರಿಶೀಲಸಿ ಮಾತನಾಡಿದರು.
ಮಾ.18ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಇದು ಮಕ್ಕಳಿಗೆ ಪರೀಕ್ಷೆ ಭಯ ನಿವಾರಣೆಗೆ ಸಹಕಾರಿಯಾಗಿದೆ. ಮಕ್ಕಳಿಗೆ ಬೇಗ ಮಲಗಿ, ಬೇಗ ಎದ್ದು ಓದುವ, ಪುನರ್ಮನನ ಮಾಡುವಂತೆ ತಿಳಿಸಿದರು.ಸರ್ಕಾರಿ ಶಾಲೆಯಲ್ಲಿ ಓದಿ ಅತೀ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಬದಲು 50 ಸಾವಿರ ರು. ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೇ ಈ ಬಾರಿ ತಾಲೂಕು ಟಾಫರ್ ಆಗಲು ಪೋಷಕರು ಸಹಕರಿಸಿ ಎಂದರು.
ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಪ್ರತಿ ಪರೀಕ್ಷೆ ಕೊಠಡಿಯಲ್ಲಿ ವೆಬ್‌ಕಾಸ್ಟ್ ಕಣ್ಗಾವಲು ಇರಲಿದೆ. ಭಯ ಬಿಡಿ ಸರಾಗವಾಗಿ ತಿಳಿದಿರುವುದನ್ನು ಮೊದಲು ಬರೆಯಿರಿ. ವಿದ್ಯಾರ್ಥಿಗಳ ತೇರ್ಗಡೆಗೆ ಅನುಕೂಲವಾಗಲು ಶೇ.35ರ ಬದಲು ಶೇ.33ಅಂಕಗಳಿಗೆ ಇಳಿಸಲಾಗಿದೆ. ಓದಲು ವೇಳಾಪಟ್ಟಿ ರಚಿಸಿಕೊಂಡು ಕಲಿಕಾ ಮಿತ್ರವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿ ಎಂದರು.
ಓದಿದಷ್ಟು ಪುನರ್ಮನನ ಮಾಡಿದರೆ ಹೆಚ್ಚು ಅಂಕಗಳಿಕೆಗೆ ಸಹಕಾರಿಯಾಗಲಿದೆ. ನಿದ್ರೆಗೆಟ್ಟು ಓದುವುದು, ಖರೀದ ಎಣ್ಣೆ ಪದಾರ್ಥ ಸೇವನೆಗೆ ಕಡಿವಾಣ ಇರಬೇಕು. ಹೆಚ್ಚು ಶುದ್ಧ ನೀರು, ಸಾತ್ಮಿಕ ಆಹಾರ ಸೇವಿಸಿ ಎಂದು ಟಿಫ್ಸ್ ನೀಡಿದರು.ಈ ವೇಳೆ ಸಿಆರ್‌ಪಿ ಆಶಾಲತಾ ಇದ್ದರು.