ಕನ್ನಡಪ್ರಭ ವಾರ್ತೆ ಭಾರತೀನಗರ
ಸಾರ್ವಜನಿಕರ ಶಿಕ್ಷಣ ಇಲಾಖೆ, ದೇಶ್ ಅಪ್ನಾಯೇನ್ ಸಹಯೋಗ್ ಫೌಂಡೇಷನ್ ಮುಂಬೈ ಸಹಯೋಗದಲ್ಲಿ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಅಂಗವಾಗಿ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಪರಸ್ಪರ ವೃತ್ತಿ ಗೌರವದ ಬಗ್ಗೆ ಚಟುವಟಿಕೆಗಳ ಮುಖಾಂತರ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಂಯೋಜಕ ವೈ.ಎನ್.ಚಂದ್ರಕುಮಾರ್ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ನಾವು ಗೌರವಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಆಟದ ಮೂಲಕ ತಿಳಿಸಿಕೊಟ್ಟಿದ್ದಾರೆ. ಜನತೆ ಈ ಚಟುವಟಿಕೆಯ ಮುಖಾಂತರ ಅರ್ಥೈಸಿಕೊಳ್ಳಬೇಕೆಂದರು.ಈ ವೇಳೆ ಶಾಲೆ ಎಡಿಎಂಸಿ ಅಧ್ಯಕ್ಷ ಮಂಚಲಿಂಗೇಗೌಡ, ಕೃಷ್ಣ, ಶಾಲೆಯ ಶಿಕ್ಷಕರಾದ ಮೋಹನ್‌ಕುಮಾರ್, ಕೌಶಲ್ಯ ಸಿಂಧು ಸುಮಾ .ಲೀಲಾವತಿ ಏರಿದಂತೆ ಹಲವರಿದ್ದರು.
ಕನ್ನಡಪ್ರಭ ವಾರ್ತೆ ಭಾರತೀನಗರ
ಕೂಳಗೆರೆ ಗ್ರಾಮದಲ್ಲಿ ಭಾರತೀ ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ನಮ್ಮ ಮನೆ-ಹೊಲ, ಗದ್ದೆಗಳಲ್ಲಿ, ರಸ್ತೆ ಬದುಗಳಲ್ಲಿ ಮರಗಿಡಗಳನ್ನು ಬೆಳೆಸಿ ಪೋಷಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.
ಪರಿಸರ ಜಾಗೃತಿ ವೇದಿಕೆ ನಿರ್ದೇಶಕ ಅಣ್ಣೂರು ಜಗದೀಶ್ ಅವರು ಪರಿಸರದ ಬಗ್ಗೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.