ತರೀಕೆರೆಯಲ್ಲಿ ಗುರುಪೂರ್ಣಿಮೆಯ ಗುರುವಂದನಾ ಕಾರ್ಯಕ್ರಮ
ಹಿಂದೂ ಧರ್ಮದಲ್ಲಿ ತಂದೆ ತಾಯಿ ಬಳಿಕ ಗೌರವದ ಸ್ಥಾನ ನೀಡಿರುವುದು ಗುರುಗಳಿಗೆ. ತಂದೆ, ತಾಯಿ ಹಾಗೂ ಜೀವನ ರೂಪಿಸಿದ ಗುರುವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಶ್ರೀ ಸಪ್ತಗಿರಿ ಭಜನಾ ಮಂಡಳಿ ಸದಸ್ಯೆ ಮಂಜುಳಾ ಹೇಳಿದರು.
ಪಟ್ಟಣದ ವಿನಾಯಕ ನಗರದ ಟಿ.ಆರ್. ಸೋಮಶೇಖರಯ್ಯ ನವರ ಮನೆ ಅಂಗಳದಲ್ಲಿ ಶ್ರೀಸಪ್ತಗಿರಿ, ಶ್ರೀಶೇಷಗಿರಿ ಭಜನಾ ಮಂಡಳಿ ಸದಸ್ಯರು ಏರ್ಪಡಿಸಿದ್ದ ಗುರು ಪೂರ್ಣಿಮೆಯ ಗುರುವಂದನೆ ಕಾರ್ಯಕ್ರಮದಲ್ಲಿ ಗುರು ಲೀಲಾ ಸೋಮಶೇಖರಯ್ಯ ಅವರಿಗೆ ಮಡ್ಲಕ್ಕಿ ನೀಡಿ ಗೌರವಿಸಿ ಮಾತನಾಡಿದರು.ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಜನೆ ಕಲಿಕೆ ಪ್ರಾರಂಭವಾದಾಗ ನಮಗೆ ಭಜನೆ ಏನು ಎಂದರೆ ಗೊತ್ತಿರಲಿಲ್ಲ. ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮದ ಪ್ರತಿ ಸಾಲನ್ನು ಬಿಡಿ ಬಿಡಿಯಾಗಿ ಒಂದಲ್ಲ ಹತ್ತು ಬಾರಿ ಹೇಳಿಕೊಟ್ಟು ತಿದ್ದಿ ನಮಗೆ ಮನದಟ್ಟು ಮಾಡಿದ ಗುರು. ಗುರುಗಳಿಗಿಂತ ತಾಯಿ ತರಹ ಭಜನೆ ಕಲಿಸಿಕೊಟ್ಟಿದ್ದಾರೆ.ಇವರಿಗೆ ಈ ದಿನ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಅಶ್ವಿನಿ, ಪ್ರಮೀಳಾ, ಶ್ವೇತ ಸಾವಿತ್ರಿ ,ನಾಗಲಕ್ಷ್ಮಿ, ರೇಖಾ, ಮಾಲಾ, ಜ್ಯೋತಿ, ರೂಪ, ಸೌಮ್ಯ, ಶಂಕ್ರಮ್ಮ, ಸರೋಜಮ್ಮ, ಗೀತಾ, ಕವಿತ, ನಾಗರತ್ನ, ಲೋಕಾಮಾತೆ, ಸವಿತಾ,, ಶೋಭಾ, ಸುವರ್ಣಮ್ಮ, ಸವಿತಾ ಇತರರು ಇದ್ದರು.
31ಕೆಟಿಆರ್.ಕೆ.3ಃ ತರೀಕೆರೆಯಲ್ಲಿ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಲೀಲಾಸೋಮಶೇಖರಯ್ಯ ಅವರನ್ನು ಗೌರವಿಸಲಾಯಿತು. ಶ್ರೀ ಸಪ್ತಗಿರಿ ಭಜನಾ ಮಂಡಳಿ ಸದಸ್ಯೆ ಮಂಜುಳಾ ಮತ್ತಿತರರು ಇದ್ದರು.