ಗೋಸಬಾಳ ಪ್ರಾಮಾಣಿಕ ಸೇವೆ ಸದಾ ಸ್ಮರಣೀಯ

KannadaprabhaNewsNetwork |  
Published : Apr 01, 2024, 12:47 AM IST
(ಪೊಟೋ 31 ಬಿಕೆಟಿ1, ಬಾಗಲಕೊಟೆ ಪಟ್ಟಣದಲ್ಲಿ ನಡೆದ ಕೆ.ಬಿ.ಗೋಸಬಾಳ ಅವರ ನಿವೃತ್ತ ಕಾರ್ಯಕ್ರಮದಲ್ಲಿ ಕೆ.ಬಿ.ಗೋಸಬಾಳ ದಂಪತಿಗಳಿಗೆ ಸನ್ಮಾನಿಸಿಲಾಯಿತು) | Kannada Prabha

ಸಾರಾಂಶ

ಬಾಗಲಕೋಟೆ: ಬಾಗಲಕೋಟೆ ಪಟ್ಟಣದ ಕೆ.ಬಿ.ಗೋಸಬಾಳ ಅವರು ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸೇವೆ ಉನ್ನತ ಶಿಕ್ಷಣ ರಂಗದಲ್ಲಿ ಮಾದರಿಯಾಗಿದೆ ಎಂದು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಪಟ್ಟಣದ ಕೆ.ಬಿ.ಗೋಸಬಾಳ ಅವರು ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸೇವೆ ಉನ್ನತ ಶಿಕ್ಷಣ ರಂಗದಲ್ಲಿ ಮಾದರಿಯಾಗಿದೆ ಎಂದು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.ಅವರು ಬಾಗಲಕೊಟೆ ಪಟ್ಟಣದಲ್ಲಿ ನಡೆದ ಕೆ.ಬಿ.ಗೋಸಬಾಳ ಅವರ ನಿವೃತ್ತ ಕಾರ್ಯಕ್ರಮದಲ್ಲಿ ಮಾತನಾಡಿ, ಗೋಸಬಾಳ ಅವರು ಬೀಳಗಿ, ನವನಗರ ಬಾಗಲಕೋಟೆ ಮತ್ತು ರಾಂಪೂರ ಸ,ಪ್ರ.ದ ಕಾಲೇಜುಗಳಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಇಂದು ಅವರು ರಾಂಪೂರ ಸಪ್ರದ ಕಾಲೇಜಿನ ಮ್ಯಾನೇಜರ್ ವೃತ್ತಿಯ ಸೇವೆಯಿಂದ ನಿವೃತ್ತರಾಗಿದ್ದಾರೆ. ಕೆ.ಬಿ.ಗೋಸಬಾಳ ಅವರು ಸರಳ ಸಜ್ಜನದ ವ್ಯಕ್ತಿತ್ವ ಹೊಂದಿದ್ದು, ಅವರ ಪ್ರಾಮಾಣಿಕ ಸೇವೆ ಸದಾ ಸ್ಮರಣೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ. ಅಜಿತ್ ನಾಗರಾಳೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಜಿ.ಹಿರೇಮಠ ಅವರು ಮಾತನಾಡಿ, ಗೋಸಬಾಳ ಅವರ ವೃತ್ತಿ ಬದುಕು ಇತರರಿಗೂ ಸ್ಪೂರ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಧುಗಳು, ಹಿತೈಸಿಗಳು ಕೆ.ಬಿ.ಗೋಸಬಾಳ ದಂಪತಿಗಳವರಿಗೆ ಸಹೃದಯತೆಯಿಂದ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಪ್ರೊ.ಸವಿತಾ ಪಟ್ಟಣಶೆಟ್ಟಿ, ಎಂ.ಎಸ್.ಇಂಜಗನೇರಿ, ತಾಯಕ್ಕ ಚಲವಾದಿ, ಗುಡ್ಡದ, ಜಯಶ್ರೀ ನೀಡಗುಂದಿ, ರೂಪಾ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!