ಕಾಂಗ್ರೆಸ್ ಆಳ್ವಿಕೆಯಲ್ಲಿ ಉಗ್ರರು, ಜಿಹಾದಿಗಳ ಹೆಚ್ಚಳ

KannadaprabhaNewsNetwork |  
Published : Apr 21, 2024, 02:15 AM IST
20ಕೆಡಿವಿಜಿ8, 9, 10-ದಾವಣಗೆರೆ ನಗರದ ವಿವಿಧೆಡೆ ಶನಿವಾರ ಬೆಳಿಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು. ಕಮಲಾ ನಿರಾಣಿ, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ವೀರೇಶ ಇತರರು ಇದ್ದರು. .............20ಕೆಡಿವಿಜಿ11-ದಾವಣಗೆರೆ ನಗರದ ವಿವಿಧೆಡೆ ಶನಿವಾರ ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಆಟೋ ರಿಕ್ಷಾ ಚಾಲಕರು, ಸೊಪ್ಪು ತರಕಾರಿ ವ್ಯಾಪಾರಸ್ಥರು, ಪೌರಕಾರ್ಮಿಕರಲ್ಲಿ ಮತಯಾಚಿಸಿದರು. ಕಮಲಾ ನಿರಾಣಿ, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ವೀರೇಶ ಇತರರು ಇದ್ದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಹಾದಿಗಳು, ಕೇಂದ್ರದಲ್ಲಿ ಆ ಪಕ್ಷ ಅಧಿಕಾರಕ್ಕೆ ಬಂದರೆ ಭಯೋತ್ಪಾದಕರು ಹೆಚ್ಚುತ್ತಾರೆ. ಎರಡೂ ಕಡೆ ಅದು ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರಿಗೂ ರಕ್ಷಣೆ ಇಲ್ಲದಂತಾಗುತ್ತದೆ. ಇದನ್ನೆಲ್ಲಾ ಮನಗಂಡ ಜನರು ಮತ್ತೆ ನರೇಂದ್ರ ಮೋದಿಗೆ ಪ್ರಧಾನಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದ್ದಾರೆ.

- ಮತಯಾಚನೆ ವೇಳೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಾಗ್ದಾಳಿ । ಮೋದಿ ಪ್ರಧಾನಿಯಾಗಲು ಮತ ಹಾಕಿ ಎಂದು ಮನವಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಹಾದಿಗಳು, ಕೇಂದ್ರದಲ್ಲಿ ಆ ಪಕ್ಷ ಅಧಿಕಾರಕ್ಕೆ ಬಂದರೆ ಭಯೋತ್ಪಾದಕರು ಹೆಚ್ಚುತ್ತಾರೆ. ಎರಡೂ ಕಡೆ ಅದು ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರಿಗೂ ರಕ್ಷಣೆ ಇಲ್ಲದಂತಾಗುತ್ತದೆ. ಇದನ್ನೆಲ್ಲಾ ಮನಗಂಡ ಜನರು ಮತ್ತೆ ನರೇಂದ್ರ ಮೋದಿಗೆ ಪ್ರಧಾನಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ನಗರದ ಟಿವಿ ಸ್ಟೇಷನ್ ಉದ್ಯಾನವನ, ಡಿಸಿಎಂ ಟೌನ್ ಶಿಪ್‌ನ ರಾಜನಹಳ್ಳಿ ಹನುಮಂತಪ್ಪ ಉದ್ಯಾನವನ, ಜಯನಗರ ಉದ್ಯಾನವನ, ಸ್ವಾಮಿ ವಿವೇಕಾನಂದ ಬಡಾವಣೆ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಇಂಡಿಯನ್ ಕಾಫಿ ಬಾರ್, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಹೀಗೆ ನಾನಾ ಕಡೆ ಶನಿವಾರ ಬೆಳಗ್ಗೆ ಮತಯಾಚಿಸಿ ಅವರು ಮಾತನಾಡಿದರು. ಜಿಹಾದಿಗಳು, ಭಯೋತ್ಪಾದಕ ಕಾಂಗ್ರೆಸ್ ಅಧಿಕಾರ ಬಂದಾಗಲೆಲ್ಲಾ ಹೆಚ್ಚುತ್ತಾರೆಂಬುದು ಜನರ ಅರಿವಿಗೂ ಇದೆ ಎಂದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ 10 ವರ್ಷವಾಯಿತು. ಭಯೋತ್ಪಾದಕರೆಲ್ಲಾ ಭಾರತವನ್ನು ಬಿಟ್ಟು ಹೋಗಿದ್ದಾರೆ. ಅದೆಷ್ಟೋ ಉಗ್ರರು ಜೀವವನ್ನೇ ಬಿಟ್ಟು ಹೋಗಿದ್ದಾರೆ. ನಮ್ಮ ಪ್ರಧಾನಿ ಮೋದಿ ಅಷ್ಟಕ್ಕೆ ಸುಮ್ಮನಾಗಿಲ್ಲ. ಭಾರತಕ್ಕೆ ಮೋಸ್ಟ್ ವಾಟೆಂಡ್ ಆಗಿದ್ದ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟುವಲ್ಲೂ ಯಶಸ್ವಿಯಾಗಿದ್ದಾರೆ. ಅಂತಹ ದೇಶಭಕ್ತ, ರಕ್ಷಕ ಮತ್ತೊಮ್ಮೆ ಪ್ರಧಾನಿಯಾಗಬೇಕು. ನೀವೆಲ್ಲರೂ ನನ್ನ ಚಿಹ್ನೆ ಕಮಲದ ಗುರುತಿಗೆ ನೀಡಿ. ನಿಮ್ಮ ಒಂದೊಂದು ಮತವೂ ಸ್ವತಃ ನರೇಂದ್ರ ಮೋದಿಗೆ ಹಾಕಿ ಎಂದು ಹೇಳಿದರು.

ಮೋದಿ ಆಡಳಿತ, ದಾವಣಗೆರೆ ಕ್ಷೇತ್ರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಜನರು ದೇಶಕ್ಕೆ ಮೋದಿ, ದಾವಣಗೆರೆಗೆ ಗಾಯತ್ರಿ ಅಂತಾ ತೀರ್ಮಾನಿಸಿದ್ದಾರೆ. ಪತಿ, ಸಂಸದ ಜಿ.ಎಂ.ಸಿದ್ದೇಶ್ವರ ಸದಾ ಜನರ ಜೊತೆ ಬೆರೆತು, ಎಲ್ಲರ ಕೈಗೂ ಸುಲಭವಾಗಿ ಸಿಗುವಂತಹ ವ್ಯಕ್ತಿ. ಯಾರು ಬೇಕಿದ್ದರೂ ಸಿದ್ದೇಶಣ್ಣ ಅಂತಾ ಬಂದು ಸಲುಗೆಯಿಂದ ಮಾತನಾಡಿಸಿಕೊಂಡು ಹೋಗಬಹುದು. ನಮ್ಮನ್ನು ಮಾತನಾಡಿಸಲು ಯಾವುದೇ ಅಡ್ಡಿ, ಆತಂಕಗಳು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಕಮಲಾ ಮುರುಗೇಶ ನಿರಾಣಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ಹೇಮಂತಕುಮಾರ, ಕೆ.ಎಂ.ವೀರೇಶ, ಪಿ.ಎಸ್.ಜಯಣ್ಣ, ಜೀವ ಬಸವರಾಜಯ್ಯ, ಶಾಮನೂರು ಶಿವು ಗ್ಯಾರಹಳ್ಳಿ ಸೇರಿದಂತೆ ಅನೇಕರು ಇದ್ದರು.

ಇದೇ ವೇಳೆ ಸೊಪ್ಪು- ತರಕಾರಿ ವ್ಯಾಪಾರಸ್ಥರು, ಆಟೋ ರಿಕ್ಷಾ, ಸರಕು ಸಾಗಾಣಿಕೆ ಚಾಲಕರು, ಪೌರಕಾರ್ಮಿಕರು, ಶ್ರಮಿಕರು ಹೀಗೆ ಎಲ್ಲ ಜನರ ಬಳಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.

- - - -20ಕೆಡಿವಿಜಿ8, 9, 10:

ದಾವಣಗೆರೆ ನಗರದ ವಿವಿಧೆಡೆ ಶನಿವಾರ ಬೆಳಿಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು. ಕಮಲಾ ನಿರಾಣಿ, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ವೀರೇಶ ಇತರರು ಇದ್ದರು. -20ಕೆಡಿವಿಜಿ11:

ದಾವಣಗೆರೆ ನಗರದ ವಿವಿಧೆಡೆ ಶನಿವಾರ ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಆಟೋ ರಿಕ್ಷಾ ಚಾಲಕರು, ಸೊಪ್ಪು ತರಕಾರಿ ವ್ಯಾಪಾರಸ್ಥರು, ಪೌರಕಾರ್ಮಿಕರಲ್ಲಿ ಮತಯಾಚಿಸಿದರು. ಕಮಲಾ ನಿರಾಣಿ, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ವೀರೇಶ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ