ದೇಶದ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಧೈರ್ಯ, ಸಾಹಸ, ನಾಡಿನ ಬಗ್ಗೆ ಇರುವ ಸ್ವಾಭಿಮಾನ ಮತ್ತು ಸಂಘಟನೆ ಇವುಗಳನ್ನು ದೇಶದ ಯುವ ಶಕ್ತಿಗೆ ಪ್ರೇರಣೆಯಾಗಲಿ ಎನ್ನುವ ಸದುದ್ದೇಶದಿಂದ ವೀರರಾಣಿ ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ದೇಶದ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಧೈರ್ಯ, ಸಾಹಸ, ನಾಡಿನ ಬಗ್ಗೆ ಇರುವ ಸ್ವಾಭಿಮಾನ ಮತ್ತು ಸಂಘಟನೆ ಇವುಗಳನ್ನು ದೇಶದ ಯುವ ಶಕ್ತಿಗೆ ಪ್ರೇರಣೆಯಾಗಲಿ ಎನ್ನುವ ಸದುದ್ದೇಶದಿಂದ ವೀರರಾಣಿ ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ನಗರದ ಮಿನಿ ವಿಧಾನ ಸೌಧದ ಆವರಣದಲ್ಲಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ ವೃತ್ತಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ನಾಡನ್ನು ಪರಕೀಯರಿಂದ ಮುಕ್ತಗೊಳಿಸಲು ವೀರರಾಣಿ ಚನ್ನಮ್ಮ ತೋರಿದ ಧೈರ್ಯ, ಸಾಹಸ ಮತ್ತು ಶೌರ್ಯದ ಮೂಲಕ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಅವರು ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ನಾಡಿನ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಮಾಡಿದ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ವೀರರಾಣಿ ಕಿತ್ತೂರು ಚನ್ನಮ್ಮ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಸ್ಮಾರಕಗಳು ನಮ್ಮ ನಾಡಿನ ವೀರ ಮಹಿಳೆಯರ ಇತಿಹಾಸ, ಹೋರಾಟ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಲಿವೆ. ಅಲ್ಲದೇ ಇಂಡಿ ನಗರದ ಸೌಂದರ್ಯಕರಣಕ್ಕೂ ಈ ವೃತ್ತ ಮತ್ತಷ್ಟು ಮೆರುಗು ನೀಡಲಿದೆ ಎಂದು ತಿಳಿಸಿದರು.ವೀರರಾಣಿ ಕಿತ್ತೂರು ಚನ್ನಮ್ಮ ಅವರ ಶೌರ್ಯ ಮತ್ತು ಸಾಹಸದ ಇತಿಹಾಸವನ್ನು ಯುವಜನತೆ ಅರಿತುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆ, ಶಾಂತುಗೌಡ ಬಿರಾದಾರ, ರವಿಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಎ.ಸಿ.ಪಾಟೀಲ, ಪಾಪು ಕಿತ್ತಲಿ, ಎಸ್.ಆರ್.ಬಿರಾದಾರ, ಬಿ.ಬಿ.ಬಿರಾದಾರ, ಭೀಮಾಶಂಕರ ಮರಗುಂಡಿ, ಸಹಕಾರಿ ಸಂಘದ ಧುರೀಣ ಶ್ರೀಮಂತ ಇಂಡಿ, ಶ್ರೀಕಾಂತ ಕುಡಿಗನೂರ, ಡಾ.ರಾಜಶೇಖರ ತೋಳನೂರ, ಗಂಗಾಧರ ತೆಲಸಂಗ, ಪ್ರಭು ಹೊಸಮನಿ, ಮಂಜು ಕಾಮಗೊಂಡ, ರುದ್ರು ಅಲಗೊಂಡ, ಜಗದೀಶ ಕ್ಷತ್ರಿ, ಹುಚ್ಚಪ್ಪ ತಳವಾರ, ಜೆಟ್ಟೆಪ್ಪ ರವಳಿ, ಎಂ.ಆರ್.ಪಾಟೀಲ ಬಳ್ಳೊಳ್ಳಿ, ಎಂ.ಆರ್.ಪಾಟೀಲ ಗೋಳಸಾರ, ಹಿಂಗಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಸದಾಶಿವ ಪ್ಯಾಟಿ, ಶಿವಯೋಗೆಪ್ಪ ಚೆನಗೊಂಡ, ಜೀತಪ್ಪ ಕಲ್ಯಾಣ, ಶಿವಯೋಗೆಪ್ಪ ಜೋತಗೊಂಡ, ಪ್ರಶಾಂತ ಅಲಗೊಂಡ,ಮಹೇಶ ಕುಂಬಾರ, ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ ಮಠ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಉಪ ತಹಸೀಲ್ದಾರ್ ಬಸವರಾಜ ರಾವೂರ, ಕಿರಿಯ ಇಂಜನೀಯರ್ ಮೈಬೂಬ್ ಸಂಜವಾಡ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.