ಜಾಕನಹಳ್ಳಿಯಲ್ಲಿ ಗಂಗೆಪೂಜೆ ನೆರವೇರಿಸಿ, ಕಳಸ ಹೊತ್ತ ಸುಮಂಗಲಿಯರು ಗ್ರಾಮದೇವತೆ ಶ್ರೀ ಸೀಗೆಮೆಳ್ಳಿಯಮ್ಮ ದೇವಾಲಯಕ್ಕೆ ಆಗಮಿಸಿದರು. ನಂತರ ಶ್ರೀದೇವಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ನೆರವೇರಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಿಸಲಾಯಿತು. ಶನಿವಾರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಮಂಗಳಾರತಿ ನೆರವೇರಿಸಿ, ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಲಾಯಿತು. ಜಾಕನಹಳ್ಳಿಯ ೩ ಸಿಡಿ ರಥಗಳು ಹಾಗೂ ಗುಡ್ಡೇನಹಳ್ಳಿಯ ಒಂದು ಸಿಡಿ ರಥವನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ೧೦೧ ಎಡೆ ಸಮರ್ಪಿಸಿ ಪೂಜಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ಜಾಕನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಸೀಗೆಮೆಳ್ಳಿಯಮ್ಮ ಹಾಗೂ ಶ್ರೀ ಸೋಮದೇವರುಗಳ ಸಿಡಿ ಜಾತ್ರಾ ಮಹೋತ್ಸವ ಆಚರಣೆಯಂತೆ ವೈಭವದಿಂದ ನಡೆಯಿತು.
ತಾಲೂಕು ಜಾಕನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ಗಂಗೆಪೂಜೆ ನೆರವೇರಿಸಿ, ಕಳಸ ಹೊತ್ತ ಸುಮಂಗಲಿಯರು ಗ್ರಾಮದೇವತೆ ಶ್ರೀ ಸೀಗೆಮೆಳ್ಳಿಯಮ್ಮ ದೇವಾಲಯಕ್ಕೆ ಆಗಮಿಸಿದರು. ನಂತರ ಶ್ರೀದೇವಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ನೆರವೇರಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಿಸಲಾಯಿತು. ಶನಿವಾರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಮಂಗಳಾರತಿ ನೆರವೇರಿಸಿ, ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಲಾಯಿತು. ಜಾಕನಹಳ್ಳಿಯ ೩ ಸಿಡಿ ರಥಗಳು ಹಾಗೂ ಗುಡ್ಡೇನಹಳ್ಳಿಯ ಒಂದು ಸಿಡಿ ರಥವನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ೧೦೧ ಎಡೆ ಸಮರ್ಪಿಸಿ ಪೂಜಿಸಲಾಯಿತು.
ಶ್ರೀದೇವಿಯ ಅಡ್ಡೆ ಹೊತ್ತವರು ಹಾಗೂ ಭಕ್ತರು ಸಿಡಿ ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಜಾಕನಹಳ್ಳಿ, ಗುಡ್ಡೇನಹಳ್ಳಿ, ಹಾಡ್ಯ, ಮಾದಳ್ಳಿ, ತಿಪ್ಪನಕೊಪ್ಪಲು ಹಾಗೂ ಇತರೆ ಗ್ರಾಮಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು. ಭಾನುವಾರ ಮುಂಜಾನೆ ಶ್ರೀ ದೇವಿಯ ಉತ್ಸವ ನಡೆಸಿ, ರಂಗ ಕುಣಿದು ಗ್ರಾಮಸ್ಥರು ಸಂಭ್ರಮಿಸಿದರು.ಮೇ ೨೬, ಹೊಳೆನರಸೀಪುರ, ಫೋಟೊ ೧, ಹೊಳೆನರಸೀಪುರ ತಾಲೂಕಿನ ಜಾಕನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಸೀಗೆಮೆಳ್ಳಿಯಮ್ಮ ಹಾಗೂ ಶ್ರೀ ಸೋಮದೇವರುಗಳ ಸಿಡಿ ಜಾತ್ರಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.