ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿನಂದನಾ ಸಮಿತಿ ವತಿಯಿಂದ ಇಬ್ಬರೂ ಸಾಧಕರಿಗೆ ಅಭಿನಂದನಾ ಸಮಾರಂಭ ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪಪ್ರಜ್ವಲನ ನಡೆಸಿ ಆಶೀರ್ವದಿಸಿ, ಹರಿಕೃಷ್ಣ ಪುನರೂರು ಹಾಗೂ ರಮಾನಾಥ ರೈ ಇಬ್ಬರೂ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡವರು. ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕಿದ ಈರ್ವರು, ಜಾತ್ಯತೀತವಾಗಿ, ಪಕ್ಷತೀತವಾಗಿ ಅಭಿನಂದಿಸಲ್ಪಟ್ಟಿರುವುದು ಸಂತೋಷ ನೀಡಿದೆ ಎಂದರು.
ಬಡಗಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಗೌರವಾಧ್ಯಕ್ಷರಾದ ರಘುನಾಥ ಸೋಮಯಾಜಿ, ಶಿವಪ್ರಸಾದ್ ಅಜಿಲರು ಅಳದಂಗಡಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಕೋಶಾಧಿಕಾರಿ ರಾಮಗಣೇಶ್ ಪ್ರಭು ಕೈಕುಂಜೆ ಉಪಸ್ಥಿತರಿದ್ದರು.
ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಅಭಿನಂದನ ಗ್ರಂಥ ಸಮಿತಿ ಸಂಪಾದಕ ಪ್ರೊ.ರಾಜಮಣಿ ರಾಮಕುಂಜ ಅನಿಸಿಕೆ ವ್ಯಕ್ತಪಡಿಸಿದರು. ಮಹಾಲಿಂಗ ಭಟ್, ಜಯರಾಮ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.ಸಂಚಾಲಕ ಪ್ರಕಾಶ್ ಕಾರಂತ್ ನರಿಕೊಂಬು, ಸಹ ಸಂಚಾಲಕ ಸುಧಾಕರ ಆಚಾರ್ಯ ಮಾರ್ನಬೈಲು, ಉಪಾಧ್ಯಕ್ಷ ಸುನೀಲ್ ಬಿ., ಪ್ರವೀಣ್ ಜಕ್ರಿಬೆಟ್ಟು, ವಿಶ್ವನಾಥ ಬೆಳ್ಚಾಡ ಕೂಡೂರು, ಸ್ವಾಗತ ಸಮಿತಿಯ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಆರ್ಥಿಕ ಸಮಿತಿ ಉಮೇಶ್ ನೆಲ್ಲಿಗುಡ್ಡೆ, ಗೌರವ ಸಲಹೆಗಾರರಾದ ಭುವನೇಶ್ ಪಚ್ಚಿನಡ್ಕ, ರಮೇಶ್ ನಾಯಕ್ ರಾಯಿ ಸಹಕರಿಸಿದರು.