ಪೌರಕಾರ್ಮಿಕರಿದ್ದರೆ ನಗರ ಸ್ವಚ್ಛತೆ

KannadaprabhaNewsNetwork |  
Published : Jun 09, 2025, 12:32 AM IST
ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ | Kannada Prabha

ಸಾರಾಂಶ

ನಗರವನ್ನು ಮತ್ತು ಪಟ್ಟಣವನ್ನು ಅತಿ ಸ್ವಚ್ಛತೆಯಿಂದ ಸ್ವಚ್ಛಗೊಳಿಸಲು ಪೌರಕಾರ್ಮಿಕರ ಶ್ರಮ ಬಹುಮಖ್ಯವಾಗಿದೆ. ನಾಗರಿಕತೆ ತಿಳಿದಿರುವವರೇ ತಪ್ಪು ಮಾಡಿ ಬೀದಿ ಮತ್ತು ಎಲ್ಲೆಂದರಲ್ಲಿ ಅಲ್ಲಿ ಕಸ ಬಿಸಾಡುತ್ತಾರೆ. ಅದನ್ನು ಸ್ವಚ್ಛಗೊಳಿಸಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ. ಇಂಥವರೊಂದಿಗೆ ನನ್ನ ಹುಟ್ಟುಹಬ್ಬವನ್ನು ಪ್ರತಿವರ್ಷ ನನ್ನ ಸ್ನೇಹಿತರು ಆಚರಿಸುವರು. ನನ್ನ ಸ್ನೇಹಿತರು ಮತ್ತು ನನ್ನ ಸಹೋದ್ಯೋಗಿಗಳು ಹುಟ್ಟುಹಬ್ಬವನ್ನು ಪೌರಕಾರ್ಮಿಕರೊಂದಿಗೆ ಮತ್ತು ಇನ್ನಿತರೆ ಸಮಾಜ ಸೇವೆಗಳೊಂದಿಗೆ ಆಚರಿಸಲು ಮುಂದಾಗಿದ್ದಾರೆ ಎಂದು ಪುರಸಭಾ ಮಾಜಿ ಸದಸ್ಯ ಸಿ. ಎನ್. ಶಶಿಧರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪೌರಕಾರ್ಮಿಕರಿದ್ದರೆ ನಗರವು ಬಹಳ ಸ್ವಚ್ಛತೆಯಿಂದ ಕೂಡಿರುತ್ತದೆ ಎಂದು ಪುರಸಭಾ ಮಾಜಿ ಸದಸ್ಯ ಸಿ. ಎನ್. ಶಶಿಧರ್‌ ತಿಳಿಸಿದ್ದಾರೆ.

ಅವರು ಪಟ್ಟಣದ ಮೈಸೂರ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಟಿವಿಎಸ್ ಶೋರೂಮ್ ಮುಂಭಾಗದಲ್ಲಿ 46ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಿ ಮಾತನಾಡಿ, ಪಟ್ಟಣವು ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮವಿದೆ ಎಂದರು.ನಗರವನ್ನು ಮತ್ತು ಪಟ್ಟಣವನ್ನು ಅತಿ ಸ್ವಚ್ಛತೆಯಿಂದ ಸ್ವಚ್ಛಗೊಳಿಸಲು ಪೌರಕಾರ್ಮಿಕರ ಶ್ರಮ ಬಹುಮಖ್ಯವಾಗಿದೆ. ನಾಗರಿಕತೆ ತಿಳಿದಿರುವವರೇ ತಪ್ಪು ಮಾಡಿ ಬೀದಿ ಮತ್ತು ಎಲ್ಲೆಂದರಲ್ಲಿ ಅಲ್ಲಿ ಕಸ ಬಿಸಾಡುತ್ತಾರೆ. ಅದನ್ನು ಸ್ವಚ್ಛಗೊಳಿಸಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ. ಇಂಥವರೊಂದಿಗೆ ನನ್ನ ಹುಟ್ಟುಹಬ್ಬವನ್ನು ಪ್ರತಿವರ್ಷ ನನ್ನ ಸ್ನೇಹಿತರು ಆಚರಿಸುವರು. ನನ್ನ ಸ್ನೇಹಿತರು ಮತ್ತು ನನ್ನ ಸಹೋದ್ಯೋಗಿಗಳು ಹುಟ್ಟುಹಬ್ಬವನ್ನು ಪೌರಕಾರ್ಮಿಕರೊಂದಿಗೆ ಮತ್ತು ಇನ್ನಿತರೆ ಸಮಾಜ ಸೇವೆಗಳೊಂದಿಗೆ ಆಚರಿಸಲು ಮುಂದಾಗಿದ್ದಾರೆ, ನನ್ನ ಸ್ನೇಹಿತರನ್ನು ನಾನು ಎಂದಿಗೂ ಮರೆಯಬಾರದು, ನಾನು ಒಂದು ಕಾಲದಲ್ಲಿ ಬಹಳ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂದು ನನಗೆ ಮತ್ತು ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತು ನನ್ನನ್ನು ಈ ಮಟ್ಟಕ್ಕೆಕರೆತಂದಿದ್ದಾರೆ ಎಂದರು. ನನ್ನ ಬಳಿ ಯಾವುದೇ ಹಣ, ಆಸ್ತಿ, ಅಂತಸ್ತು ಇಲ್ಲ, ಆದರೆ ನಾನು ಮಾಡುವ ಸಮಾಜ ಸೇವೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಭಾವುಕ ನುಡಿಗಳನ್ನು ಆಡಿದರು.

ಸುಮಾರು 50ಕ್ಕೂ ಅಧಿಕ ಜನ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಘವೇಂದ್ರ, ರಾಹುಲ್, ರಾಘು, ರಾಮಣ್ಣ, ಮಧುಸೂದನ್, ಅಶೋಕ್, ಗುಬ್ಬಿ ಇನ್ನು ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ದೈವಾರಾಧನೆ ಬಗ್ಗೆ ಮಾತಿನಲ್ಲಿ ಎಚ್ಚರ ಇರಲಿ: ಸುರೇಶ್‌ ನಾವೂರು