ಬೇತಮಂಗಲ: ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮನೆ ಕಳವು ಪ್ರಕರಣದಲ್ಲಿ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮದ ವಾಸಿ ಅರುಣ್‍ಕುಮಾರ್ (27 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ₹65,000 ಮೌಲ್ಯದ 1 ಗ್ರಾಂ 490 ಮಿಲಿ ಬಂಗಾರ, 3 ಮೊಬೈಲ್ ಫೋನ್, ಒಂದು ವುಡ್ ಕಟ್ಟರ್ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸಂಗಮೇಶ್ ಕೊಲ್ಹಾರ್ ಮತ್ತು ಸಿಬ್ಬಂದಿ ಶ್ರೀನಿವಾಸ, ಮುನಿರಾಜು, ಗಜೇಂದ್ರ, ಸಿದ್ದರಾಮ ಪಾಟೀಲ್ ಮತ್ತು ಧನಸಿಂಗ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ 02 ವಶಪಡಿಸಿಕೊಂಡ ಮಾಲಿನೊಂದಿಗೆ ಕ್ಯಾಸಂಬಳ್ಳಿ ಪೊಲೀಸರು.