ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಹೊಸತಾಗಿ ‘ಇಂದಿರಾ ಕಿಟ್’ ಯೋಜನೆ ಘೋಷಣೆ ಮಾಡಿರುವುದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸ್ವಾಗತಿಸಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ರಾಜ್ಯದ ಜನಮನ ಗೆದ್ದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಹೊಸತಾಗಿ ‘ಇಂದಿರಾ ಕಿಟ್’ ಯೋಜನೆ ಘೋಷಣೆ ಮಾಡಿರುವುದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸ್ವಾಗತಿಸುತ್ತದೆ. ಇದೊಂದು ಜನಪರ ಯೋಜನೆಯಾಗಿದ್ದು ಅಕ್ಕಿಯ ಜೊತೆಗೆ ಸಕ್ಕರೆ, ಉಪ್ಪು, ಗೋಧಿ, ತೊಗರಿ ಬೇಳೆ, ಕಾಫಿ ಪುಡಿ, ಅಡುಗೆ ಎಣ್ಣೆ, ಚಹಾ ಪುಡಿ ಮುಂತಾದ ಅಗತ್ಯ ಆಹಾರ ಸಾಮಾಗ್ರಿಗಳ ವಿತರಣೆಯಿಂದ ಕೋಟ್ಯಾಂತರ ಕುಟುಂಬಗಳಿಗೆ ಅನುಕೂಲಗಲಿದೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಗ್ಯಾರಂಟಿ ಯೋಜನೆಗಳ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಪ್ರತಿಯೊಂದು ಯೋಜನೆಯೂ ಅನುಕರಣೀಯವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಪಡಿತರ ಜೊತೆಗೆ ನೀಡುತ್ತಿರುವ ಅಕ್ಕಿಯು ಕಾಳ ಸಂತೆಯಲ್ಲಿ ದುರುಪಯೋಗ ಆಗುತ್ತಿರುವುದನ್ನು ತಪ್ಪಿಸಲು ‘ಇಂದಿರಾ ಕಿಟ್’ ಯೋಜನೆ ಜಾರಿಗೊಳಿಸಿರುವುದು ಶ್ಲಾಘನೀಯ. ಸರ್ಕಾರದ ಯಾವುದೇ ಯೋಜನೆಗಳು ದುರುಪಯೋಗವಾಗದೇ ಅರ್ಹ ಫಲಾನುಭವಿಗಳಿಗೆ ಸಲ್ಲಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.