ದಾಬಸ್‍ಪೇಟೆ: ಸೋಂಪುರ ಹೋಬಳಿಯ ಸೀಗೇಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಹಿಂದಿನ ಆಡಳಿತ ಮಂಡಳಿಯಿಂದ ಕಟ್ಟಡ ನಿರ್ಮಾಣ ವಿಚಾರದಲ್ಲಿ ಅವ್ಯವಹಾರ ಖಂಡಿಸಿ ಚುನಾವಣೆ ಬಹಿಷ್ಕರಿಸಿದ ಸದಸ್ಯರು ಪ್ರತಿಭಟನೆ ನಡೆಸಿದರು.
ಹೈನುಗಾರ ಮೃತ್ಯಂಜಯ ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ 50 ಸಾವಿರ ಅವ್ಯವಹಾರ ನಡೆದಿದೆ. ಕಟ್ಟಡ ನಿರ್ಮಾಣದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿರುವುದು ಕಂಡುಬಂದರೂ, ದೊಡ್ಡಬಳ್ಳಾಪುರ ಎ.ಆರ್.ಮತ್ತು ಡಿ.ಆರ್. ಕಚೇರಿಯ ಮುಖ್ಯಾಧಿಕಾರಿಗಳು ಸ್ಥಳೀಯ ಡೇರಿ ಸಿಇಒ ಮತ್ತು ಮಾಜಿ ಅಧ್ಯಕ್ಷರ ಜೊತೆ ಶಾಮೀಲಾಗಿ ಅವ್ಯವಹಾರಕ್ಕೆ ಸಾಥ್ ನೀಡಿದ್ದರಿಂದ ನಾವು ಚುನಾವಣೆ ಬಹಿಷ್ಕರಿಸುತ್ತೇವೆ ಎಂದರು.
ಹಾಲು ಉತ್ಪಾದಕ ಇಳಯರಾಜು ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ ಜಿಎಸ್ಟಿ ಮತ್ತು ಟೀನ್ ನಂಬರ್ ಇಲ್ಲದೆ ಬಿಲ್‌ಗಳನ್ನ ಸಂಘಕ್ಕೆ ನೀಡಿರುವ ದಾಖಲೆಗಳು ನಮ್ಮ ಬಳಿ ಇದೆ. ಈ ಹಿಂದೆ ಅವ್ಯವಹಾರದ ಹಿನ್ನಲೆ ಆಡಳಿತ ಮಂಡಳಿಯನ್ನು ವಜಾ ಮಾಡಲಾಗಿತ್ತು. ಈ ಅವ್ಯವಹಾರ ಸಂಪೂರ್ಣ ತನಿಖೆಯಾಗುವವರೆಗೆ ಚುನಾವಣೆ ನಡೆಯಬಾರದೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹಲವಾರು ಹೈನುಗಾರರಾದ ಗಿರೀಶ್, ಹಟ್ಟಿರಂಗಯ್ಯ, ಶ್ರೀನಿವಾಸಯ್ಯ, ರಂಗಸ್ವಾಮಿ, ಮೋಹನ್ ಇತರರು ಹಾಜರಿದ್ದರು.
ಸೋಂಪುರ ಹೋಬಳಿಯ ಸೀಗೇಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಹಿಂದಿನ ಆಡಳಿತ ಮಂಡಳಿಯಿಂದ ಕಟ್ಟಡ ನಿರ್ಮಾಣ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.