ಹಿಂದೂಗಳು ಸ್ವಾಭಿಮಾನ ಕಳೆದುಕೊಂಡರೆ ಸೋಲು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork |  
Published : Jan 19, 2026, 12:45 AM IST
17 ಎಚ್‌ಎಚ್‌ಆರ್ ಪಿ 02ಸಮೀಪದ ಮೈದೊಳಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮವನ್ನು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲಿ ಉದ್ಘಾಟಿಸಿದರು. ಗ್ರಾಮದ ಅಧ್ಯಕ್ಷ ಸಿ.ಹೆಚ್ ಚಂದ್ರಪ್ಪ, ತಾಲೂಕು ಸಂಘ ಚಾಲಕ ತ್ರಿಮೂರ್ತಿ, ಪ್ರಕಾಶ್ ಇತರರಿದ್ದರು. | Kannada Prabha

ಸಾರಾಂಶ

ಹಿಂದೂಗಳು ಸ್ವಾಭಿಮಾನ ಕಳೆದುಕೊಂಡು ಸೋಲುಣ್ಣುತ್ತಿದ್ದಾರೆ. ಇದು ಅವರ ನಿಜವಾದ ಸೋಲಾಗಿದೆ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಹಿಂದೂಗಳು ಸ್ವಾಭಿಮಾನ ಕಳೆದುಕೊಂಡು ಸೋಲುಣ್ಣುತ್ತಿದ್ದಾರೆ. ಇದು ಅವರ ನಿಜವಾದ ಸೋಲಾಗಿದೆ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಮೀಪದ ಮೈದೊಳಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಅಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂಗಳನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಜಾತಿ ಎಲ್ಲೆ ಮೀರಿ ಹಿಂದೂಗಳು ಒಂದಾಗಬೇಕು. ಹಿಂದೂ ರಾಷ್ಟ್ರಗಳ ಮೇಲಾದ ಭೀಕರ ದಾಳಿಗಳಷ್ಟು ಯಾವ ದೇಶದ ಮೇಲೂ ನಡೆದಿಲ್ಲ. ದೇಶದ ಮಾಲೀಕರಾದ ಹಿಂದೂಗಳು ದೇಶದಲ್ಲಿ ಕೆಲಸದವರ ತರ ವರ್ತನೆ ಮಾಡುತ್ತಿದ್ದಾರೆ. ದೇಶದ ಮಾಲೀಕರು ಹಿಂದೂಗಳೆಂದು ಎದೆಯುಬ್ಬಿಸಬೇಕು. ನಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಬಾವಿತೊಡುವುದನ್ನು ಬಿಟ್ಟು ಒಗ್ಗಟಿನತ್ತ ಚಿತ್ತ ಹರಿಸಬೇಕಿದೆ. ಹಿಂದೂ ಧರ್ಮ ಯಾರೊ ಒಬ್ಬ ಹುಟ್ಟಿ ಹಾಕಿದ ಪಂಥವಲ್ಲ. ಅನಾದಿ ಕಾಲದಿಂದಲೂ ಹಿಂದೂ ಧರ್ಮ ಮೇಳೈಸುತ್ತಲೆ ಬಂದಿದೆ. ಹಿಂದೂ ಧರ್ಮವನ್ನು ಮತ್ತೆ ಕಟ್ಟಬೇಕಿದೆ ಎಂದರು.

ಹಿಂದೂ ಎಂದರೆ ಸಂಘದ ಪ್ರಚಾರಕರನ್ನು ಕೇಳಿ ಎನ್ನುವ ಪರಿಸ್ಥಿತಿ ಎದುರಾಗಿದೆ. ಓಂಕಾರವನ್ನು ಪ್ರತಿಪಾದಿಸಿ ಹಿಂಸೆ ನಿಂದಿಸುವವನು ಹಿಂದೂವಾಗತ್ತಾನೆ. ಹಿಂದೂಗಳಲ್ಲಿನ ತಾಕತ್ತು ಸತ್ತು ಹೋಗಿದೆ. ದ್ವೇಷ ಹುಟ್ಟಿಸಿ ಪ್ರೇಮ ಬೆಳೆಸಿಕೊಳ್ಳುವುದು ಯಾವ ಪುರುಷಾರ್ಥ. ಪ್ರತಿಯೊಬ್ಬರು ಹಿಂದೂಗಳಾಗಿ ಸಮಾಜವನ್ನು ಸಂರಕ್ಷಿಸಬೇಕಿದೆ. ಗೀತೆ ಓದುವ ಸಮರ್ಥ ಸಮಾಜ ರೂಪಿಸಬೇಕಿದೆ ಎಂದರು.

ಹೃದಯದಲ್ಲಿ ನೆಲೆಸಿರುವ ಮೂರ್ತಿಯನ್ನು ದ್ವಂಸಗೊಳಿಸಲು ಯಾರಿಂದಲೂ ಸಾದ್ಯವಿಲ್ಲ. ಹಿಂದೂಗಳು ಮತ್ತೆ ಪುಟಿದೇಳಬೇಕಿದೆ. 45 ವರ್ಷಗಳ ನಿರಂತರ ಹೋರಾಟದ ಫಲ ಶ್ರೀರಾಮ ಮಂದಿರ. ಜಗತ್ತಿನ ಅತ್ಯಂತ ಭಕ್ತರನ್ನು ಆಕರ್ಷಿಸುವ ಮಂದಿರ ಅಯೋದ್ಯಯ ರಾಮ ಮಂದಿರ. ಹಿಂದೂ ಸಮಾಜಗಳು ಒಟ್ಟಾಗಿ ನಮ್ಮೊಳಗೆ ಬಲವಾಗಿ ನಿಲ್ಲಬೇಕಿದೆ ಎಂದರು.

ದೇಶ 3ನೇ ಶ್ರೀಮಂತ ರಾಷ್ಟ್ರದತ್ತ ದಾಪುಗಾಲಿಡುತ್ತಿದೆ. 4 ದಿನದಲ್ಲೆ ಪಾಕಿಸ್ತಾನವನ್ನು ಸೋಲಿಸಿದ ಕೀರ್ತಿ ನಮ್ಮದು. ಇಡೀ ಜಗತ್ತು ದೇಶದತ್ತ ತಿರುಗಿ ನೋಡುತ್ತಿದೆ. ಒಳಗಿನಿಂದ ದೇಶವನ್ನು ಸದೃಡ ಮಾಡಬೇಕಿದೆ. ದೇಶ ಒಳಗಿನಿಂದಲೇ ಮತೀಯ ಆಧಾರದಲ್ಲಿ ಕುಸಿಯುತ್ತಿದೆ. ಮಾದ್ಯಮಗಳು ಮುಸ್ಲಿಂರ ಒಳ ಉಪಜಾತಿಗಳನ್ನು ಯಾಕೆ ತೋರುಸುವುದಿಲ್ಲ. ಜಾತಿ ಹೆಸರು ಬಳಸುವುದನ್ನು ಬಿಟ್ಟು ಹಿಂದೂ ಎಂದು ಬಳಸಿ. ಸ್ವಯಂ ಸೇವಕರು ಜಾತಿ ಎಲ್ಲೆ ಮೀರಿದವರು. ಭಾರತಕ್ಕೆ ಪಂಚ ಪರಿವರ್ತನೆಯ ಒಗ್ಗಟಿನ ಪ್ರದರ್ಶನ ಮಾಡಬೇಕಿದೆ ಎಂದರು.

ಸಂಘ ಸಂಚಾಲಕ ತ್ರಿಮೂರ್ತಿ ಮಾತನಾಡಿ, ಹಿಂದೂಗಳು ಒಟ್ಟಾಗಿರುವುದಿಲ್ಲ ಎನ್ನುವುದನ್ನು ನಡೆಯುತ್ತಿರುವ ಹಿಂದೂ ಸಂಗಮ ಕಾರ್ಯಕ್ರಮಗಳು ಸುಳ್ಳಾಗಿಸಿವೆ. ಹಿಂದೂ ಸಮಾಜದಲ್ಲಿ ಒಗ್ಗಟಿನ ಮಂತ್ರ ಪಠಣವಾಗಿ ಒಂದಾಣಿಕೆಯ ವಾತವರಣ ನಿರ್ಮಾಣದತ್ತ ದಾಪುಗಾಲಿಡಬೇಕಿದೆ ಎಂದರು.

ಮುಖಂಡ ಅರಳಿಹಳ್ಳಿ ಪ್ರಕಾಶ್ ಮಾತನಾಡಿ, ಜಗತ್ತಿಗೆ ಮಾರ್ಗದರ್ಶನ ಮಾಡುವಷ್ಟು ಭಾರತ ಪರಿವರ್ತನೆಯಾಗುತ್ತದೆ. ಗರ್ವದಿಂದ ಹಿಂದೂ ಎಂದು ಹೇಳುವ ಹಂತಕ್ಕೆ ನಾವೀಗ ಬಂದಿದೇವೆ. ಹಿಂದೂ ಸಂಘಟನೆಯ ಪರಿಣಾಮದಿಂದ ದೇಶದಲ್ಲಿ ಬದಲಾವಣೆಯ ಗಾಳಿ ಮಾರುದಂತೆ ಬೀಸುತ್ತಿದೆ ಎಂದರು.

ಗ್ರಾಮದ ಅಧ್ಯಕ್ಷ ಸಿ.ಎಚ್.ಚಂದ್ರಪ್ಪ, ಮಾಜಿ ಶಾಸಕ ಅಶೋಕ್ ನಾಯ್ಕ್, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ತಾಲೂಕು ಸಂಘ ಚಾಲಕ ತ್ರಿಮೂರ್ತಿ, ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್, ಪಟ್ಟಾಭಿರಾಮ್, ಕೊಮ್ಮರನಹಳ್ಳಿ ಶಿವಕುಮಾರ್, ಮಾವುರಪ್ಪ ಪೂಜಾರ್, ಎಸ್.ಶ್ರೀನಿವಾಸ್, ಎಸ್.ಸಿದ್ದಲಿಂಗಪ್ಪ, ಹಾಲೋಜಿರಾವ್, ಚಿದಾನಂದಮೂರ್ತಿ, ಸಾರ್ಥಿರಾಜಪ್ಪ, ವಿರೂಪಾಕ್ಷ, ತಿಪ್ಪೇಶ್, ಮಂಜುನಾಥ್,ಲಕ್ಷ್ಮೀಕಾಂತ, ದರ್ಶನ್, ನಂದೀಶ್, ಸಿ,ವಿ ಹರೀಶ್, ರವಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಡ್ಡಾಯ ಪ್ರವೇಶಕ್ಕೆ ಆಗ್ರಹ
ಹೇಳಿಕೆ ಮಾತು ಬಿಟ್ಟು ಜನಪರ ಅಭಿವೃದ್ಧಿ ಕೆಲಸ ಮಾಡಲಿ: ಸಂಸದ ಬಿ.ವೈ ರಾಘವೇಂದ್ರ