ಕನ್ನಡಪ್ರಭ ವಾರ್ತೆ ಬೆಂಗಳೂರು
ನೇಗಿಲ ಯೋಗಿ ಟ್ರಸ್ಟ್ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಕೊರಚ ಮಾತುಕತೆ’ ಮತ್ತು ಇಂಗ್ಲಿಷ್ ಅನುವಾದವಾದ ‘ದಿ ಕೊರಚಾಸ್ ಆಫ್ ಕರ್ನಾಟಕ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಜಗತ್ತಿನಲ್ಲಿ ಪ್ರಸ್ತುತ 6703 ಭಾಷೆಗಳಿವೆ. ಆದರೆ ಅರ್ಧ ಜಗತ್ತು ಕೇವಲ 10 ಭಾಷೆಗಳನ್ನು ಮಾತ್ರ ವ್ಯವಹಾರಕ್ಕೆ ಬಳಸುತ್ತದೆ. ಈಗಾಗಲೇ ಸಾವಿರಾರು ಭಾಷೆಗಳು ನಶಿಸಿವೆ. ಬಳಸದೇ ಹೋದರೆ ಭಾಷೆ ಉಳಿಯುವುದಿಲ್ಲ. ಕೆಲ ಭಾಷೆಗಳನ್ನು ಅವರವರ ಸಮುದಾಯದಲ್ಲೂ ಬಳಸುತ್ತಿಲ್ಲ. ದೇಶದ 74,600 ಚದರ ಕಿ.ಮೀ. ಕಾಡಿನೊಳಗೆ 26 ಮಾದರಿಯ ಸಾಂಸ್ಕೃತಿಕ ವಿಶೇಷದ ಜನ ವಾಸಿಸುತ್ತಿದ್ದು, ಇವರ ಭಾಷೆ, ಆಹಾರ ಪದ್ಧತಿ, ಸಂಸ್ಕೃತಿಯ ಬಗ್ಗೆ ನಮಗೆ ತಿಳಿದಿಲ್ಲ. 2011ರ ಜನಗಣತಿ ಪ್ರಕಾರ ಸುಮಾರು 11 ಕೋಟಿ ಜನ ಬುಡಕಟ್ಟು ಮತ್ತು ಅರೆ ಅಲೆಮಾರಿಗಳಿದ್ದಾರೆ ಎಂದರು.
‘ಕೊರಚ ಮಾತುಕತೆ’ ಕೃತಿಯು ಮುಖ್ಯ ವಾಹಿನಿಯ ಮೌನದ ಗಡ್ಡೆಗಳನ್ನು ಕರಗಿಸುತ್ತದೆ. ನಿಮ್ಮ ಜೊತೆ ನಮಗೆ ಬರುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೆ. ಲೇಖಕ ಸ್ವಾಮಿ ಅವರು ವಿಶೇಷ ಅಧ್ಯಯನ ನಡೆಸಿ ಈ ಕೃತಿ ಹೊರ ತಂದಿದ್ದಾರೆ. ಅನೇಕ ಮಾದರಿಗಳನ್ನು ಸೇರಿಸಿ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅದ್ಭುತ ಕೊಡುಗೆ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರೊ.ಹಂಪ ನಾಗರಾಜಯ್ಯ, ಅಗ್ರಹಾರ ಕೃಷ್ಣಮೂರ್ತಿ, ರಾಜಪ್ಪ ದಳವಾಯಿ, ತುಮಕೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಬಸವರಾಜು, ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಆರ್.ವಿ.ಚಂದ್ರಶೇಖರ್, ಲೇಖಕ ಡಾ.ಎಚ್.ಆರ್.ಸ್ವಾಮಿ ಮತ್ತಿತರರು ಹಾಜರಿದ್ದರು.