ಚಿರತೆ ದಾಳಿಗೆ ಮೇಕೆಗಳು, ಸಾಕು ನಾಯಿ ಬಲಿ

KannadaprabhaNewsNetwork |  
Published : May 26, 2026, 01:45 AM IST
25ಕೆಎಂಎನ್ ಡಿ22 | Kannada Prabha

ಸಾರಾಂಶ

ಕ್ಯಾತಘಟ್ಟ ಗ್ರಾಮದಲ್ಲಿ ಅಣ್ಣಾಜಿಯವರ ವರದರಾಜು ಅವರು ತಮ್ಮ ಮನೆಯ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ರಕ್ತ ಹೀರಿ ಮೇಕೆ ಮರಿಗಳನ್ನು ಹೊತ್ತೊಯ್ದಿದೆ.

ಕೆ.ಎಂ.ದೊಡ್ಡಿ:

ಚಿರತೆ ದಾಳಿಯಿಂದ ಎರಡು ಗ್ರಾಮಗಳಲ್ಲಿ ಮೇಕೆಗಳು ಮತ್ತು ಸಾಕು ನಾಯಿ ಬಲಿಯಾಗಿರುವ ಘಟನೆ ಸಮೀಪದ ಕ್ಯಾತಘಟ್ಟ ಹಾಗೂ ಗುರುದೇವರಹಳ್ಳಿ ಗ್ರಾಮಗಳಲ್ಲಿ ನಡೆದಿದೆ.

ಕ್ಯಾತಘಟ್ಟ ಗ್ರಾಮದಲ್ಲಿ ಅಣ್ಣಾಜಿಯವರ ವರದರಾಜು ಅವರು ತಮ್ಮ ಮನೆಯ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ರಕ್ತ ಹೀರಿ ಮೇಕೆ ಮರಿಗಳನ್ನು ಹೊತ್ತೊಯ್ದಿದೆ. ಅದೇ ರೀತಿ ಗುರುದೇವರಹಳ್ಳಿಯ ಜಿ.ಎಂ.ಪ್ರತಾಪ್ ಅವರಿಗೆ ಸೇರಿದ ಸಾಕು ನಾಯಿ ಹಾಗೂ ಬಿಳಿಜೋಗಿ ಮಾದಣ್ಣರ ಮೇಕೆಯನ್ನು ಬಲಿ ಪಡೆದಿದೆ. ಮೇಕೆಗಳನ್ನು ಕಳೆದುಕೊಂಡ ವರದರಾಜು, ಬಿಳಿಜೋಗಿ ಮಾದಣ್ಣರಿಗೆ ಸಾವಿರಾರು ನಷ್ಟ ಸಂಭವಿಸಿದೆ.

ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ಎರಡು ಗ್ರಾಮಸ್ಥರು ಹಾಗೂ ಸುತ್ತಮತ್ತಲ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ. ತಮ್ಮ ಜಮೀನುಗಳಿಗೆ ಹೋಗಲು ಎದುರುವಂತಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಬಂದು ಹೋಗಿರುವ ಚಲನವಲನಗಳನ್ನು ಪರಿಶೀಲಿಸಿ ಗುರುದೇವರಹಳ್ಳಿ ಸಮೀಪ ಬೋನ್ ಇಟ್ಟು ಸೆರೆಗೆ ಮಂದಾಗಿದ್ದಾರೆ.

25ಕೆಎಂಎನ್ ಡಿ22

ಗುರುದೇವರಹಳ್ಳಿಯಲ್ಲಿ ಚಿರತೆ ಸೆರೆಗೆ ಬೋನ್ ಇಟ್ಟಿರುವ ಅರಣ್ಯಾಧಿಕಾರಿಗಳು.ಜಿಂಕೆ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಮಳವಳ್ಳಿ:

ಜಿಂಕೆಯನ್ನು ನುಂಗಿ ಮುಂದೆ ಹೋಗಲಾರದೆ ತಾಲೂಕಿನ ನೆಟ್ಕಲ್ ಗ್ರಾಮದ ಪೈಪ್ ಲೈನ್ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಸೆರೆ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಡಲಾಯಿತು.

ತಾಲೂಕಿನ ನೆಟ್ಕಲ್ ಬಳಿಯ ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಮಾಡುವ ಪೈಪ್ ಲೈನ್ ಬಳಿ ಜಿಂಕೆಯನ್ನು ನುಂಗಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವು ಮುಂದೆ ಹೋಗಲಾರದೆ ಅಲ್ಲಿಯೇ ಇತ್ತು.

ಸ್ಥಳೀಯರ ಮಾಹಿತಿಯಿಂದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಉರಗ ತಜ್ಞರಿಂದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದರು. 10 ಅಡಿ ಉದ್ಧ 30 ಕೆಜಿಗೂ ಹೆಚ್ಚು ತೂಕವಿದ್ದ ಭಾರೀ ಗಾತ್ರದ ಹೆಬ್ಬಾವವನ್ನು ಅರಣ್ಯ ಇಲಾಖೆ ಸಹಕಾರದೊಂದಿಗೆ ಸೆರೆ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ: ಮಧು
ಬಾಗೇಪಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ