ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದ ಪಡೀಲ್‌ನಲ್ಲಿ ಸ್ವಂತ ಆಡಳಿತ ಕಟ್ಟಡವನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ೩೨ ಶಾಖೆಗಳನ್ನು ಹೊಂದಿದೆ. ಇದೀಗ ತನ್ನ ಸ್ವಂತ ಮಾಲೀಕತ್ವದ ನೂತನ ೩೩ನೇ ಕೃಷ್ಣಾಪುರ ಶಾಖೆಯು ಮಂಗಳೂರು ತಾಲೂಕಿನ ಸುರತ್ಕಲ್‌ನ ಕೃಷ್ಣಾಪುರ ೬ನೇ ಬ್ಲಾಕ್‌ನಲ್ಲಿರುವ ಐಕನ್ ಪ್ಲಾನೆಟ್ ಕಟ್ಟಡದಲ್ಲಿ ಜುಲೈ ೧೫ರಂದು ಉದ್ಘಾಟನೆಗೊಳ್ಳಲಿದೆ.ಬೆಳಗ್ಗೆ 11.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳ (ನಿ.) ಬೆಂಗಳೂರು ಇದರ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ವಹಿಸಲಿದ್ದಾರೆ. ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಇವರು ಭದ್ರತಾಕೋಶ ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ. ಮಾಜಿ ಶಾಸಕ ಮೊಯ್ದಿನ್ ಬಾವಾರವರು ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಅವರು ಇ-ಮುದ್ರಾಂಕ ಸೇವೆಗೆ ಚಾಲನೆ ನೀಡುವರು.ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇವರ ನುರಿತ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಸಣಾ ಶಿಬಿರ ಹಾಗೂ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇಲ್ಲಿನ ನುರಿತ ವೈದ್ಯರ ತಂಡದಿಂದ ಉಚಿತ ದಂತ ತಪಸಣಾ ಶಿಬಿರ ಬೆಳಗ್ಗೆ 9.30 ರಿಂದ ಅಪರಾಹ್ನ ೧೨.೩೦ ರವರೆಗೆ ಆಯೋಜಿಸಲಾಗಿದೆ.
ಖ್ಯಾತ ಚಲನಚಿತ್ರ ನಟರಾಗಿರುವ ನವೀನ್ ಡಿ. ಪಡೀಲ್ ಉಪಸ್ಥಿತಿಯಲ್ಲಿ ಜಿಲ್ಲೆಯ ಪ್ರಖ್ಯಾತ ಕಲಾವಿದರಾದ ಹುಸೈನ್ ಕಾಟಿಪಳ್ಳ ಹಾಗೂ ತಂಡದಿಂದ ಬೆಳಗ್ಗೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಉದ್ಘಾಟನಾ ಕೊಡುಗೆ: ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯಕ್ತ ನಿರಖು ಠೇವಣಿಯ ಮೇಲೆ ವಿಶೇಷ ಬಡ್ಡಿ ದರವನ್ನು ನೀಡಲಾಗುವುದು ಹಾಗೂ ಗ್ರಾಹಕರಿಗೆ ಉಚಿತ ಉಡುಗೊರೆಯ ಜೊತೆಗೆ ಪ್ರತಿ ಗ್ರಾಂಗೆ ಗರಿಷ್ಟ ಚಿನ್ನಾಭರಣ ಸಾಲ ನೀಡಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.