- ಕಲಾತಂಡಗಳ ತಾಳಕ್ಕೆ ತಕ್ಕಂತೆ ಕುಣಿದ ಯುವಜನತೆ । ಬಿಗಿ ಬಂದೋಬಸ್ತ್
ಕನ್ನಡಪ್ರಭ ವಾರ್ತೆ ಹರಿಹರ
ಹರಿಹರ ನಗರದಲ್ಲಿ ಭಾನುವಾರ ಸಂಜೆ ಹಿಂದೂ ಮಹಾಗಣಪತಿಯ ೬ನೇ ವರ್ಷದ ಗಣೇಶನ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಟ್ರ್ಯಾಕ್ಟರ್ ಚಾಲನೆ ಮೂಲಕ ಚಾಲನೆ ನೀಡಿದರು. ಡಿಜೆ ಸೌಂಡ್ ನಿಷೇಧ ನಡುವೆಯೂ ಶೋಭಾಯಾತ್ರೆಯಲ್ಲಿ ಯುವಜನರು ಕಲಾತಂಡಗಳ ತಾಳಕ್ಕೆ ತಕ್ಕಂತೆ ಮೈರೆತು ಹೆಜ್ಜೆ ಹಾಕಿ, ಸಂಭ್ರಮಿಸಿದರು.ಹರಿಹರ ತಾಲೂಕು ಸೇರಿದಂತೆ ಪಕ್ಕದ ದಾವಣಗೆರೆ, ಹೊನ್ನಾಳಿ, ರಾಣೇಬೆನ್ನೂರು, ಹರಪನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯ ಜಾಂಜ್ ಮೇಳ, ಬೆಂಗಳೂರಿನ ಮದ್ರಾಸ್ ತಮಟೆ, ಉಡುಪಿಯ ಚಂಡೆ, ಹರಿಹರದ ಯಕ್ಷಗಾನ ವೇಷ, ಡ್ರಮ್ ಸೆಟ್, ಮಹಿಳೆಯರ ಡೊಳ್ಳು, ಸಮಾಳ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗಿಯಾಗಿ, ಜನಮನ ಸೂರೆಗೊಂಡವು. ಸಾರ್ವಜನಿಕರು ಅನ್ನ ಸಂತರ್ಪಣೆ, ತಂಪು ಪಾನೀಯ, ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಿ, ಭಕ್ತಿ ಮೆರೆದರು.
ನಗರವೆಲ್ಲ ಕೇಸರಿಮಯ:
ಬಿಗಿ ಪೊಲೀಸ್ ಬಂದೊಬಸ್ತ್:
ಗಣೇಶ ಮೂರ್ತಿಗಳ ಮಹಾಸಂಗಮ:
ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್‌ಕುಮಾರ್, ಚಂದ್ರಶೇಖರ್ ಪೂಜಾರ್, ತಾಪಂ ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಹಿಂದೂ ಮಹಾಗಣಪತಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ಶಶಿಕುಮಾರ್ ಮೆಹರ್ವಾಡೆ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪೂರ, ಶೇಖರ್‌ಗೌಡ ಪಾಟೀಲ್, ನಾಗರಾಜ್ ಬಂಡಾರಿ, ರೂಪಾ ಶಶಿಕಾಂತ್, ರಶ್ಮಿ ಮೆಹರ‍್ವಾಡೆ, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ಸಾಕ್ಷಿ ಶಿಂಧೆ, ಸ್ವಾತಿ ಹನುಮಂತ, ಎಚ್.ದಿನೇಶ್, ರಾಘವೇಂದ್ರ ಉಪಾಧ್ಯ, ಶಿವಪ್ರಕಾಶ್ ಶಾಸ್ತ್ರಿ, ಕೃಷ್ಣಮೂರ್ತಿ ಶ್ರೇಷ್ಠಿ, ಮಹೇಶ್, ನಿತ್ಯಾನಂದ, ಚಂದನ್ ಮುರ್ಕಲ್, ಶಿವಕುಮಾರ್, ಕಾರ್ತಿಕ್, ಪ್ರಸನ್ನ, ಅದ್ವೈತ ಶಾಸ್ತ್ರಿ, ರವಿ ರಾಯ್ಕರ್, ಗಿರೀಶ್ ಗೌಡ ಹಳ್ಳದಕೇರಿ, ಸಂತೋಷ್ ಗುಡಿಮನಿ, ರವಿ ಸಿಂಗ್, ಪ್ರಶಾಂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
-೧೫ಎಚ್‌ಆರ್‌ಆರ್.೦೧: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್ ಟ್ರ್ಯಾಕ್ಟರ್ ಚಾಲನೆ ಮೂಲಕ ಶುಭಾರಂಭ ನೀಡಿದರು. -೧೫ಎಚ್‌ಆರ್‌ಆರ್ ೧ಎ& ಎಎ: ಮೆರವಣಿಗೆಯಲ್ಲಿ ಯಕ್ಷಗಾನ ಕಲಾವಿದರು, ಮಹಿಳಾ ಡೊಳ್ಳು ಕುಣಿತ ಕಲಾವಿದರು ಜನಮನ ಸೆಳೆದರು. -೧೫ಎಚ್‌ಆರ್‌ಆರ್೦೧ಸಿ: ಹರಿಹರ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಸೇರಿದ್ದ ಅಪಾರ ಜನಸ್ತೋಮ.