ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶಗಳನ್ನು ಸಮಾಜದಲ್ಲಿ ಎಲ್ಲರೂ ಅಳವಡಿಸಿಕೊಂಡಲ್ಲಿ ಬಸವ ಜಯಂತಿ ಅರ್ಥಪೂರ್ಣವೆನಿಸುತ್ತದೆ ಎಂದರು.
ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಸಮಾಜದ ಅಭಿವೃದ್ಧಿಗಾಗಿ ಹೋರಾಡಿದ್ದರು. ಸಮಾಜ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಸವಣ್ಣ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು. ಅವರ ಜೀವನವು ಸಮಾಜಕ್ಕೆ ಆದರ್ಶಪ್ರಾಯ ಎಂದು ಅವರು ತಿಳಿಸಿದರು.ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್, ಡಾ. ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷ ಗೌರಿಶಂಕರನಗರದ ಶಿವಕುಮಾರ್,
ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಮುಖಂಡರಾದ ಕಂಸಾಳೆ ರವಿ, ವಿಶ್ವ, ಎಸ್.ಎನ್. ರಾಜೇಶ್, ಸಿದ್ದರಾಮ, ಲೋಕೇಶ್, ಮಂಜು, ಕುಮಾರ್, ಮಂಜುನಾಥ್, ಮಹಾದೇವ್ ಮೊದಲಾದವರು ಇದ್ದರು.