ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಗವಾನ್ ಸತ್ಯ ಸಾಯಿ ಬಾಬಾ ಅವರ ‘ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ. ಸದಾ ಪ್ರೀತಿಸಿ, ಎಂದಿಗೂ ನೋವು ಕೊಡಬೇಡಿ’ ಎಂಬ ಸಂದೇಶಗಳು ಜಗತ್ತನ್ನು ಬೆಳಗುತ್ತಿವೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅನ್ನ, ಆರೋಗ್ಯ ಮತ್ತು ಅಕ್ಷರ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಮಾಡುತ್ತಿದ್ದಾರೆ. ಉಚಿತವಾಗಿ ಸೇವೆ ಒದಗಿಸುವುದಷ್ಟೇ ಅಲ್ಲ, ಫಲಾನುಭವಿಗಳನ್ನು ಗೌರವದಿಂದ ನಡೆಸಿಕೊಳ್ಳುವುದು ಈ ಸಂಸ್ಥೆಯ ವಿಶೇಷ ಎಂದು ಬಣ್ಣಿಸಿದರು.ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಆಶ್ರಮದಲ್ಲಿ ಜಲಸಂರಕ್ಷಣೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ನಿರಂತರ ಪೂರೈಕೆಗಾಗಿ ಮನವಿ ಮಾಡಿದ್ದೆವು. ಸ್ಥಳೀಯ ಶಾಸಕರಾದ ಪ್ರದೀಪ್ ಈಶ್ವರ್ ಅವರೊಂದಿಗೆ ನವೆಂಬರ್ 18 ರಂದು ಜಕ್ಕಲಮೊಡಗು ಜಲಾಶಯದಿಂದ ಆಶ್ರಮಕ್ಕೆ ನೀರು ಕೊಡುವ ಯೋಜನೆಯ ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಮಾಜದ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಸರ್ಕಾರವು ಈ ಮೂಲಕ ಸಹಕಾರ ನೀಡುತ್ತಿದೆ ಎಂದು ಹೇಳಿದರು.ಜಲಸಂರಕ್ಷಣೆಗೆ ಯತ್ನ:
ನಮ್ಮ ಆಶ್ರಮದಲ್ಲಿ ಕೊಳವೆಬಾವಿಗಳ ಪುನಶ್ಚೇತನ ಸೇರಿದಂತೆ ಜಲಸಂರಕ್ಷಣೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ದಿನದಿಂದ ದಿನಕ್ಕೆ ಸೇವಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯು ಉದ್ಘಾಟನೆಯಾದ ನಂತರ ನೀರು, ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಈಗ ಇದು ಜಾಗತಿಕ ಗ್ರಾಮವಾಗಿದೆ. ವಿಶ್ವದ ಎಲ್ಲ ದೇಶಗಳಿಂದ ಅತಿಥಿಗಳು ಇಲ್ಲಿಗೆ ಬರುತ್ತಿದ್ದಾರೆ ಈ ಹಂತದಲ್ಲಿ ಸರ್ಕಾರವು ನೀರು ಪೂರೈಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು. ಈ ಪ್ರದೇಶದಲ್ಲಿ ದೇವರ ದಯೆಯಿಂದ ಉತ್ತಮ ಮಳೆಯಾಗುತ್ತಿದೆ. ಇಲ್ಲಿ ಸದಾ ಉತ್ತಮ ಮಳೆಯಾಗಲಿ. ಜಕ್ಕಲಮೊಡಗು ಜಲಾಶಯದಲ್ಲಿ ಸದಾ ನೀರು ತುಂಬಿರಲಿ. ಈ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ. ದೇವರಿಗೆ ನಾವು ಸ್ವಲ್ಪವೇ ಕೊಟ್ಟರು ಅವನು ಹಲವು ಪಟ್ಟು ಹೆಚ್ಚಿಸಿ ಹಿಂದಿರುಗಿಸುತ್ತಾನೆ. ನೀರು ಪೂರೈಕೆಯ ಮೂಲಕ ಸರ್ಕಾರವು ಆಶ್ರಮಕ್ಕೆ ನೆರವಾಗುತ್ತಿದೆ. ದೇವರು ಇಡೀ ರಾಜ್ಯಕ್ಕೆ ಸಮೃದ್ಧಿ ಕೊಡಲಿ ಎಂದು ಪ್ರಾರ್ಥಿಸಿದರು.ಜಾಗತಿಕ ನಾಯಕತ್ವ ಪುರಸ್ಕಾರ ಪವರ್ ಮೆಕ್ ಪ್ರಾಜೆಕ್ಟ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಬಾಬು ಅವರಿಗೆ ಮತ್ತು ಅರ್ಜೆಂಟೈನಾ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕರೀನಾ ಅಲೆಜಂಡ್ರಾ ಸರೊ ಅವರಿಗೆ ''''''''ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ''''''''ವನ್ನು ನೀಡಿ ಗೌರವಿಸಲಾಯಿತು. ಸಮುದಾಯ ಆರೋಗ್ಯ ಸೇವೆ ಕುರಿತು ಸಹಾಯಕ ಪ್ರಾಧ್ಯಾಪಕ ಡಾ ಎಂ.ಎಸ್.ಫಣೀಂದ್ರ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ ಅರವಿಂದ ಜತ್ತಿ ಮಾತನಾಡಿದರು.