ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವಲ್ಲಿ ಇಲ್ಲಿನ ಜನಪ್ರತಿನಿಧಿಗಳ ನಡವಳಿಕೆ ಕಾರಣ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಗಂಭೀರ ಆರೋಪ ಮಾಡಿದರು.ಪಟ್ಟಣದ ತಮ್ಮ ನಿವಾಸದಲ್ಲಿ ತಾಲೂಕಿನ ಕಾಡುಕೊತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ನೂತನ ಅಧ್ಯಕ್ಷ ಕೆ.ಎಸ್.ಸ್ವಾಮಿ ಹಾಗೂ ಉಪಾಧ್ಯಕ್ಷೆ ಪೂರ್ಣಿಮಾ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸ್ವಲ್ಪ ಪ್ರಮಾಣದ ಅನ್ಯಾಯವಾಗಿದೆ ಎನ್ನುವುದನ್ನು ಬಿಟ್ಟರೆ ವಿತ್ತಸಚಿವೆ ನಿರ್ಮಲ ಸೀತಾರಾಮ್ ಮಂಡಿಸಿದ ಬಜೆಟ್ ತೃಪ್ತಿಕರವಾಗಿದೆ ಎಂದರು.ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವಲ್ಲಿ ಇಲ್ಲಿನ ಜನಪ್ರತಿನಿಧಿಗಳ ನಡವಳಿಕೆ ಕಾರಣ. ಜನಪ್ರತಿನಿಧಿಗಳು ತಟ್ಟೆ, ಲೋಟ ಹಿಡಿದು ಪ್ರದರ್ಶನ ಮಾಡುವ ಶೂರರೇ ಹೊರತು ಕೇಂದ್ರದೊಂದಿಗೆ ಸಜ್ಜನಿಕೆಯಿಂದ ನಡೆದುಕೊಳ್ಳುವ ಕರ್ತವ್ಯ ಮಾಡದೆ ಇರುವುದು ಬಜೆಟ್‌ನಲ್ಲಿ ಅನ್ಯಾಯವಾಗಲು ಪ್ರಮುಖ ಕಾರಣವಾಗಿದೆ ಎಂದರು.
ಈ ವೇಳೆ ಸಂಘದ ನಿರ್ದೇಶಕರಾದ ಮರಿಗೌಡ, ಕೆ.ಸಿ.ರಾಜೇಶ್, ಜಯಸಿದ್ದಯ್ಯ, ಶಿವಶಂಕರ ಸ್ವಾಮಿ, ಮಹೇಶ, ಕೆ.ಎಸ್. ಮಹೇಂದ್ರ, ಸಿದ್ದರಾಜು. ಚಿಕ್ಕಸ್ವಾಮಿ, ಮಹೇಶ ಮತ್ತಿತರರು ಇದ್ದರು.ಜುಲೈ 30 ರಂದು ಕೆಂಪೇಗೌಡರ ಜಯಂತಿ, ಭತ್ತದ ಬಿತ್ತನೆ ಬೀಜ ವಿತರಣೆ: ರಘುನಂದನ್
ಮಂಡ್ಯ:ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಜು.30ರಂದು ನಗರದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಾಗೂ ಸಂಘದ ಸದಸ್ಯರಿಗೆ ಭತ್ತದ ಬಿತ್ತನೆ ಬೀಜ ವಿತರಣಾ ಸಮಾರಂಭ ನಡೆಯಲಿದೆ ಎಂದು ಮನ್ಮುಲ್ ಉಪಾಧ್ಯಕ್ಷ ರಘುನಂದನ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ರೈತ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಉದ್ಘಾಟಿಸುವರು. ಸಂಘದ ಮಹಾಪೋಷಕ ಎಚ್.ಸಿ.ಕಾಳೇಗೌಡ ಅಧ್ಯಕ್ಷತೆ ವಹಿಸುವರು. ಕಾರ್‍ಯದರ್ಶಿ ಸತ್ಯಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯಾಧ್ಯಕ್ಷ ವಸಂತರಾಜು, ಆರ್‌ಎಪಿಸಿಎಂಎಸ್ ಅಧ್ಯಕ್ಷ ಶೇಖರ್, ಸ್ಕಂದ ಡವಲಪರ್ಸ್‌ನ ಎಂ.ಪಿ.ಶ್ರೀಕಾಂತ್, ಶಂಭುಸೇವಾ ಟ್ರಸ್ಟ್ ಕಾರ್‍ಯದರ್ಶಿ ಬಿ.ಆರ್.ಸುರೇಶ್, ಗ್ರಾಪಂ ಮಾಜಿ ಸದಸ್ಯ ಕೆ. ರವಿ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಯು.ಸಿ.ಶಿವಕುಮಾರ್ ಇತರರು ಭಾಗವಹಿಸುವರು ಎಂದರು.
ಸಮಾರಂಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ಕೆ.ರುದ್ರೇಶ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆಲಕೆರೆ ಘಟಕದ ಅಧ್ಯಕ್ಷ ಎ.ಎಸ್.ಚಂದ್ರು, ಕೃಷಿಕ ಬಂದು ಗೌರಮ್ಮ, ಸಮಾಜ ಸೇವಕ ಕೆ.ವಿ.ತ್ಯಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.ಸಂಘದ ಸದಸ್ಯರಿಗೆ 5 ಕೆ.ಜಿ. ಭಿತ್ತನೆ ಭತ್ತದ ಚೀಲ ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ರೈತರಿಂದಲೇ ಉತ್ತಮ ತಳಿಯ ಭತ್ತವನ್ನು ಸಂಗ್ರಹಿಸಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವಸಂತರಾಜು, ಪ್ರಸನ್ನಕುಮಾರ್ ಎನ್.ಎಸ್. ಸತ್ಯಮೂರ್ತಿ, ರಾಕೇಶ್, ರವಿಕುಮಾರ್ ಇದ್ದರು.