ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ

KannadaprabhaNewsNetwork |  
Published : Mar 03, 2026, 01:30 AM IST
2ಎಚ್ಎಸ್ಎನ್16 :  | Kannada Prabha

ಸಾರಾಂಶ

ಕೋಟೆ ಮೈಲಾರಲಿಂಗನ ಬೀದಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ೨೫,೦೦೦ ಸಾವಿರ ದೇಣಿಗೆಯನ್ನು ನೀಡಿ ಮಾತನಾಡಿ ಸಮಾಜದ ಉತ್ತಮ ಕಾರ್ಯಗಳಿಂದ ಖಿನ್ನತೆ ತಪ್ಪಿ ಮನಸ್ತಾಪಗಳಿಲ್ಲದೆ ಆತ್ಮೀಯತೆ, ಸೌಹಾರ್ದ ಮನಸ್ಸಿನ ಶಕ್ತಿ ಹೆಚ್ಚು ಆರೋಗ್ಯಕರ ಸಮಾಜಕ್ಕೆ ಪೂರಕವಾಗುತ್ತದೆ, ಸಂಘದ ಸದಸ್ಯರು ಒಟ್ಟುಗೂಡಿ ರಾಮಮಂದಿರವನ್ನು ನಿರ್ಮಿಸಿ ಉದ್ಘಾಟನೆಯಾಗಲಿ ಎಂದರು.

ಚನ್ನರಾಯಪಟ್ಟಣ: ಎಲ್ಲರ ಸಹಕಾರವಿದ್ದಲ್ಲಿ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ತಿಳಿಸಿದರು.

ಅವರು ಕೋಟೆ ಮೈಲಾರಲಿಂಗನ ಬೀದಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ೨೫,೦೦೦ ಸಾವಿರ ದೇಣಿಗೆಯನ್ನು ನೀಡಿ ಮಾತನಾಡಿ ಸಮಾಜದ ಉತ್ತಮ ಕಾರ್ಯಗಳಿಂದ ಖಿನ್ನತೆ ತಪ್ಪಿ ಮನಸ್ತಾಪಗಳಿಲ್ಲದೆ ಆತ್ಮೀಯತೆ, ಸೌಹಾರ್ದ ಮನಸ್ಸಿನ ಶಕ್ತಿ ಹೆಚ್ಚು ಆರೋಗ್ಯಕರ ಸಮಾಜಕ್ಕೆ ಪೂರಕವಾಗುತ್ತದೆ, ಸಂಘದ ಸದಸ್ಯರು ಒಟ್ಟುಗೂಡಿ ರಾಮಮಂದಿರವನ್ನು ನಿರ್ಮಿಸಿ ಉದ್ಘಾಟನೆಯಾಗಲಿ ಎಂದರು.ಸಂಘದ ಅಧ್ಯಕ್ಷ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಮೋಹನ್‌ಕೋಟೆ ದಂಪತಿಗಳು ಪೂಜಾ ಕೈಂಕರ್ಯವನ್ನು ಬಾಲಕೃಷ್ಣ ಭಟ್ಟರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಕನ್ನಡ ಪರ ಹೋರಾಟಗಾರ ಪುಟ್ಟಣ್ಣ ಗೋಕಾಕ್, ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಶಂಕರ್, ಲತಾ, ಸೋಮಣ್ಣ ಹಾಗೂ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆ ಧಾಮ ಸ್ಥಾಪನೆಗೆ ಶಾಸಕ ಸುರೇಶ್ ಆಗ್ರಹ
ಕೌಶಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಅಗತ್ಯ: ಪಿ.ಎಂ.ನರೇಂದ್ರಸ್ವಾಮಿ