ವಸಂತಕುಮಾರ್ ಕತಗಾಲ
ಕಾರವಾರ:ಹಗಲು ರಾತ್ರಿ ಆಗಸದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಹಾರಾಡುತ್ತಿವೆ. ಇದರಿಂದ ರಾತ್ರಿ ಮಲಗುವಾಗ ಭಯ ಆಗುತ್ತದೆ. ಆದರೆ ನಾನು ಸುರಕ್ಷಿತವಾಗಿದ್ದೇನೆ. ನಾನಿರುವಲ್ಲಿ ಕ್ಷಿಪಣಿ, ಬಾಂಬ್ ಬಿದ್ದಿಲ್ಲ. ಇದು ಇಸ್ರೇಲ್ ನ ಹೈಫಾದಲ್ಲಿರುವ ಮೂಲತಃ ಶಿರಸಿಯ ಕ್ರಿಜೋಸ್ಟಮ್ ಪೌಲ್ ವಾಜ್ ಹೇಳುವ ಮಾತುಗಳು.
ಗಾಜಾ ಹಾಗೂ ಜೆರುಸಲೇಂನಿಂದ ಹೈಫಾ ನಗರ 175 ಕಿಮೀ ದೂರ ಇದೆ. ಇದರಿಂದ ಹೈಫಾಕ್ಕೆ ಯುದ್ಧದ ಬಿಸಿ ತಟ್ಟಿಲ್ಲ. ಅದರಲ್ಲೂ ಕ್ರಿಜೋಸ್ಟಮ್ ಇರೋದು ಹೈಫಾ ಬಳಿಯ ಒಂದು ಹಳ್ಳಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.ಯುದ್ಧದ ಪರಿಣಾಮವಾಗಿ ಹೈಫಾ ಸಿಟಿ ಬಂದ್ ಆಗಿದೆ. ಆದರೆ ಇವರು ವಾಸಿಸುವ ಸಮೀಪದ ಕಿರಿಯತ್ ಎಂಬಲ್ಲಿ ಅಂಗಡಿಗಳು ತೆರೆದಿರುತ್ತವೆ. ಯಾವುದೆ ವಸ್ತುಗಳು ಬೇಕಾದರೂ ಸಿಗುತ್ತಿದೆ.
ಯುದ್ಧ ನಡೆಯುತ್ತಿದ್ದರೂ ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಅಭದ್ರತೆಯ ವಾತಾವರಣ ಕಂಡುಬಂದಿಲ್ಲ. ಗಾಜಾ ಹಾಗೂ ಜೆರುಸಲೇಂ ಮತ್ತು ಗಡಿ ಪ್ರದೇಶದಲ್ಲಿ ಭಾರಿ ಯುದ್ಧ ನಡೆಯುತ್ತಿದೆ ಎಂದು ಕ್ರಿಜೋಸ್ಟಮ್ ಹೇಳುತ್ತಾರೆ.ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ಅವರಿಗೆ ಭಾರತಕ್ಕೆ ಮರಳಬೇಕೆಂಬ ತುಡಿತವೂ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಎಲ್ಲವೂ ಮಾಮೂಲಿ ಸ್ಥಿತಿಗೆ ಬರಲಿದೆ ಎಂಬ ಕ್ರಿಜೋಸ್ಟಮ್ ಅವರದ್ದಾಗಿದೆ.
ಕ್ರಿಜೋಸ್ಟಮ್ ಕುಟುಂಬವೇ ಇಸ್ರೇಲ್‌ನಲ್ಲಿದೆ. ಶಿವಮೊಗ್ಗ ಹಾಗೂ ಶ್ರೀಲಂಕಾದ ಗೆಳೆಯರು ಪ್ರತಿದಿನ ಭೇಟಿಯಾಗುತ್ತಾರೆ. ಇಸ್ರೇಲ್ ನ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಾರೆ.ಆದಷ್ಟು ಬೇಗ ಯುದ್ಧ ಮುಗಿದರೆ ಸಾಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.
ನಾನು ಇರೋದು ಯುದ್ಧಪೀಡಿತ ಪ್ರದೇಶ ಅಲ್ಲ. ಆಗಾಗಿ ಇಲ್ಲಿ ಬಾಂಬ್, ಕ್ಷಿಪಣಿಗಳ ಭಯ ಇಲ್ಲ. ಯುದ್ಧ ವಿಮಾನಗಳ ಹಾರಾಟ ಮಾತ್ರ ಕಾಣುತ್ತಿದೆ ಎಂದುಕ್ರಿಜೋಸ್ಟಮ್ ಫೌಲ್ ವಾಜ್ ತಿಳಿಸಿದ್ದಾರೆ.