ಚಿಕ್ಕಮಗಳೂರಿನಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ,
ಇಡೀ ಜಗತ್ತಿಗೆ ಬೆಳಕನ್ನು ನೀಡಿ ಧರ್ಮ ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಶ್ರೀಕೃಷ್ಣ ಎಂದು ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ ಹೇಳಿದರು.
ಜಿಲ್ಲಾಡಳಿತದಿಂದ ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗೋ ಸಂರಕ್ಷಣೆಗೆ ಸಂಪೂರ್ಣ ಶಕ್ತಿ ಕೊಟ್ಟವನ್ನು ಶ್ರೀಕೃಷ್ಣ, ಈ ಸಮಾಜಕ್ಕೆ ಮಾತ್ರ ದೇವರಲ್ಲಾ ಇಡೀ ವಿಶ್ವಕ್ಕೆ ದೇವರು, ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸ ಮಾಡು, ಅದರ ಫಲ ನನಗೆ ಬಿಡು, ಅದಕ್ಕೆ ಧಕ್ಕಬೇಕಾದ ಫಲ ಧಕ್ಕುತ್ತದೆ, ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ, ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಾಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಜನ್ಮ ದಿನವನ್ನು ಚಂದ್ರಮಾನ, ಶ್ರಾವಣ ಕೃಷ್ಣ ಅಷ್ಟಮಿ ಎಂದು ಆಚರಿಸಲಾಗುತ್ತದೆ ಎಂದರು.ಕತ್ತಲೆ, ಬೆಳಕಿನಲ್ಲಿರುವ ದುಷ್ಟತನವನ್ನು ನಾಶಮಾಡಿ ತಾಯಿ, ತಂದೆಗೆ ಗೌರವಿಸಿ ತನ್ನಲ್ಲಿರುವ ದುಷ್ಟತನವನ್ನು ನಾಶಮಾಡಿ ತಾಯಿಗೆ ಪರಮ ಆನಂದವನ್ನು ಕೊಡುವವನೇ ಕೃಷ್ಣ ಎಂದು ಹೇಳಿದರು.ಯಾವ ವ್ಯಕ್ತಿ ಹೃದಯ ದೌರ್ಬಲ್ಯನಾಗಿರುತ್ತಾನೋ ಅಂತಹವರನ್ನು ಜಾಗೃತಿಗೊಳಿಸುವುದೇ ಭಗವದ್ಗೀತೆ, ಕೃಷ್ಣನ ಉದ್ದೇಶ ಮನುಷ್ಯ ತಾನು ಹಿಡಿದಿರುವ ಕೆಲಸ ಪೂರ್ಣಗೊಳಿಸುವವರೆಗೆ ಯಾರ ಮಾತನ್ನು ಕೇಳದೆ ತನ್ನ ಕೆಲಸವನ್ನು ನಿಷ್ಠೆಯಿಂದ ಯಾವ ಫಲ ಅಪೇಕ್ಷಿಸದೆ ಕಾರ್ಯ ಮಾಡಿದರೆ ಅವನಿಗೆ ಸಕಲ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ ಎಂದರು.