ಗುರು-ಶಿಷ್ಯೆ ಪರಂಪರೆ ಬೆಳೆದು ಭಾರತವು ಜಗದ್ಗುರುವಾಗಿದೆ: ಬೂದೀಶ್ವರ ಶ್ರೀ

KannadaprabhaNewsNetwork |  
Published : Oct 09, 2026, 02:30 AM IST
ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು. | Kannada Prabha

ಸಾರಾಂಶ

ಹಿಂದೆ ಈ ಜಗತ್ತಿನಲ್ಲಿ ಮೊದಲು ರಾಜನ ನಂತರ ಗುರುವಿಗೆ ಸ್ಥಾನ ನೀಡುವಂತಹ ಪರಂಪರೆಯಿತ್ತು. ಆದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನ ನೀಡಿ ಗುರು-ಶಿಷ್ಯೆ ಪರಂಪರೆ ಬೆಳೆದು ಭಾರತವು ಜಗದ್ಗುರುವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಹಿಂದೆ ಈ ಜಗತ್ತಿನಲ್ಲಿ ಮೊದಲು ರಾಜನ ನಂತರ ಗುರುವಿಗೆ ಸ್ಥಾನ ನೀಡುವಂತಹ ಪರಂಪರೆಯಿತ್ತು. ಆದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನ ನೀಡಿ ಗುರು-ಶಿಷ್ಯೆ ಪರಂಪರೆ ಬೆಳೆದು ಭಾರತವು ಜಗದ್ಗುರುವಾಗಿದೆ ಎಂದು ಹೊಸಳ್ಳಿ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದ ಬೂದೀಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಬೂದಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ 1995-96ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ ಒಬ್ಬ ತಾಯಿಯ ಸಮಾನವಾಗಿದ್ದು, ಮಗುವಿನ ಹಂತಕ್ಕೆ ಇಳಿದು ಅಕ್ಷರ ಕಲಿಸುವುದರ ಮೂಲಕ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತಾನೆ. ಹಿಂದಿನಿಂದಲೂ ನಾವು ಶಾಲೆಗೆ ಶಾಲಾ ಗುಡಿ ಅಂತ ಕರೆಯುತ್ತಾ ಬಂದಿದ್ದೇವೆ. ಹೀಗಾಗಿ ಸಾಕ್ಷರತಾ ದೇವರಾಗಿರುವ ಶಿಕ್ಷಕನನ್ನು ಗೌರವಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಹರ್ಲಾಪೂರದ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ ಮಾತನಾಡಿ, ಜಾತಿ-ಭೇದವಿಲ್ಲದೇ ಈ ನಾಡಿನಲ್ಲಿ ಶಿಷ್ಯರು ಗುರುವಿಗೆ ವಂದನೆ ಸಲ್ಲಿಸುವ ಪರಂಪರೆಯು ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದು ಪ್ರಸ್ತುತ ದಿನಗಳಲ್ಲಿ ಈ ಪರಂಪರೆ ಶೃದ್ಧೆಯಿಂದ ನಡೆಯುತ್ತಿರುವುದು ಶ್ಲಾಘನೀಯ. ಅಜ್ಞಾನದ ಕತ್ತಲೆಯಿಂದ ಬಿಡುಗಡೆಗೊಳಿಸಿ ಸುಜ್ಞಾನದ ಬೆಳಕೆನೆಡೆಗೆ ತರುವುದೇ ಗುರುವಿನಲ್ಲಿರುವ ಶಕ್ತಿಯಾಗಿದೆ ಎಂದರು.

ನಿವೃತ್ತ ಪ್ರಾ. ಪ್ರೊ. ಕೆ.ಎಚ್. ಬೇಲೂರು ಉಪನ್ಯಾಸ ನೀಡಿ, ತಂದೆ-ತಾಯಿ ಜೀವ ಕೊಡುತ್ತಾರೆ. ಶಿಕ್ಷಕ ಜೀವನ ರೂಪಿಸುತ್ತಾನೆ ಇಂತಹ ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಿಂತಲೂ ಶ್ರೇಷ್ಠವಾಗಿದ್ದು ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದರೂ ಸಹ ತಮ್ಮ ಶಿಕ್ಷಕ ವೃತ್ತಿಗೆ ಮಹತ್ವದ ಸ್ಥಾನ ನೀಡಿದ್ದರು. ಲಕ್ಕುಂಡಿ ಗ್ರಾಮ ಕೇವಲ ನಾಣ್ಯಗಳನ್ನು ಟಂಕಿಸುವ ಹಾಗೂ ದೇವಾಲಯಗಳ ತವರೂರು ಮಾತ್ರ ಅಲ್ಲ. ಸರ್ ಸಿದ್ದಪ್ಪ ಕಂಬಳಿ ಅವರಂತಹ ಮೌಲ್ಯಯುತ ಶಿಕ್ಷಕರನ್ನು ನೀಡಿದಂತ ಐತಿಹಾಸಿಕ ಗ್ರಾಮವಾಗಿದೆ ಎಂದು ತಿಳಿಸಿದರು.

ಶಿಕ್ಷಕರನ್ನ, ಬೂದಿಶ್ವರ ಶ್ರೀಗಳು ಹಾಗೂ ಡಾ. ಕೊಟ್ಟೂರೇಶ್ವರ ಶ್ರೀಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಬೂದಿಶ್ವರ ದೇವಸ್ಥಾನದವರೆಗೆ ಹೂವು ಮಳೆಯೊಂದಿಗೆ ಸ್ವಾಗತಿಸಿಸಲಾಯಿತು.

ಶಿಕ್ಷಕ ವಿ.ವಿ. ಮಣ್ಣಬಸಣ್ಣವರ, ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ.ಜೆ. ನದಾಫ ಮಾತನಾಡಿದರು.

ಶಿಕ್ಷಕರಾದ ಯು.ಎಸ್. ಬೆಂತೂರು, ವಿ.ಎಸ್. ಕಾಳಗಿ, ವಿ.ಐ. ಬಡಿಗೇರ, ಎಂ.ಎಲ್. ಹೊಸಮನಿ, ಡಿ.ಎಚ್. ಮಾದರ, ಎಸ್.ಸಿ. ಛಬ್ಬೇರಭಾವಿ, ಪಿ.ಎಸ್. ಕೊರಡೂರು, ಎಸ್.ಎಸ್. ಗಾಣದಾಳಮಠ, ಐ.ಎಸ್. ಮಟ್ಟಿ, ಎಫ್.ಎಂ. ಜಾಲಿಹಾಳ, ಆರ್.ಎಸ್. ಆಲೂರು, ಎಸ್.ಬಿ. ಕರಬಸನಗೌಡ್ರ, ವಿ.ವಿ. ಮಣ್ಣಬಸಣ್ಣವರ, ಎನ್.ಕೆ. ಅಂಬಕ್ಕಿ, ಎಸ್.ಎಲ್. ಪತ್ತಾರ, ಎಸ್.ಬಿ. ಪಾಟೀಲ, ಶ್ರೀಶೈಲ ಕತ್ತಿ ಸೇರಿ ಇತರರು ಇದ್ದರು. ಅನಿತಾ ದೇಶಪಾಂಡೆ, ಷಡಕ್ಷರಯ್ಯ ಬದ್ನಿಮಠ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಶಂಭು ಅರಿಷಿಣದ ಸ್ವಾಗತಿಸಿದರು. ಎಸ್.ಸಿ. ಹಿರೇಮಠ ನಿರೂಪಿಸಿದರು. ಶಿಕ್ಷಕ ಮಲ್ಲೇಶ ಹಣವಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಗೆ ಪರಿಗಣಿಸಿ
ಗಾಂಧಿ ತತ್ವ ಅನುಷ್ಠಾನವೇ ನಿಜವಾದ ಗೌರವ