ದಾಬಸ್‍ಪೇಟೆ: ನಮ್ಮ ಗ್ರಾಪಂ ಮಕ್ಕಳ ಹಕ್ಕುಗಳಿಗಾಗಿ ಸದಾಕಾಲ ಶ್ರಮಿಸುತ್ತದೆ. ಕಳೆದ ಸಾಲಿನ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಹೇಳಿಕೊಂಡಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇಂದಿನ ಸಭೆಯಲ್ಲಿ ಮಕ್ಕಳು ಹೇಳಿಕೊಳ್ಳುವ ಸಮಸ್ಯೆಗಳನ್ನೂ ಪರಿಹರಿಸಲಾಗುವುದು ಎಂದು ಪಿಡಿಒ ಗೀತಾಮಣಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಮಕ್ಕಳ ಭವಿಷ್ಯ ಕೇವಲ ಶಾಲೆಯ ಹೊಣೆಯಷ್ಟೇ ಅಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮಕ್ಕಳ ವಿಶೇಷ ಗ್ರಾಮಸಭೆ ಸಹಕಾರಿಯಾಗಿದೆ. ಮಕ್ಕಳಿಗೆ ತಮ್ಮ ಹಕ್ಕು, ಅಗತ್ಯ ಸೌಲಭ್ಯಗಳನ್ನು ಕೇಳುವ ಮುಕ್ತ ವಾತಾವರಣ ಇರಬೇಕು. ಇದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ. ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು ಎಂದರು.
ಕಾನೂನು ಅರಿವು: ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಎಎಸ್‍ಐ ನಾರಾಯಣರಾವ್ ಮಕ್ಕಳಿಗೆ ಬಾಲ್ಯವಿವಾಹ, ಪೋಕ್ಸೋ, ಮಕ್ಕಳ ಹಕ್ಕುಗಳು, ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಕಳ್ಳ ಸಾಗಾಣಿಕೆ, ಸಾರಿಗೆ ನಿಯಮ ಪಾಲನೆಗಳ ಬಗ್ಗೆ ಕಾನೂನು ಅರಿವು ಮೂಡಿಸಿದರು.ಆಟದ ಮೈದಾನಕ್ಕೆ ದಾನಿಗಳು ಜಾಗ ನೀಡಿ: ಅಲಾನಾಯನಕಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಹೊನ್ನಕೃಷ್ಣ ಮಾತನಾಡಿ, ನಮ್ಮ ಶಾಲೆ, ತೋಟನಹಳ್ಳಿ ಹಾಗೂ ಹನುಮಂತೇಗೌಡನಪಾಳ್ಯದ ಶಾಲೆಗಳಲ್ಲಿ ಆಟದ ಮೈದಾನವಿಲ್ಲ ಎಂದಾಗ ತಕ್ಷಣ ಪ್ರತಿಕ್ರಿಯಿಸಿದ ಪಿಡಿಒ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಆಟದ ಮೈದಾನಕ್ಕೆ ಜಾಗವಿಲ್ಲ ಕಂದಾಯ ಇಲಾಖೆಗೆ ಪತ್ರ ಬರೆಯಲಾಗುವುದು, ಇಲ್ಲವೇ ಯಾರಾದರೂ ದಾನಿಗಳು ಆಟದ ಮೈದಾನಕ್ಕೆ ಜಾಗ ನೀಡಿದರೆ ಸರ್ಕಾರಿ ಶಾಲಾ ಮಕ್ಕಳು ಆಟವಾಡಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ, ಸದಸ್ಯರಾದ ಹರೀಶ್, ಗಿರೀಶ್, ರಂಗೇಗೌಡ, ಎಎಸ್‍ಎ ನಾರಾಯಣರಾವ್, ಸಿಬ್ಬಂದಿ ರಘು, ಸಿಆರ್‌ಪಿ ಹನುಮೇಗೌಡ, ಗ್ರಾಪಂ ಸಿಬ್ಬಂದಿ ಸುಜಾತ, ಶಂಕರ್, ಹರೀಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪೋಟೋ 2 :
ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯಿತಿ ವತಿಯಿಂದ ನರಸಾಪುರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ನರಸಿಂಹಮೂರ್ತಿ, ಪಿಡಿಒ ಗೀತಾಮಣಿ ಉದ್ಘಾಟಿಸಿದರು.