ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಹಟ್ಟಿ ತಿಪ್ಪೇಶ: ಜಡೆಕುಂಟೆ ಮಂಜುನಾಥ್

KannadaprabhaNewsNetwork |  
Published : Aug 20, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಮಧ್ಯ ಕರ್ನಾಟಕದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯವರ ಮಹಿಮೆ ಅಪಾರ. ಇವರ ಜನ್ಮ ನಿಖರವಾಗಿಲ್ಲ. ಸಮಾಜದಲ್ಲಿನ ಅಸಮಾನತೆ ಅಸ್ಪೃಶ್ಯತೆ ದಬ್ಬಾಳಿಕೆ ವಿರುದ್ಧ ಹೋರಾಡಿದ ಮಹಾ ಪುರುಷ ಅವರೆಂದು ಪತ್ರಕರ್ತ ಹಾಗೂ ಕತೆಗಾರ ಜಡೆಕುಂಟೆ ಮಂಜುನಾಥ್ ಅಭಿಪ್ರಾಯಪಟ್ಟರು.

-ತಿಪ್ಪೇರುದ್ರ ಸ್ವಾಮಿ ಮಹಿಮೆ

-ಕತೆಗಾರ ಜಡೆಕುಂಟೆ ಮಂಜುನಾಥ್ ಅಭಿಮತ । ಅನುಭಾವ ಶ್ರಾವಣ ಶರಣರ ಚಿಂತನ ಮಾಲಿಕೆ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಧ್ಯ ಕರ್ನಾಟಕದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯವರ ಮಹಿಮೆ ಅಪಾರ. ಇವರ ಜನ್ಮ ನಿಖರವಾಗಿಲ್ಲ. ಸಮಾಜದಲ್ಲಿನ ಅಸಮಾನತೆ ಅಸ್ಪೃಶ್ಯತೆ ದಬ್ಬಾಳಿಕೆ ವಿರುದ್ಧ ಹೋರಾಡಿದ ಮಹಾ ಪುರುಷ ಅವರೆಂದು ಪತ್ರಕರ್ತ ಹಾಗೂ ಕತೆಗಾರ ಜಡೆಕುಂಟೆ ಮಂಜುನಾಥ್ ಅಭಿಪ್ರಾಯಪಟ್ಟರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಏರ್ಪಡಿಸಿರುವ ಅನುಭಾವ ಶ್ರಾವಣ, ಶರಣ ಚಿಂತನ ಮಾಲಿಕೆಯ ಐದನೇ ದಿನದ ಕಾರ್ಯಕ್ರಮದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು ಕುರಿತು ಮಾತನಾಡಿದ ಅವರು ಅಂದಿನ ಕಾಲದ ಜನರ ಕಷ್ಟ ನೋಡಿ 5 ಕೆರೆಗಳನ್ನು ತಿಪ್ಪೇಸ್ವಾಮಿ ನಿರ್ಮಿಸಿದರು. ಕೆಲಸಗಾರರಲ್ಲಿದ್ದ ತಾರತಮ್ಯವನ್ನು ನಿವಾರಿಸಲು ಮರಳಿನಲ್ಲಿ ಬೆತ್ತ ಇಡುವ ಮೂಲಕ ಮಾಡಿದಷ್ಟು ನೀಡು ಭಿಕ್ಷೆ ಎಂಬ ಆಶೀರ್ವಾದದಿಂದ ತಾವು ಮಾಡಿದ ಕೆಲಸಕ್ಕೆ ಸರಿಯಾದ ವೇತನ ಸಿಗುವಂತೆ ಮಾಡಿದರು ಎಂದರು.

ಹಾವು ಕಚ್ಚಿದ ಮಗುವನ್ನು ಬದುಕಿಸಿದ್ದು, ಕುಷ್ಟರೋಗ ನಿರ್ಮೂಲನೆ, ಮೂಕನಿಗೆ ಮಾತು ಬರುವಂತೆ ಮಾಡುವುದು ಇತ್ಯಾದಿ ಕಾರ್ಯಗಳಿಂದ ತಿಪ್ಪೇಸ್ವಾಮಿಯವರ ಹೆಸರು ಮನೆ ಮಾತಾಗಿ ಮಕ್ಕಳಿಗೂ ಸಹ ಈ ಹೆಸರನ್ನು ನಾಮಾಂಕಿತ ಮಾಡಿದ್ದಾರೆ. ಇವರು ನಾಯಕನಹಟ್ಟಿಯ ಹೊರಮಠದಲ್ಲಿ ಲಿಂಗೈಕ್ಯರಾಗಿದ್ದಾರೆ. ಕೊಪ್ಪಳದ ಬಿಟ್ಟರೆ ಈ ಭಾಗದಲ್ಲಿ ಅತಿದೊಡ್ಡ ಎರಡನೇ ಜಾತ್ರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯದಾಗಿದೆ. ಹೈದರಾಲಿ ಒಂದು ಗಂಡು ಮಗುವಿಗಾಗಿ ಇಲ್ಲಿಗೆ ಬಂದು ನಡೆದುಕೊಂಡ ಇತಿಹಾಸವಿದೆ ಎಂದರು.

ಇದಲ್ಲದೇ ಚೆಲುಮೆರುದ್ರಸ್ವಾಮಿಯವರು ಚಳ್ಳಕೆರೆಯ ಪ್ರಾಂತ್ಯದವರು. ಭೀಕರ ಬರಗಾಲ ಬಂದಾಗ ಅಲ್ಲಿ ಕುಡಿಯುವ ನೀರಿನ ಗುಂಡಿಗಾಗಿ ಚಿಲುಮೆ ತೋಡಿದಾಗ ನೀರು ಬರುತ್ತದೆ. ಇಂತಹ ಪುಣ್ಯವ್ಯಕ್ತಿಗಳ ಸಾಧನೆ ಅದ್ವಿತೀಯವಾದುದು ಎಂದು ತಿಳಿಸಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಪಂಚಗಣಾಧೀಶರ ಪರಂಪರೆ ಮತ್ತು ಶಿವಯೋಗಿ ಪರಂಪರೆ ಎಂಬ ಎರಡು ರೀತಿಯ ಅನುಸಂಧಾನವಿದೆ. ತಿಪ್ಪೇಸ್ವಾಮಿಯವರ ಮಾಡಿದಷ್ಟು ನೀಡು ಭಿಕ್ಷೆ ಎಂಬ ಕಾಯಕ ತತ್ವ ಪವಾಡದ ರೂಪದಲ್ಲಿ ಕಂಡುಬಂದಿತು. ಶರಣರ ವಾಣಿ ಮುಖವಾಣಿಯಾಗಬೇಕು. ವಿಭಿನ್ನ ರೀತಿಯ ವ್ಯಕ್ತಿಗಳು ತಮ್ಮದೇ ಆದ ಪವಾಡ ಮಾಡಿದ್ದಾರೆ. ಎಲ್ಲಾ ಕಡೆ ಸಾಮಾನ್ಯ ಭಕ್ತರು ಇಲ್ಲಿನ ಒಕ್ಕಲಾಗಿದ್ದಾರೆ. ಇವರು ಶರಣ ಪರಂಪರೆಯ ಅನರ್ಘ್ಯ ರತ್ನಗಳು. ಆತ್ಮಕಲ್ಯಾಣದ ಪರಂಪರೆ ಶಿವಯೋಗಿಗಳದ್ದಾಗಿದೆ. ಕಾಯಕ ಜೀವಿಗಳ ಜೊತೆ ಇರುವವರು ಪಂಚಗಣಾಧೀಶ್ವರರಾಗಿದ್ದಾರೆಂದು ತಿಳಿಸಿದರು.

ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ, ತಿಪ್ಪೇಸ್ವಾಮಿಯವರ ಪವಾಡದಿಂದ ಮಾತುಬರದ ಮಗುವಿಗೆ ಮಾತು ಬರುವಂತೆ ಮಾಡುತ್ತಾರೆ. ಮಹಾತ್ಮರ ಸಮಾಧಿಯಲ್ಲಿ ತಪಸ್ಸಿನ ಪ್ರಭಾವ 2 ವರ್ಷಗಳ ಕಾಲ ಜೀವಂತವಾಗಿದೆ ಎಂದು ವಿಜ್ಞಾನವೂ ಸಹ ಒಪ್ಪಿಕೊಂಡಿದೆ. ಇವರ ಬಗ್ಗೆ ಡಾ. ಆರ್.ಸಿ. ಹಿರೇಮಠರು ಸಂಶೋಧನೆ ಮಾಡಿದ್ದಾರೆ. ಯಾರಲ್ಲಿ ಆಸ್ತಿಕ ಭಾವ ಇರುತ್ತದೆಯೋ ಅವರಲ್ಲಿ ಕಷ್ಟಗಳು ದೂರವಾಗುತ್ತವೆ. ಮನುಷ್ಯ ಬಾಗುವುದನ್ನು ಕಲಿತರೆ ಭವಬಾಧೆಗಳು ದೂರವಾಗುತ್ತವೆ ಎಂದು ನುಡಿದರು.

ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು. ವಿಶ್ವನಾಥ ದೇವರು ಮಾತನಾಡಿದರು. ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕ ಬಿ.ಸಿ ಪ್ರಕಾಶ್ ಸ್ವಾಗತಿಸಿದರು. ನಾಗಾನಾಯ್ಕ ನಿರೂಪಿಸಿದರು. ಎಸ್.ಎಂ ಪುಟ್ಟಸ್ವಾಮಿ ವಂದಿಸಿದರು.

-------------

ಪೋಟೋ ಕ್ಯಾಪ್ಸನ್

ಚಿತ್ರದುರ್ಗದ ಮುರುಘಾಮಠದಲ್ಲಿ ನಡೆದ ಅನುಭಾವ ಶ್ರಾವಣ ಶರಣರ ಚಿಂತನ ಮಾಲಿಕೆಯ ಐದನೇ ದಿನದ ಕಾರ್ಯಕ್ರಮದಲ್ಲಿ ಜಡೆಕುಂಟೆ ಮಂಜುನಾಥ್ ಮಾತನಾಡಿದರು.

----------ಫೋಟೋ ಫೈಲ್ ನೇಮ್-19 ಸಿಟಿಡಿ 2--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಭಂಜಕರಿಗೆ ಕಾದಿದೆ ಭಾರಿ ದಂಡ!
ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳಿಗೆ ವರದಾನ: ನಂಜಾವಧೂತ ಶ್ರೀ