ನೃತ್ಯ ಮೂಲಕ ದೈಹಿಕ ಶಕ್ತಿ ಅಧಿಕ: ಡಾ. ಮಂತರ್ ಗೌಡ

KannadaprabhaNewsNetwork |  
Published : May 26, 2024, 01:35 AM IST
ರಾಜ್ಯಮಟ್ಟದ ನೃತ್ಯ ಸ್ಪರ್ಧೆ | Kannada Prabha

ಸಾರಾಂಶ

ಕುಶಾಲನಗರದಲ್ಲಿ ಟೀಮ್‌ ಡ್ರೀಮ್‌ ಸ್ಟಾರ್‌ ನೃತ್ಯ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮ ನಡೆಯಿತು. ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಭಕ್ತರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನೃತ್ಯ ಮೂಲಕ ಚಲನೆಯ ವ್ಯಾಪ್ತಿ, ದೈಹಿಕ ಶಕ್ತಿ ಮತ್ತು ದೇಹದ ತ್ರಾಣವನ್ನು ಅಧಿಕಗೊಳಿಸುತ್ತದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನೃತ್ಯ ವ್ಯಾಯಾಮದ ಒಂದು ಭಾಗವಾಗಿದೆ ಮತ್ತು ಚಿಕ್ಕ ವಯಸ್ಸಿನಿಂದಲೇ ನೃತ್ಯದ ಹಿಡಿತ ಜೀವನದಲ್ಲಿ ಸಕ್ರಿಯವಾಗಿರಲು ಪ್ರೇರಪಣೆ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ. ಪಿ. ಶಶಿಧರ್, ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಆದಮ್ ಮತ್ತಿತರರು ಮಾತನಾಡಿದರು.

ಪಟ್ಟಣದ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು. ಜೂನಿಯರ್ ವಿಭಾಗದಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ನೃತ್ಯ ಸಂಸ್ಥೆ ಪ್ರಥಮ, ಮಡಿಕೇರಿಯ ನಾಟ್ಯಕಲ ದ್ವಿತೀಯ, ಕಿಂಗ್ಸ್ ಆಫ್ ಕೂರ್ಗ್ ತೃತೀಯ ಬಹುಮಾನ ಪಡೆಯಿತು.

ಸೀನಿಯರ್ ವಿಭಾಗದಲ್ಲಿ ಸೋಮವಾರಪೇಟೆಯ ಟೀಮ್ ಅಡ್ವೆಂಚರ್ ಡಾನ್ಸ್ ಸ್ಟುಡಿಯೋ ಪ್ರಥಮ, ಮಡಿಕೇರಿಯ ನಾಟ್ಯಕಲಾ ನೃತ್ಯ ಸಂಸ್ಥೆ ದ್ವಿತೀಯ ಬಹುಮಾನಗಳಿಸಿತು.

ಚಾಮರಾಜನಗರದ ಪ್ರವೀಣ್ ಕುಮಾರ್, ಬೆಂಗಳೂರಿನ ಸುಮಿತ್, ಭೂಮಿಕ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷರಾದ ಬೋಸ್ ಮೊಣ್ಣಪ್ಪ, ಸರಳ ರಾಮಣ್ಣ, ಪತ್ರಕರ್ತರಾದ ಜಯಪ್ರಕಾಶ್, ಮಹಮದ್ ಮುಸ್ತಾಫ, ಸುರ್ಜಿತ್ ಇದ್ದರು.

ಆಯೋಜಕರಾದ ಶರಣ್, ಆನಂದ್, ಪವನ್, ಸೀಮಾ, ಚೈತನ್ಯ, ವಿನುತಾ, ಯಶಸ್, ಕಾರ್ತಿಕ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!