ಮುಗುಳವಳ್ಳಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಬೀಳ್ಕೊಡುಗೆ
ಸಾರ್ವಜನಿಕ ಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಸಿಕ್ಕಿರುವ ಅಧಿಕಾರವಧಿಯಲ್ಲಿ ದೇವರು ಮೆಚ್ಚುವ ಹಾಗೆ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ಸಂತಸ ತಂದಿದೆ ಎಂದು ಮುಗುಳವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಘುನಂದನ್ ತಿಳಿಸಿದರು.ಮಂಗಳವಾರ ಮುಗುಳವಳ್ಳಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಕೆಲವು ಅನುಭವಗಳು ಜೀವನದಲ್ಲಿ ಪಾಠ ಕಲಿಸಿವೆ. ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಸಲಹೆ ಸಹಕಾರದೊಂದಿಗೆ ಸಾರ್ವಜನಿಕ ಸೇವೆಯಲ್ಲಿ ಯಶಸ್ವಿಯಾಗಲು ಪೂರಕವಾಗಿತ್ತು ಎಂದು ಹೇಳಿದರು.ಸಾರ್ವಜನಿಕರು ಮತ್ತು ಗ್ರಾಮಸ್ಥರ ಕೆಲವು ಕೆಲಸ ಕಾರ್ಯಗಳು ಆಗದಿದ್ದಾಗ ವಿರೋಧ ವ್ಯಕ್ತಪಡಿಸುವುದು ಸಹಜ. ಆದರೆ, ಈ ಪಂಚಾಯಿತಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಗ್ರಾಪಂ ಚುನಾವಣೆಯಲ್ಲಿ ಚುನಾಯಿತರಾಗಿ ಅಧ್ಯಕ್ಷರಾಗಿ ಅಧಿಕಾರ ನಡೆಸಲು ಎಲ್ಲರ ಸಹಕಾರ, ವಿಶ್ವಾಸ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ಪಂಚಾಯಿತಿ ಎಲ್ಲಾ 9 ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ ಎಂದರು. ಮುಗುಳವಳ್ಳಿ ಗ್ರಾಪಂ ಮತ್ತೊಮ್ಮೆಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಸಂತೋಷ ತಂದಿದೆ. ಇದು ಉತ್ತಮ ಸೇವೆ ಸಲ್ಲಿಸಿರುವುದೇ ನಿದರ್ಶನ ಎಂದರು.
ಪಂಚಾಯಿತಿಯ ಎಲ್ಲಾ ಅಧಿಕಾರಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಎನ್‌ಆರ್‌ಇಜಿಎ ತಂಡ, ಆಶಾಕಾರ್ಯಕರ್ತೆಯರು, ಸಹಕಾರ ಸ್ಮರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಾ ಮಾತನಾಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಶೃತಿ ಉಮೇಶ್, ಉಪಾಧ್ಯಕ್ಷ ಮಲ್ಲೇಶಪ್ಪ, ಸದಸ್ಯರಾದ ವನಿತಾ, ಸವಿತಾ , ಭಾಗ್ಯ ನಾಗರಾಜ್, ಕಲಾವತಿ, ಶೇಖರ್, ಉಮೇಶ್, ಉಪಸ್ಥಿತರಿದ್ದರು.ಫೋಟೋ
ಮುಗುಳವಳ್ಳಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳನ್ನು ಮಂಗಳವಾರ ಬೀಳ್ಕೊಡಿಗೆ ನೀಡಿ ಗೌರವಿಸಲಾಯಿತು.