ವಿಶ್ವವನ್ನೇ ತನ್ನತ್ತ ಸೆಳೆದಿದ್ದು ಭಾರತೀಯರ ಯೋಗಕಲೆ

KannadaprabhaNewsNetwork | Published : Oct 17, 2024 12:51 AM

ಸಾರಾಂಶ

ವಿಶ್ವವೇ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ್ದು ಯೋಗ ಎಂದು ದಾವಣಗೆರೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಶಿಕ್ಷಣ ಪ್ರಮುಖ ಪಿ.ಎಸ್. ಬಸವರಾಜಣ್ಣ ಹರಿಹರದಲ್ಲಿ ಹೇಳಿದ್ದಾರೆ.

- ಮಾತೃಭೋಜನ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಪ್ರಮುಖ ಬಸವರಾಜಣ್ಣ - - - ಕನ್ನಡಪ್ರಭ ವಾರ್ತೆ ಹರಿಹರ ವಿಶ್ವವೇ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ್ದು ಯೋಗ ಎಂದು ದಾವಣಗೆರೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಶಿಕ್ಷಣ ಪ್ರಮುಖ ಪಿ.ಎಸ್. ಬಸವರಾಜಣ್ಣ ಹೇಳಿದರು.

ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವೇದಾವತಿ ವಲಯ ಬುಧವಾರ ಆಯೋಜಿಸಿದ್ದ ಮಾತೃಭೋಜನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂ ಪರಂಪರೆಯಲ್ಲಿ ಯೋಗ ವಿಶಿಷ್ಟ ಸ್ಥಾನ ಪಡೆದಿದೆ. ಪ್ರತಿನಿತ್ಯ ಯೋಗಾಭ್ಯಾಸದಿಂದ ಮಾನಸಿಕ, ಶಾರೀರಿಕ, ಬೌದ್ಧಿಕ ಶಕ್ತಿ ಹೊಂದಲು ಯೋಗ, ಪ್ರಾಣಾಯಾಮ, ಧ್ಯಾನಗಳ ಅವಶ್ಯಕತೆ ಇದೆ. ಯೋಗ ಸಾಧನೆ ಮಾಡಿದಲ್ಲಿ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಇದನ್ನು ಮನಗಂಡ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗ ಸಾಧನೆಗೆ ಮುಂದಾಗಿವೆ ಎಂದರು.

ಹರಿಹರೇಶ್ವರ ದೇವಸ್ಥಾನ ಕಾರ್ಯದರ್ಶಿ ವನಜ ಮಾತನಾಡಿ, ಪತಂಜಲಿ ಸಂಘಟನೆ ಅತ್ಯುತ್ತಮ ಕಾರ್ಯ ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬರು ಭಾಗವಹಿಸಿ ಉಪಯೋಗ ಪಡೆಯಬೇಕಿದೆ ಎಂದರು.

ಶಿಕ್ಷಕ ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ, ಮಾತೃಭಕ್ತಿ ಇರಬೇಕಾದ ಅವಶ್ಯಕತೆ ಇದೆ. ಅದಕ್ಕೆ ಯೋಗಾಸನ, ಪ್ರಾಣಾಯಾಮ, ಆಧ್ಯಾತ್ಮಿಕತೆ, ಧ್ಯಾನ, ಭಜನೆ, ಸಂಸ್ಕಾರ, ಸಂಘಟನೆ, ಸೇವೆ ಮುಂತಾದವುಗಳು ಮೆಟ್ಟಿಲುಗಳಿದ್ದಂತೆ. ಇವುಗಳಲ್ಲಿ ಪರಿಪೂರ್ಣನಾದ ವ್ಯಕ್ತಿ ದೇಶಭಕ್ತಿ ಜತೆಗೆ ಸುಮಧುರ ಜೀವನವನ್ನು ನಡೆಸಲು ಬೇಕಾದ ಶರೀರ, ಮಾನಸಿಕ, ನೈತಿಕ, ಬೌದ್ಧಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಗೊಳಿಸುತ್ತಾನೆ ಎಂದರು.

ಮೈಲಾರಲಿಂಗೇಶ್ವರ ದೇವಸ್ಥಾನ ಖಜಾಂಚಿ ಅಣ್ಣಪ್ಪ ಶಾವಿ, ಮಾತನಾಡಿದರು. ಶಿಬಿರಾರ್ಥಿಗಳು ಮಾತನಾಡಿ, ಅನುಭವ ಹಂಚಿಕೊಂಡು ಸಂತಸ ವ್ಯಕ್ತ ಪಡಿಸಿದರು. ಲೀಲಕ್ಕ ಅವರ ನೇತೃತ್ವದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು. ಅನಂತರ ಮಹಿಳೆಯರು ತಾವು ತಯಾರಿಸಿದ ಆಹಾರಗಳನ್ನು ತಟ್ಟೆ, ಚಮಚ ಬಳಸದೇ ಮುಟ್ಟಿಗೆ ಮಾಡಿ ಕೈಯಲ್ಲಿ ನೀಡುವ ಮಾತೃಭೋಜನವನ್ನು ಸವಿದಿದ್ದು ವಿಶೇಷ.

- - - -16ಎಚ್‍ಆರ್‍ಆರ್1:

ಹರಿಹರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವೇದಾವತಿ ವಲಯ ಬುಧವಾರ ಆಯೋಜಿಸಿದ್ದ ಮಾತೃಭೋಜನಾ ಕಾರ್ಯಕ್ರಮಕ್ಕೂ ಮುನ್ನ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು. -16ಎಚ್‍ಆರ್‍ಆರ್ 1ಎ:

ಹರಿಹರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವೇದಾವತಿ ವಲಯದಿಂದ ಮಾತೃಭೋಜನ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಪ್ರಮುಖ ಬಸವರಾಜಣ್ಣ ಹರಿಹರೇಶ್ವರ ದೇವಸ್ಥಾನ ಕಾರ್ಯದರ್ಶಿ ವನಜ ಮೈಲಾರಲಿಂಗೇಶ್ವರ ದೇವಸ್ಥಾನ ಖಜಾಂಚಿ ಅಣ್ಣಪ್ಪ ಶಾವಿ ಭಾಗವಹಿಸಿದ್ದರು.

Share this article