ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು, ಮಹಾಲಿಂಗಪುರದಲ್ಲಿ ಅತ್ಯಂತ ವೈಭವದಿಂದ ನಡೆಯುತ್ತಿರುವ ಈ ದಸರಾ ನೋಡಲು ಎರಡು ಕಣ್ಣು ಸಾಲದು. ನಾವು ನುಡಿದಂತೆ ನಡೆಯುವುದನ್ನು ಕಲಿಯಬೇಕು. ಅದುವೇ ನಮ್ಮ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದರು.
ನಿಸರ್ಗದಲ್ಲಿ ಸಿಗುವ ಮಣ್ಣು, ನೀರು, ಗಾಳಿಯನ್ನು ಎಂದಿಗೂ ಕಲುಷಿತಗೊಳಿಸಬಾರದು. ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದುಕನ್ನು ಉತ್ತಮ ವಿಚಾರಗಳಿಗೆ ಉಪಯೋಗಿಸಬೇಕು. ಕೆಟ್ಟ ಚಟಗಳಿಂದ ದೂರವಿದ್ದು, ಮನುಷ್ಯ ಪ್ರಕೃತಿ ಋಣ ಉಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು.ಮನೆಯ ವಾಸ್ತು ಮುಖ್ಯವಲ್ಲ. ಬದುಕಿಗೆ ಮನಸಿನ ವಾಸ್ತು ಮುಖ್ಯ. ನಿಸರ್ಗದೊಂದಿಗೆ ಬದುಕಿದರೆ ಬದುಕು ಸ್ವರ್ಗವಾಗುತ್ತದೆ ಎಂದು ಶ್ರೀಗಳು, ನಾನು ಎಂಬುದು ನರಕಕ್ಕೆ ಸಮ. ನಾವು ಎಂಬುದೇ ಸ್ವರ್ಗ. ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿದರೆ ಅದು ನಮ್ಮ ಸ್ವರ್ಗ. ಜಗತ್ತಿನಲ್ಲಿ ನಿಸರ್ಗಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದನ್ನು ಪ್ರೀತಿಸಬೇಕು. ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಕಲ್ಲು ದೇವರಿಗೆ ಚಿನ್ನ ಹಾಕುವ ಬದಲು ಜನ್ಮಕೊಟ್ಟ ತಂದೆ ತಾಯಿಗೆ ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ಳಿ. ತಂದೆ ತಾಯಿಗೆ ಮಕ್ಕಳೇ ಪ್ರಪಂಚ. ಆದರೆ ಮಕ್ಕಳಿಗೆ ಬೇರೆ ಪ್ರಪಂಚ ಆಗಬಾರದು ಎಂದು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು ಹೇಳಿದರು.
ಈ ವೇಳೆ ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಬಲವಂತಗೌಡ ಪಾಟೀಲ, ಚಂದ್ರು ಗೊಂದಿ, ಅಶೋಕ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಘಟ್ನಟ್ಟಿ, ಹಣಮಂತ ಬುರುಡ, ಪ್ರಭು ನಾವಿ, ಮಲ್ಲಪ್ಪಾ ಹಡಪದ, ಹೊಳಬಸು ಹಡಪದ, ಮಹಾಲಿಂಗಪ್ಪಾ ಲಾತುರ, ಬಸವರಾಜ ಮೇಟಿ, ಮಹಾಲಿಂಗಪ್ಪಾ ಹೊಸೂರ್, ರಾಮಣ್ಣ ಬಂಡಿ, ಮಲ್ಲಪ್ಪಾ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಶ್ರೀಶೈಲ ನುಚ್ಚಿ, ಮಾನಿಂಗ ನುಚ್ಚಿ, ಸಿದ್ದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಬಸವರಾಜ್ ಪಶ್ಚಾಪುರ, ಕಲ್ಲಪ್ಪ ಚಿಂಚಲಿ, ಎಸ್.ಕೆ.ಗಿಂಡೆ ಸಿದ್ದು ದಡುತಿ, ಸಿದ್ದಪ್ಪ ನಿಂಬರಗಿ, ಮಾನಿಂಗ ಬುರುಡ, ಈಶ್ವರ ವಂದಾಲ, ಗೊಲೇಶ ಅಮ್ಮನಗಿ, ಶ್ರೀಶೈಲ ಬಾಡನವರ, ಶ್ರೀಶೈಲ ಕಳ್ಯಾಗೋಳ ಹಾಗೂ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಕನ್ನಡ ಕೋಗಿಲೆ ಖ್ಯಾತಿ ಕುಮಾರಿ ಮಹನ್ಯಾ ಪಾಟೀಲ ಸಂಗೀತ ಕಾರ್ಯಕ್ರಮ ನೋಡುಗರ ಮನ ತಣಿಸಿತು.