ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್ ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ- ಸಮೇತಿ (ದಕ್ಷಿಣ), ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಸಿಬ್ಬಂದಿಗೆ ಆಗಸ್ಟ್ 2025 ರಿಂದ ಅಕ್ಟೋಬರ್ ವರೆಗೆ 3 ತಂಡಗಳಲ್ಲಿ ಒಟ್ಟು 90 ಶಿಬಿರಾರ್ಥಿಗಳಿಗೆ ಸಿಬ್ಬಂದಿ ತರಬೇತಿ ಘಟಕದ ಸರ್ಟಿಫಿಕೇಟ್ ಕೋರ್ಸ್ (ಸಿಸಿಐಎನ್‌ಎಂ) ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಡೆದ ಸಹಕಾರ ಸಿಬ್ಬಂದಿ ವರ್ಗದವರು ಟೆಕ್ನೊ ಏಜೆಂಟ್ ರಂತೆ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳಿಗೆ ರಸಗೊಬ್ಬರ, ಬಿತ್ತನೆ ಬೀಜ ಖರೀದಿಸಲು ಬಂದ ರೈತರೊಂದಿಗೆ ವೈಜ್ಞಾನಿಕವಾದ ಮಾಹಿತಿ ನೀಡಬೇಕು. ನ್ಯಾನೋ ರಸಗೊಬ್ಬರಗಳು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಕುರಿತು ರೈತರಿಗೆ ಮಾಹಿತಿ ನೀಡಿ ಅವುಗಳನ ಉಪಯೋಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಕೃಷಿ ವಿವಿಯ ಸಂಯೋಜನಾಧಿಕಾರಿ ಸಮೇತಿ (ದಕ್ಷಿಣ) ಹಾಗೂ ರಾಜ್ಯ ನೋಡಲ್ ಅಧಿಕಾರಿ (ದೇಸಿ) ಡಾ.ಆರ್. ನಾರಾಯಣರೆಡ್ಡಿ ಮಾತನಾಡಿ, ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಅರೆಕಾಲಿಕ ಕೃಷಿ ವಿಸ್ತರಣಾಧಿಕಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಉಬಂಧಕಿ ಜ್ಯೋತಿ ಅರಸ್ ಮತಾನಾಡಿ, ಸಹಕಾರ ಸಿಬ್ಬಂದಿ ವರ್ಗದವರು ತರಬೇತಿಯಲ್ಲಿ ಪಡೆದಿರುವ ಮಾಹಿತಿಯಲ್ಲದೇ, ಕಾಲ ಕಾಲಕ್ಕೆ ಕೃಷಿ ವಿಜ್ಞಾನಿಗಳನ್ನು ಸಂರ್ಪಕಿಸಿ ಆಯಾಕಾಲಕ್ಕೆ ಹೊಸದಾಗಿ ಮಾರುಕಟ್ಟೆಗೆ ಬರುವ ಸುಧಾರಿತ ಬಿತ್ತನೆ ಬೀಜಗಳು ಹಾಗು ರಸಗೊಬ್ಬರಗಳ ಮಾಹಿತಿಯನ್ನು ರೈತರಿಗೆ ತಿಳಿಸಿಬೇಕು ಎಂದರು.
ಯಾವುದೇ ಸಮಯದಲ್ಲಿ ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಕೆವಿಕೆಯವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.