ಭಾರತದ ಕಾನೂನು ವ್ಯವಸ್ಥೆ ಬಹಳ ಸದೃಢವಾಗಿದೆ: ಮಾಯಣ್ಣವರ್

KannadaprabhaNewsNetwork |  
Published : Nov 14, 2025, 01:15 AM IST
ಅಫಜಲ್ಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಜಗತ್ತಿನಲ್ಲೇ ಶ್ರೇಷ್ಠ ಕಾನೂನು ಹೊಂದಿರುವ ದೇಶಗಳ ಪೈಕಿ ನಮ್ಮದು ಅಗ್ರಗಣ್ಯ ದೇಶವಾಗಿದೆ. ನಮ್ಮ ಕಾನೂನು ಸರ್ವರ ಹಿತ ಕಾಯುವ ಸದೃಢ ವ್ಯವಸ್ಥೆಯನ್ನು ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ತಾಲೂಕು ಅಧ್ಯಕ್ಷ ವಿನಾಯಕ ಮಾಯಣ್ಣವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಜಗತ್ತಿನಲ್ಲೇ ಶ್ರೇಷ್ಠ ಕಾನೂನು ಹೊಂದಿರುವ ದೇಶಗಳ ಪೈಕಿ ನಮ್ಮದು ಅಗ್ರಗಣ್ಯ ದೇಶವಾಗಿದೆ. ನಮ್ಮ ಕಾನೂನು ಸರ್ವರ ಹಿತ ಕಾಯುವ ಸದೃಢ ವ್ಯವಸ್ಥೆಯನ್ನು ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ತಾಲೂಕು ಅಧ್ಯಕ್ಷ ವಿನಾಯಕ ಮಾಯಣ್ಣವರ್ ಹೇಳಿದರು.

ಅಫಜಲಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬದಲಾದ ಸಮಾಜ ವ್ಯವಸ್ಥೆ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ದುಷ್ಪರಿಣಾಮದಿಂದ ಯುವ ಪೀಳಿಗೆ ಹಾದಿ ತಪ್ಪುತ್ತಿದ್ದಾರೆ. ಅದರಲ್ಲೂ ಮೊಬೈಲ್ ಗೀಳಿನಿಂದ ಸಾಕಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ.

ಪದವಿ ಕಾಲೇಜು ಕೇವಲ ವ್ಯಾಸಂಗ ಮಾಡುವ ಕೇಂದ್ರವಲ್ಲ, ದೇಶಕ್ಕೆ ಆಸ್ತಿಯಾಗಬಲ್ಲ ಯುವ ಶಕ್ತಿ ಇರುವ ಸ್ಥಳ. ನೀವುಗಳು ಸರಿಯಾದ ಕಾನೂನು ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ದೇಶಕ್ಕೆ ಕೊಡುಗೆ ನೀಡುವಂತವರಾಗಿ ಎಂದು ಸಲಹೆ ನೀಡಿದರು.

ಸಿವಿಲ್ ನ್ಯಾಯಾಧೀಶರಾದ ಅನೀಲ ಅಮಾತೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನ ಸಾಮಾನ್ಯರು ವಿನಾಕಾರಣ ಅನ್ಯಾಯಕ್ಕೊಳಗಾದರೆ ಅಂತಹವರು ಕಾನೂನು ಸಮಿತಿಯ ಸಲಹೆ ಪಡೆಯಬೇಕು ಎಂದರು.

ತಹಸೀಲ್ದಾರ ಸಂಜೀವಕುಮಾರ ದಾಸರ್, ಹಿರಿಯ ನ್ಯಾಯವಾದಿ ಕೆ.ಜಿ.ಪೂಜಾರಿ ಹಾಗೂ ಪೆನಲ್ ವಕೀಲರಾದ ಸುಪ್ರೀಯಾ ಎಂ.ಅಂಕಲಗಿ ಮಾತನಾಡಿದರು. ಪ್ರಾಚಾರ್ಯ ಡಾ.ಸಂತೋಷ ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕಿ ಜಯಶ್ರೀ ಗಣಾಚಾರಿ, ವಕೀಲ ಸಂಘದ ತಾಲೂಕಾಧ್ಯಕ್ಷ ಎಸ್.ಎಸ್.ಪಾಟೀಲ್, ಸರಕಾರಿ ಅಭಿಯೋಜಕ ಡಿ.ಡಿ.ದೇಶಪಾಂಡೆ ಕಾಲೇಜು ಸಿಬ್ಬಂದಿ ಡಾ.ಎಂ.ಎಸ್ ರಾಜೇಶ್ವರಿ, ಡಾ.ಸಾವಿತ್ರಿ ಕೃಷ್ಣಾ, ಡಾ.ಸೂರ್ಯಾಕಾಂತ ಉಮ್ಮಾಪುರೆ, ಡಾ.ದತ್ತಾತ್ರೇಯ ಸಿ.ಹೆಚ್, ಡಾ.ವಿನಾಯಕ, ಡಾ.ರಾಘವೇಂದ್ರ, ಡಾ.ಭಾರತಿ ಭೂಸಾರೆ, ಡಾ.ಶಾಂತಲಾ, ಹೀರೂ ರಾಠೋಡ, ಡಾ.ಸಂಗಣ್ಣ ಸಿಂಗೆ, ವೈಜನಾಥ ಭಾವಿ, ಡಾ.ಜಯಕುಮಾರ ನೂಲ್ಕರ್, ಡಾ.ಶಿವಕುಮಾರ, ಡಾ,ಎಸ್.ಎಸ್. ತಾವರಖೇಡ, ಡಾ.ಸುರೇಖಾ ಕರೂಟಿ, ಡಾ.ನಾಗವೇಣಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪವಿತ್ರಾ ಪಾರ್ಥಿಸಿದರು.ಡಾ.ಸಾವಿತ್ರಿ ಕೃಷ್ಣಾ ನಿರೂಪಿಸಿದರು.ಫೋಟೊ

ಅಫಜಲಪುರದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವಿನಾಯಕ ಮಾಯಣ್ಣವರ್ ಉದ್ಘಾಟಿಸಿದರು.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ