ಗ್ರಾಮೀಣ ಭಾಗಕ್ಕೂ ಹೈಸ್ಪೀಡ್‌ ಇಂಟರ್‌ನೆಟ್‌ ಸೌಲಭ್ಯ: ಆಸಂಗಿ

KannadaprabhaNewsNetwork |  
Published : May 28, 2026, 02:30 AM IST
ರಾಜಕುಮಾರ ಆಸಂಗಿ | Kannada Prabha

ಸಾರಾಂಶ

ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು ಎಲ್ಲ ಗ್ರಾಮಗಳಲ್ಲಿ ತಿದ್ದುಪಡಿ ಮಾಡಿದ ನೆಟ್ ಉದ್ಯಮಿ ಯೋಜನೆ ಕಾರ್ಯಾರಂಭ ಮಾಡಿದೆ ಎಂದು ಬಿಎಸ್‌ಎನ್‌ಎಲ್ ಹುಬ್ಬಳ್ಳಿ ವಲಯ ಉಪ ಮಹಾ ಪ್ರಬಂಧಕ ರಾಜಕುಮಾರ ಆಸಂಗಿ ಹೇಳಿದರು.

ಹಾನಗಲ್ಲ: ಭಾರತ ನೆಟ್ ಉದ್ಯಮ ಯೋಜನೆಯ ಎರಡನೇ ಭಾಗವಾಗಿ ಗ್ರಾಮೀಣ ಭಾಗದಲ್ಲಿ ಹೈ ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಡಿಜಿಟಲ್ ಅಂತರ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬಿಎಸ್‌ಎನ್‌ಎಲ್ ಹುಬ್ಬಳ್ಳಿ ವಲಯ ಉಪ ಮಹಾ ಪ್ರಬಂಧಕ ರಾಜಕುಮಾರ ಆಸಂಗಿ ಹೇಳಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು ಎಲ್ಲ ಗ್ರಾಮಗಳಲ್ಲಿ ತಿದ್ದುಪಡಿ ಮಾಡಿದ ನೆಟ್ ಉದ್ಯಮಿ ಯೋಜನೆ ಕಾರ್ಯಾರಂಭ ಮಾಡಿದೆ ಎಂದರು.

ಕೇಂದ್ರ ಸರ್ಕಾರವು ಗ್ರಾಪಂ ಮತ್ತು ಗ್ರಾಮಗಳಲ್ಲಿ ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಪ್ರಮುಖ ಯೋಜನೆ ಆರಂಭಿಸಿದೆ. ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಮತ್ತು ಉಚಿತ ಅನುಸ್ಥಾಪನಾ ಶುಲ್ಕ ಒಳಗೊಂಡಿದೆ ಎಂದರು.

೨೦೨೨ರಲ್ಲಿ ಉದ್ಯಮಿ ಸ್ಕೀಮ್ ಜಾರಿಗೆ ಬಂದಿದೆ. ಇದರ ಮುಂದುವರಿದ ಭಾಗವಾಗಿ ಪೇಜ್-೨ನಲ್ಲಿ ಹೈ ಸ್ಪೀಡ್ ಇಂಟರ್‌ನೆಟ್, ವೈಫೈ ಸಂಪರ್ಕ ಮತ್ತು ಮನೆಗೆ ಟಿವಿ ಜಾನೆಲ್‌ಗಳು ಲಭ್ಯವಾಗಲಿದೆ ಎಂದರು.

ಪ್ರತಿ ಗ್ರಾಮಕ್ಕೆ ಆಪ್ಟಿಕಲ್ ಫೈಬರ್ ಕೇಬಲ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಪೇಜ್-೨ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ೧೩ ಸ್ಥಳೀಯ ಫ್ರಾಂಚೈಸ್‌ ನೋಂದಣಿ ಮಾಡಿಕೊಳ್ಳಲಾಗಿದೆ. ಸಂಪರ್ಕದಲ್ಲಿ ಯಾವುದೇ ವ್ಯತ್ಯಯವಾದರೆ, ಸ್ಥಳೀಯವಾಗಿ ಸಿಗುವ ಪ್ರಾಂಚೈಸಿಗಳು ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸುತ್ತಾರೆ ಎಂದು ಆಸಂಗಿ ವಿವರಣೆ ನೀಡಿದರು.

ಗ್ರಾಹಕರು ಆಯ್ಕೆ ಮಾಡುವ ಯೋಜನೆ ಪ್ರಕಾರ ಮಾಸಿಕ ಬಿಲ್ ಪಾವತಿಸಬೇಕು. ₹೩೯೯ರಿಂದ ₹೭೦೦ ತನಕ ಮಾಸಿಕ ಯೋಜನೆ ಅಸ್ತಿತ್ವದಲ್ಲಿವೆ ಎಂದರು.

ಹಾನಗಲ್ಲ ತಾಲೂಕು ವಲಯದ ಅಧಿಕಾರಿ ಇಂದ್ರಜಿತ್ ಯಾಧವ, ಫ್ರಾಂಚೈಸಿ ಪರವಾಗಿ ರಾಮಣ್ಣ ಯಳ್ಳೂರ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ
ಕಾಲೇಜು ಅಭಿವೃದ್ಧಿಗೆ ಅಗತ್ಯ ಸಹಕಾರ: ಪ್ರೊ. ಅಶೋಕ್ ಸಂಗಪ್ಪ ಆಲೂರ