ವೀರಶೈವ ಪರಂಪರೆಯಲ್ಲಿ ಇಷ್ಟಲಿಂಗವು ಶಿವನ ಸ್ಮರಣೆಯ ಸಂಕೇತ

KannadaprabhaNewsNetwork |  
Published : Oct 01, 2026, 01:15 AM IST
ಪೋಟೋ, 30ಎಚ್‌ಎಸ್‌ಡಿ2: ಹೊಸದುರ್ಗ ತಾಲೂಕಿನ ದೇವಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಂಭಾಪುರಿ ಜಗದ್ಗುರುಗಳ ಧರ್ಮ ಜಾಗೃತಿ ಸಮಾರಮಭವನ್ನು ವಿಧಾನ ಪರಿಷತ್‌ ಸದಸ್ಯ ನವೀನ್‌ ಉದ್ಗಾಟಿಸಿದರು. | Kannada Prabha

ಸಾರಾಂಶ

ಹೊಸದುರ್ಗ ತಾಲೂಕಿನ ದೇವಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಂಭಾಪುರಿ ಜಗದ್ಗುರುಗಳ ಧರ್ಮ ಜಾಗೃತಿ ಸಮಾರಮಭವನ್ನು ವಿಧಾನ ಪರಿಷತ್‌ ಸದಸ್ಯ ನವೀನ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವೀರಶೈವ ಪರಂಪರೆಯಲ್ಲಿ ಇಷ್ಟಲಿಂಗವು ಶಿವನ ನಿರಂತರ ಸ್ಮರಣೆಯ ಸಂಕೇತವಾಗಿದ್ದು ನಮ್ಮ ಮನಸ್ಸನ್ನು ಶುದ್ಧಗೊಳಿಸುವ ಸತ್ಯ ನೀತಿ ಸದಾಚಾರದ ಮಾರ್ಗದಲ್ಲಿ ನಡೆಯುವ ಸಂಕಲ್ಪವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಭಗವತ್ಪಾದರು ಹೇಳಿದರು.

ತಾಲೂಕಿನ ದೇವಪುರ ಗ್ರಾಮದಲ್ಲಿ ಬುಧವಾರ ಜರುಗಿದ ರಂಭಾಪುರಿ ಜಗದ್ಗುರುಗಳ ಇಷ್ಠಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡದರು.

ಇಂದು ಮನುಷ್ಯನಲ್ಲಿರುವ ಸ್ವಾರ್ಥ ಸಂಕುಚಿತ ಮನೋಭಾವನೆಯಿಂದ ದೇವರು ಧರ್ಮ ಜಾತಿಯ ಹೆಸರಿನಲ್ಲಿ ನಡೆಯಬಾರದ ಅನೇಕ ದುರ್ಘಟನೆ ಆತಂಕಗಳನ್ನು ಕಾಣುತ್ತಿದ್ದವೆ. ದೇವನೊಬ್ಬ ನಾಮ ಹಲವು ಎನ್ನುವ ಸತ್ಯವನ್ನು ಅರಿತರೆ ಮನುಷ್ಯ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ನೀವು ನಂಬಿದ ಯಾವುದೇ ದೇವರಲ್ಲಿ ನಂಬಿಕೆ ವಿಶ್ವಾಸ ಅಚಲವಾಗಿದ್ದರೆ ನೀವು ಬೇಡಿದ ಇಷ್ಟಾರ್ಥ ಫಲಗಳು ಪ್ರಾಪತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಧರ್ಮ ಎಂದರೆ ಕೇವಲ ಆಚರಣೆ ಅಲ್ಲ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುವುದು ಮತ್ತು ಉತ್ತಮ ಜೀವನ ನಡೆಸುವುದೇ ನಿಜವಾದ ಧರ್ಮ. ಜೀವ ಮತ್ತು ಶಿವನ ಆಧ್ಯಾತ್ಮಿಕ ಸಂಬಂಧವನ್ನು ಅರಿತು ಶಿವನ ಸಾಕ್ಷಾತ್ಕಾರದ ಕಡೆಗೆ ಸಾಗುವುದು ವೀರಶೈವ ಧರ್ಮ ಸಾಧನೆಯ ಗುರಿಯಾಗಿದೆ ಎಂದರು.

ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ ಉಸಿರು ಇರುತ್ತದೆ ಸಾವನ್ನಪ್ಪಿದಾಗ ಉಸಿರು ಇರುವುದಿಲ್ಲ ಹೆಸರು ಇರುತ್ತದೆ ಹಾಗಾಗಿ ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಹೆಸರು ಉಳಿಯುವಂತಹ ಕೆಲಸ ಮಾಡಬೇಕು ತನ್ನ ಜೀವನದಲ್ಲಿ ಶಿವತತ್ವ ಅಳವಡಿಸಿಕೊಂಡು ಮಾತಿನಲ್ಲಿ ಸತ್ಯ ಕಾಯಕದಲ್ಲಿ ಪ್ರಾಮಾಣಿಕತೆ ಹೃದಯದಲ್ಲಿ ದಯೆ ನಡೆ ನುಡಿಯಲ್ಲಿ ಮಾನವೀಯತೆಯಿಂದ ಬಾಳುವುದೇ ಮನುಷ್ಯ ಜೀವನದ ಗುರಿಯಾಗಬೇಕು ಎಂದರು.

ಕೆ.ಎಸ್.ಕಲ್ಮಠ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಯಿಲ್ಲದೇ ಬಳಲುತ್ತಿರುವ ಈ ಭಾಗದಲ್ಲಿ ಜಗದ್ಗುರುಗಳ ಶುಭಾಗಮನದಿಂದ ಮಳೆ ಪ್ರಾರಂಭವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಭಾರತೀಯ ಪರಂಪರೆ, ಸಂಸ್ಕೃತಿ, ನಡೆನುಡಿಯನ್ನು ಅತ್ಯಂತ ಶ್ರೇಷ್ಠವಾಗಿ ಎತ್ತಿ ಹಿಡಿಯುವ ಕೆಲಸ ಮಾಡಿದವರು ಪಂಚಪೀಠಗಳು. ಬಸವೇಶ್ವರರ ಬಗ್ಗೆ ಗೌರವವಿದೆ ಆದರೆ ಒಬ್ಬರು ಇನ್ನೋಬ್ಬರನ್ನು ಹೀಗೆಳೆಯುವ ಕೆಲಸ ವಾಗಬಾರದು ವೀರಶೈವರು ಲಿಂಗಾಯಿತರು ಎಲ್ಲರೂ ಒಗ್ಗೂಡುವ ಕೆಲಸವನ್ನು ಎಲ್ಲಾ ಪೀಠಾಧೀಶ್ವರರು ಮಾಡಬೇಕು ಎಂದರು.

ಬಿಜೆಪಿ ಮುಖಂಡ ಲಿಂಗಮೂರ್ತಿ ಮಾತನಾಡಿ ಲಿಂಗ ದೀಕ್ಷೆಯ ಪರಂಪರೆಯನ್ನುನೀ ಸಮಾಜಕ್ಕೆ ಕೊಟ್ಟಿದ್ದು ಪಂಚಪೀಠಗಳು ನಂತರ ಬಸವಣ್ಣನವರು ಶೂದ್ರ ಸಮುದಾಯಗಳಿಗೆ ನೀಡುವ ಮೂಲಕ ಲಿಂಗವಂತ ಪರಂಪರೆಯನ್ನು ಬೆಳೆಸಿದರು ಹಾಗಾಗಿ ವೀರಶೈವ ಲಿಂಗಾಯಿತ ಬೇರೆ ಬೇರೆಯಲ್ಲ ಹಿಂದೆಯೂ ಮುಂದೆಯೂ ಒಂದೇ ಆಗಿರುತ್ತದೆ ಇದರಲ್ಲಿ ಯಾವ ಅನುಮಾನವೂ ಬೇಡ ಎಂದರು.

ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ , ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ನವೀನ್‌ ಸಮಾರಂಭವನ್ನು ಉದ್ಘಾಸಿದರು.

ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಶಿವಲಿಂಗಪ್ಪ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಆರ್.ಹನುಮಂತಪ್ಪ, ಕೆ.ಅನಂತ್, ಜಿ.ಟಿ.ಅಜ್ಜಪ್ಪ, ದೊಡ್ಡಘಟ್ಟದ ದ್ಯಾಮಣ್ಣ, ಮಾವಿನಕಟ್ಟಿ ಡಿ.ಗುರುಸ್ವಾಮಿ, ಹೆಬ್ಬಳ್ಳಿ ಎಚ್.ಸಿ.ಮಲ್ಲಿಕಾರ್ಜುನ, ಕೋಡಿಹಳ್ಳಿ ತಮ್ಮಣ್ಣ ಪಾಲ್ಗೊಂಡು ಗುರುರಕ್ಷೆ ಪಡೆದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿದರು ನಾಗಲಾಂಬಿಕೆ ಕಲ್ಮಠ ಭಕ್ತಿಗೀತೆ ಹಾಡಿದರು. ವಿರೂಪಾಕ್ಷಪ್ಪ ಸ್ವಾಗತಿಸಿದರು. ಧನಂಜಯ ದೇವಪುರ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಿತು. ತಾಲೂಕಿನ ವಿವಿಧ ಬಾಗಗಳಿಂದ ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ