ಕನ್ನಡಪ್ರಭ ವಾರ್ತೆ ಕನಕಗಿರಿ
ಕನಕಗಿರಿ ಕ್ಷೇತ್ರ ವ್ಯಾಪ್ತಿಯ 266 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ತಾಪಮಾನ ಹೆಚ್ಚಾಗಿರುವುದರಿಂದ ಮಹಿಳೆಯರು, ವಯೋವೃದ್ಧರು ಬೆಳಗಿನ ಸಮಯದಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದರು. ಇನ್ನೂ ವಿವಿಧ ಬೂತ್ ಗಳಲ್ಲಿ ವೀಲ್ ಚೇರ್ ಗಳಲ್ಲಿ ತೆರಳಿ ಮತ ಹಾಕಿದರು. ಯುವ ಮತದಾರರು ಮಧ್ಯಾಹ್ನದ ಅವಧಿಯಲ್ಲಿ ಮತ ಹಾಕಿದರು. ಮತದಾರರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ನಾನಾ ಸೌಲಭ್ಯ ಕಲ್ಪಿಸಲಾಗಿತ್ತು. ಮತಗಟ್ಟೆ ಪರಿಶೀಲನೆ: ಪಟ್ಟಣದ ನಾನಾ ಮತಗಟ್ಟೆಗಳಿಗೆ ಸಾಮಾನ್ಯ ವೀಕ್ಷಕಿ ಹೇಮಾಪುಷ್ಪ ಶರ್ಮಾ, ಸಹಾಯಕ ಚುನಾವಣಾಧಿಕಾರಿ ಮಲ್ಲಪ್ಪ ತೊದಲಬಾಗಿ, ತಹಸೀಲ್ದಾರ ವಿಶ್ವನಾಥ ಮುರುಡಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಲ್. ವೀರೇಂದ್ರಕುಮಾರ ಸೇರಿದಂತೆ ಚುನಾವಣಾ ವಿಭಾಗದ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಫೇಕ್ ಮತ ಚಲಾವಣೆಗೆ ವಿರೋಧ:
ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಕುಮಾರಸ್ವಾಮಿ ಕಲುಬಾಗಿಲಮಠ ಹಾಗೂ ಅವರ ಪತ್ನಿ ಪಲ್ಲವಿ ದುಬೈನಿಂದ ಬಂದು ಹಕ್ಕು ಚಲಾಯಿಸಿದರು. ೭ನೇ ವಾರ್ಡಿನ ನಿವಾಸಿಯಾಗಿರುವ ಕುಮಾರಸ್ವಾಮಿ ಕಲುಬಾಗಿಲಮಠ ಹಾಗೂ ಪತ್ನಿ ಪಲ್ಲವಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 2020ರ ಮೇ 21ರಂದು ಕುಮಾರಸ್ವಾಮಿ ತಂದೆ-ತಾಯಿ ಒಂದೇ ದಿನ ನಿಧನರಾಗಿದ್ದರು. ಆದರೆ ಕೊರೋನಾ ಹಿನ್ನೆಲೆ ತಂದೆ-ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ನಿಮಿತ್ತ ಪಟ್ಟಣಕ್ಕೆ ಆಗಮಿಸಿ ಹಕ್ಕನ್ನು ಚಲಾಯಿಸಿದ್ದಾರೆ.