ತುಳು ನಾಡಿನ ಸಂಸ್ಕೃತಿ ಶ್ರೀಮಂತವಾದುದು. ಇಲ್ಲಿನ ಕೃಷಿ, ಕ್ರೀಡೆ, ನಂಬಿಕೆ ಆಚಾರ ವಿಚಾರಗಳು ವೈವಿಧ್ಯಮಯವಾದುದು. ದೈವಾರಾಧನೆ ತುಳುನಾಡಿನ ಭಾವನೆಗಳೊಂದಿಗೆ ಬೆಸೆದ ಆರಾಧನೆ. ಇದರ ಬಗೆಗೆ ಮಾತನಾಡುವಾಗ, ವ್ಯವಹರಿಸುವಾಗ ತುಳುವರ ಭಾವನೆಗಳಿಗೆ ತೊಂದರೆಯಾಗದಂತೆ ಎಚ್ಚರ ಇರಲಿ ಎಂದು ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್. ಬಿ. ನಾವೂರು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಳ್ಳಾಲ
ತುಳು ನಾಡಿನ ಸಂಸ್ಕೃತಿ ಶ್ರೀಮಂತವಾದುದು. ಇಲ್ಲಿನ ಕೃಷಿ, ಕ್ರೀಡೆ, ನಂಬಿಕೆ ಆಚಾರ ವಿಚಾರಗಳು ವೈವಿಧ್ಯಮಯವಾದುದು. ದೈವಾರಾಧನೆ ತುಳುನಾಡಿನ ಭಾವನೆಗಳೊಂದಿಗೆ ಬೆಸೆದ ಆರಾಧನೆ. ಇದರ ಬಗೆಗೆ ಮಾತನಾಡುವಾಗ, ವ್ಯವಹರಿಸುವಾಗ ತುಳುವರ ಭಾವನೆಗಳಿಗೆ ತೊಂದರೆಯಾಗದಂತೆ ಎಚ್ಚರ ಇರಲಿ ಎಂದು ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್. ಬಿ. ನಾವೂರು ಹೇಳಿದ್ದಾರೆ.ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ಮಂಗಳೂರಿನ ರಥಬೀದಿಯ ಡಾ.ಪಿ ದಯಾನಂದ ಪೈ, ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಚಾರೋಪನ್ಯಾಸ ಮಾಲಿಕೆ ‘ದೈವಾರಾಧನೆ: ದೈವ ಕಲತ್ತ ಬೇತೆ ಬೇತೆ ಮರ್ಗಿಲ್- ಗೇನದ ತುಲಿಪು’ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು‘ದೈವಾರಾಧನೆಯ ಸಾಮಾನ್ಯ ಸ್ವರೂಪ’ ವಿಷಯದ ಕುರಿತು ಮಾತನಾಡಿದ ಸಂಶೋಧಕ ವಿಜೇತ್ ಎಂ ಶೆಟ್ಟಿ ಮಂಜನಾಡಿ ಜಗತ್ತಿನ ಎಲ್ಲ ದೈವ ದೇವರುಗಳ ಮೂಲ ಒಂದೇ. ಕಾಲ, ಸಂದರ್ಭ ಮತ್ತು ಸ್ಥಳ ಕಾರಣದಿಂದ ವಿಭಿನ್ನ ಸ್ವರೂಪ ಪಡೆದಿವೆ. ತುಳುನಾಡಿನ ಮೂಲ ಆರಾಧನೆಯಲ್ಲಿ ಪಿತೃ, ಪ್ರಕೃತಿ ಮತ್ತು ರಕ್ಷಣಾ ಉದ್ದೇಶಗಳಿವೆ. ವೈಯಕ್ತಿಕ ಭಯ ಭಕ್ತಿಯಿಂದ ಆರಂಭಗೊಂಡ ಆರಾಧನೆ ಮುಂದೆ ಮಾಗಣೆ, ಸೀಮೆಗಳ ವ್ಯಾಪ್ತಿಗೆ ಬಂದವು. ಮುಂದೆ ರಾಜನ್ಯಾಯಕ್ಕೆಶಕ್ತಿ ತುಂಬಲು ರಾಜನ್ ದೈವಗಳ ಆರಾಧನೆ ಆರಂಭವಾಯಿತು ಎಂದರು. ದೈವಾರಾಧನೆಯ ಬಗೆಗೆ ಸಂಶೋಧನೆಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಸರಿಯಾದ ದಾಖಲೀಕರಣ ನಡೆಯುತ್ತಿಲ್ಲ. ಅದು ಆಗಬೇಕಿದೆ ಎಂದರು.ಆಶಯ ಭಾಷಣ ಮಾಡಿದ ತುಳುಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ದೈವಾರಾಧನೆಯಲ್ಲಿರುವ ತುಳು ಭಾಷೆ, ಸಂಸ್ಕೃತಿಯ ಮೂಲಸತ್ವ ಉಳಿಸಿಕೊಳ್ಳಬೇಕು. ಗಡಿನಾಡಿನಲ್ಲಿ ತುಳುದೈವಗಳು ಮಲಯಾಳಂನ ತೈಯಂನ ಪ್ರಭಾವಕ್ಕೆ ಒಳಗಾಗುತ್ತಿರುವುದು, ತುಳು ದೈವಗಳು ಮಲಯಾಳಂನಲ್ಲಿ ಮಾತನಾಡುತ್ತಿರುವುದು ಆರಂಭವಾಗಿದೆ ಎಂದರು.ಡಾ.ಪಿ ದಯಾನಂದ ಪೈ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್, ತುಳುವಿಭಾಗದ ಸಂಯೋಜಕ ಡಾ.ಜ್ಯೋತಿಪ್ರಿಯ ಉಪಸ್ಥಿತರಿದ್ದರು.ತುಳುಪೀಠದ ಸಹಾಯಕರಾದ ಪ್ರಸಾದ್ ಅಂಚನ್ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು.