ನಾಳೆಯಿಂದ ಅಂತರ ಜಿಲ್ಲಾ ಕೇರಂ ಪಂದ್ಯಾವಳಿ: ದಿನೇಶ ಶೆಟ್ಟಿ

KannadaprabhaNewsNetwork |  
Published : Jun 12, 2025, 12:44 AM IST
11ಕೆಡಿವಿಜಿ5-ದಾವಣಗೆರೆಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕೇರಂ ಸಂಸ್ಥೆ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕೇರಂ ಪಂದ್ಯಾವಳಿ ಪೋಸ್ಟರನ್ನು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನ ಅಂಗವಾಗಿ ಜಿಲ್ಲಾ ಕೇರಂ ಸಂಸ್ಥೆ ಹಾಗೂ ಯಂಗ್ ಚಾಲೆಂಜರ್ಸ್‌ ಕೇರಂ ಸಂಸ್ಥೆಯಿಂದ ಜೂ.13ರಿಂದ 15ರವರೆಗೆ ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿ- 2025 ಅನ್ನು ನಗರದ ಅಕ್ಕ ಮಹಾದೇವಿ ರಸ್ತೆಯ ಜಿಲ್ಲಾ ಗುರು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನ ಅಂಗವಾಗಿ ಜಿಲ್ಲಾ ಕೇರಂ ಸಂಸ್ಥೆ ಹಾಗೂ ಯಂಗ್ ಚಾಲೆಂಜರ್ಸ್‌ ಕೇರಂ ಸಂಸ್ಥೆಯಿಂದ ಜೂ.13ರಿಂದ 15ರವರೆಗೆ ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿ- 2025 ಅನ್ನು ನಗರದ ಅಕ್ಕ ಮಹಾದೇವಿ ರಸ್ತೆಯ ಜಿಲ್ಲಾ ಗುರು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೇರಂ ಸಂಸ್ಥೆಯಿಂದ ಮಾನ್ಯತೆ ಪಡೆದ ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆಯಿಂದ ನಡೆಯುವ ಪಂದ್ಯಾವಳಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಸ್ಪರ್ಧಿಗಳು ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದರು.

ಪ್ರವೇಶ ಶುಲ್ಕ ಸಿಂಗಲ್ಸ್‌ಗೆ ₹300, ಡಬಲ್ಸ್‌ಗೆ ₹400, ಸೀನಿಯರ್ಸ್‌ಗೆ ₹400 ನಿಗದಿಪಡಿಸಿದೆ. ಆಸಕ್ತ ಸ್ಪರ್ಧಿಗಳು ಹೆಸರು ನೋಂದಾಯಿಸಲು ಜೂ.12 ಕಡೆಯ ದಿನವಾಗಿದೆ. ಸಿಂಗಲ್ಸ್‌ನಲ್ಲಿ ಪ್ರಥಮ ಸ್ಥಾನಕ್ಕೆ ₹10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₹6 ಸಾವಿರ ನಗದು, ಆಕರ್ಷಕ ಟ್ರೋಫಿ ಹಾಗೂ ತೃತೀಯ ಬಹುಮಾನ ₹3 ಸಾವಿರ ಮತ್ತು ಟ್ರೋಫಿ ನೀಡಲಾಗುವುದು ಎಂದು ಹೇಳಿದರು.

ಡಬಲ್ಸ್ ವಿಭಾಗದ ಪ್ರಥಮ ಬಹುಮಾನ ₹6 ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನ ₹3 ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನ ಆಕರ್ಷಕ ಟ್ರೋಫಿ, ಸೀನಿಯರ್ಸ್ ವಿಭಾಗದ ಪ್ರಥಮ ಸ್ಥಾನಕ್ಕೆ ₹3 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನಕ್ಕೆ ₹2 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ ಟ್ರೋಫಿ ನೀಡಲಾಗುವುದು. ಮಹಿಳಾ ವಿಭಾಗದ ಸಿಂಗಲ್ಸ್‌ ಪಂದ್ಯಾವಳಿ ಜೂ.15ರಂದು ನಡೆಯಲಿದೆ. ಪ್ರಥಮ ಮೂರು ಬಹುಮಾನಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ವಿವರಿಸಿದರು.

ಸ್ಪರ್ಧಿಗಳಿಗೆ ಊಟ, ವಸತಿ ವ್ಯವಸ್ಥೆ ಇರುವುದಿಲ್ಲ. ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗ ಕೇರಂ ಗಣೇಶ (ಮೊ: 94482- 33389), ಕೆ.ಎಸ್. ವಿಜಯಕುಮಾರ (80739- 13783), ಹನುಮಂತ (73537- 37166), ಸುರೇಶ (96865- 84163), ಶ್ರೀನಿವಾಸ (99025- 50188) ಇಲ್ಲಿಗೆ ಸಂಪರ್ಕಿಸುವಂತೆ ದಿನೇಶ ಕೆ. ಶೆಟ್ಟಿ ಹೇಳಿದರು.

ಕೇರಂ ಸಂಸ್ಥೆಯ ಕೇರಂ ವಿ. ಗಣೇಶ, ವಿಜಯಕುಮಾರ, ಅಂಬರೀಶ, ಸುನಿಲ್ ಗುಂಡ, ಸಾಗರ್ ಇತರರು ಇದ್ದರು.

- - -

-11ಕೆಡಿವಿಜಿ5.ಜೆಪಿಜಿ:

ಕೇರಂ ಪಂದ್ಯಾವಳಿಯ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ