ಶಿವಶರಣ ಹಡಪದ ಅಪ್ಪಣ್ಣನವರ ವಚನಗಳ ಬೆಳಕು ಎಂದಿಗೂ ಆರದು. ಸಾಮಾನ್ಯರು ಆಚರಿಸುವ ಜನ್ಮದಿನಕ್ಕೂ ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾತ್ಮರ ಜಯಂತಿಗೂ ಅಂತರವಿದೆ.
ಡಂಬಳ: ಸಮಾನತೆ, ಮಾನವೀಯತೆ ಹಾಗೂ ಕಾಯಕದ ಸಂದೇಶ ಸಮಾಜಕ್ಕೆ ಸಾರಿದ 12ನೇ ಶತಮಾನದ ಮಹಾನ್ ಶರಣ ಹಡಪದ ಅಪ್ಪಣ್ಣ ಅವರ ಜೀವನ ಆದರ್ಶ ಇಂದಿನ ಸಮಾಜಕ್ಕೂ ದಾರಿದೀಪವಾಗಿದ್ದು, ಅವರ ತತ್ವ-ಸಿದ್ಧಾಂತ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪತಹಸೀಲ್ದಾರ್ ಎಸ್.ಎಸ್. ಬಿಚಾಲಿ ಹೇಳಿದರು.
ಡಂಬಳ ಗ್ರಾಮದ ಉಪತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನಿಜಸುಖ ಶರಣ ಹಡಪದ ಅಪ್ಪಣ್ಣನವರ ಜಯಂತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಶರಣ ಹಡಪದ ಅಪ್ಪಣ್ಣನವರ ವಚನಗಳ ಬೆಳಕು ಎಂದಿಗೂ ಆರದು. ಸಾಮಾನ್ಯರು ಆಚರಿಸುವ ಜನ್ಮದಿನಕ್ಕೂ ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾತ್ಮರ ಜಯಂತಿಗೂ ಅಂತರವಿದೆ. ಅಪ್ಪಣ್ಣನವರು ಸಮಾಜದ ಮನಸ್ಸಿನಲ್ಲಿಂದೆಗೂ ಆರದ ವಚನಗಳೆಂಬ ಜ್ಯೋತಿ ಬೆಳಗಿದ್ದಾರೆ. ಅಪ್ಪಣ್ಣನವರು ಕೇವಲ ಶರೀರದ ಅನಗತ್ಯ ಕೇಶ (ಕೂದಲು) ಕತ್ತರಿಸುವ ಕಾಯಕ ಮಾಡಲಿಲ್ಲ. ಮಾನವನ ತಲೆಯೊಳಗಿನ ಅಹಂಕಾರ, ಕ್ಲೇಶ ಹಾಗೂ ವಿಕಾರ ಕಳೆಯುವ ಮಹತ್ಕಾರ್ಯ ಮಾಡಿದರು ಎಂದರು.
ಕಂದಾಯ ಅಧಿಕಾರಿ ಪ್ರಭು ಬಾಗಲಿ ಮಾತನಾಡಿ, ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಬಸವಣ್ಣನವರ ಆಪ್ತ ಸಹಚರರಾಗಿ ಕಾರ್ಯನಿರ್ವಹಿಸಿದರು. ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯ ಬಿತ್ತುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಅಶೋಕ ಹಡಪದ ಮಾತನಾಡಿ, ಬಸವಣ್ಣನವರು ಜಾತಿ-ಪಂಗಡಗಳ ಭೇದಭಾವ ತಿರಸ್ಕರಿಸಿ, ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡದ್ದು, ಸಾಮಾಜಿಕ ಸಮಾನತೆಯ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.
ಕಂದಾಯ ಇಲಾಖೆಯ ಸಿಬ್ಬಂದಿ ಎಂ.ಎಂ. ವಿಭೂತಿ, ಹನುಮಂತ ಗುಜ್ಜಲ್, ಸಾಗರ ಚಿತ್ರಗಾರ, ಗ್ರಾಮಸ್ಥರಾದ ಮೌನೇಶ ಹಡಪದ, ಸಂತೋಷ ಹಡಪದ, ನಿಂಗಪ್ಪ ಹಡಪದ, ಬೂದೀಶ ಹಡಪದ, ಕಿರಣ ಹಡಪದ, ಮಂಜುನಾಥ ಹಡಪದ, ಶಂಕ್ರಪ್ಪ ಹಡಪದ ಇದ್ದರು.ಇಂದು ತೋಂಟದಾರ್ಯ ಮಠದಲ್ಲಿ 2809ನೇ ಶಿವಾನುಭವ
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2809ನೇ ಶಿವಾನುಭವ ಕಾರ್ಯಕ್ರಮ ಮಾ. 3ರಂದು ಸಂಜೆ 7ಕ್ಕೆ ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗಲಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಸಮ್ಮುಖವನ್ನು ಕಿತ್ತಲಿ ಸಿದ್ಧರಾಮೇಶ್ವರಮಠದ ಅಭಿನವ ಸಿದ್ಧರಾಮ ಸ್ವಾಮಿಗಳು ವಹಿಸುವರು. ಶರಣ ಹಡಪ ಅಪ್ಪಣ್ಣನವರ ಕುರಿತು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವಿ. ಪ್ರಭು ಅವರು ಉಪನ್ಯಾಸ ನೀಡುವರು. ಗೌರವ ಅತಿಥಿಗಳಾಗಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮೋಹನ ಚಂದಪ್ಪನವರ ಭಾಗವಹಿಸುವರು.ವಚನ ಸಂಗೀತ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಪ್ರಣಾಲಿ ಬಾಹುಬಲಿ ಜೈನರ, ವಚನ ಚಿಂತನ ಗೌತಮಿ ಹೊಸೂರು ಮಾಡಲಿದ್ದಾರೆ. ದಾಸೋಹ ಸೇವೆಯನ್ನು ಲಿಂ. ಈಶ್ವರಪ್ಪ ರಾಚಪ್ಪ ಮಾನ್ವಿ ಅವರ ಸ್ಮರಣಾರ್ಥ ರಾಜೇಶ ಈಶ್ವರಪ್ಪ ಮಾನ್ವಿ ಹಾಗೂ ಪರಿವಾರ ಮತ್ತು ವಿಜಯಕುಮಾರ ಶೆಟ್ಟರ ಹಾಗೂ ಪರಿವಾರ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.