ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork |  
Published : Mar 23, 2026, 02:30 AM IST
ಹಾವೇರಿ ತಾಲೂಕಿನ ನೆಗಳೂರ ಗ್ರಾಮದ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜರಗುತ್ತಿರುವ ಜತ್ರಾಮಹೋತ್ಸವದ ಧರ್ಮ ಸಮಾರಂಭದಲ್ಲಿ   ಯುವ ಬ್ರೀಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಶ್ರೀಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. | Kannada Prabha

ಸಾರಾಂಶ

ಭಾರತದ ಗುರು ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಪರಂಪರೆಯಾಗಿದೆ ಎಂದು ಯುವ ಬ್ರೀಗೇಡ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಗುತ್ತಲ: ಭಾರತದ ಗುರು ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಪರಂಪರೆಯಾಗಿದೆ ಎಂದು ಯುವ ಬ್ರೀಗೇಡ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾಮಹೋತ್ಸವ ನಿಮಿತ್ತ ಜರಗುತ್ತಿರುವ ಧರ್ಮ ಜಾಗೃತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತೀಯ ಪರಂಪರೆಯಲ್ಲಿ ಗುರು ಮತ್ತು ಶಿಷ್ಯರ ಸಂಬಂಧವು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಲ್ಲ ಅದು ಜೀವನ ಮೌಲ್ಯಗಳು, ಧರ್ಮ, ಸಂಸ್ಕೃತಿ ಮತ್ತು ಆತ್ಮ ಜ್ಞಾನವನ್ನು ಸಾರುವ ಪವಿತ್ರ ಬಂಧವಾಗಿದೆ. ಗುರುವನ್ನು ದೈವಸ್ವರೂಪವಾಗಿ ಕಾಣುವ ಸಂಪ್ರದಾಯ ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಜಗತ್ತಿನ ಬೇರೆ ರಾಷ್ಟ್ರಗಳಲ್ಲಿ ಶಿಕ್ಷಣ ವ್ಯವಸ್ಥೆ ಜ್ಞಾನ ಹಂಚಿಕೆಗೆ ಮಾತ್ರ ಸೀಮಿತವಾಗಿದ್ದರೆ, ಭರತದಲ್ಲಿ ಗುರು-ಶಿಷ್ಯ ಪರಂಪರೆ ವ್ಯಕ್ತಿತ್ವ ನಿರ್ಮಾಣ, ನೈತಿಕತೆ, ಮತ್ತು ಅತ್ಮೋನ್ನತ್ತಿಯ ದಾರಿಯನ್ನೂ ತೋರಿಸುತ್ತದೆ ಇಂದಿನ ಆಧುನಿಕ ಯುಗದಲ್ಲಿಯೂ ಕೂಡ ಈ ಪರಂಪರೆಯ ಮಹತ್ವ ಕಡಿಮೆಯಾಗಿಲ್ಲ, ಭಾರತ ದೇಶ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆ ಹೊಂದಿರುವ ರಾಷ್ಟçವಾಗಿದ್ದು ಇಲ್ಲಿ ಜನಿಸಿರುವ ನಾವುಗಳೇ ಪುಣ್ಯವಂತರು. ಯುವ ಜನತೆ ರಾಷ್ಟ್ರಾಭಿಮಾನ, ಧರ್ಮ ಪರಂಪರೆಯ ರಕ್ಷಣೆಗೆ ಮುಂದಾಗಬೇಕೆಂದರು. ಲಿಂಗನಾಯನಹಳ್ಳಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಧರ್ಮಾಚರಣೆಯ ಮೂಲಕ ಬದುಕು ರೂಪಿಸಿಕೊಳ್ಳಬೇಕು, ಅದಕ್ಕೆ ಸದ್ಗುರುವಿನ ಮಾರ್ಗದರ್ಶನ ಅವಶ್ಯಕ, ಜೀವನದಲ್ಲಿ ಗುರಿ ಮತ್ತು ಗುರು ಇವರೆಡಿದ್ದರೇ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿ ವಿಜಯಶಾಲಿಯಾಗಬಹುದು ಎಂದರು.ಕಾರ್ಯಕ್ರಮದಲ್ಲಿ ಶ್ರೀಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರವಚನ ಕಾರ ಪುಟ್ಟರಾಜ ಶಾಸ್ರಿöçಜೀ ಮಾತನಾಡಿದರು. ಸಮಾರಂಭದಲ್ಲಿ ಬೀದರ ಹಿರೇಮಠದ ಸೋಮಶೇಖರ ಶ್ರೀ, ಕುಂದರಗಿಯ ವೀರಸಂಗಮೇಶ್ವರ ಸ್ವಾಮೀಜಿ, ಸಹಪುರ ಹಿರೇಮಠದ ನಿಜಗುಣ ದೇವರು ಸೇರಿದಂತೆ ನೆಗಳೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕಾರ್ಯಮದಲ್ಲಿ ಅಂತರಾಷ್ಟ್ರೀಯ ಯೋಗಪಟು ಅಪೇಕ್ಷಾ ಹಣಜಗಿ ಯೋಗ ಪ್ರದರ್ಶನ, ಅಥಣಿಯ ಚಿತ್ರ ಕಲಾವಿದ ವಿನಾಯಕ ಸುತಾರ ಚಿತ್ರ ಕಲಾ ಪ್ರದರ್ಶನ ಹಾಗೂ ನೆಗಳೂರಿನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದ್ದ ಜನರ ಮನರಂಜಿಸಿತು. ಶಿವಲಿಂಗಯ್ಯ ಗವಾಯಿ ಹಿರೇಮಠ ಬಿಳೇಬಾಳ ಸಂಗೀತಕ್ಕೆ ಅಡಿವೇಶ ಬೆಳಗಾವಿ ತಬಲಾ ಸಾಥ್ ನೀಡಿದರು. ಇನ್ನೂ ಇದಕ್ಕೂ ಪೂರ್ವದಲ್ಲಿ ಉಮೇಶ ಕೆರೂರ, ನಾಗರಾಜ ರುದ್ರಾಕ್ಷಿ ಕುಟುಂಬಸ್ಥರಿಂದ ಲಿಂ.ಶಿವಾನಂದ ಶಿವಾಚಾರ್ಯರ ಪ್ರತಿಮೆಯ ತುಲಾಭಾರ ಸೇವೆ ನೇರವೇರಿಸಿದರು, ಜಯಮ್ಮ ರಾಜಶೇಖರ ವಿಭೂತಿ ಪರಿವಾರದಿಂದ ದಾಸೋಹ ಜರುಗಿತು. ಗುರುಶಾಂತ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ
ಜನರ ಅಹವಾಲು ಆಲಿಸಿದ ಸಚಿವ ವೈದ್ಯ