ಜಯರಾಜರ ಗೋಸೇವೆ ಅನನ್ಯ: ಶಾಸಕ ಶರತ್

KannadaprabhaNewsNetwork |  
Published : Jan 17, 2025, 12:46 AM IST
2: ಸಂಕ್ರಾAತಿ ಪ್ರಯುಕ್ತ ಗೋಪೂಜೆ ಸಲ್ಲಿಸಿದ ಶಾಸಕ ಶರತ್ ಬಚ್ಚೇಗೌಡ. | Kannada Prabha

ಸಾರಾಂಶ

ಹೊಸಕೋಟೆ: ಕಳೆದ 29 ವರ್ಷಗಳಿಂದ ರಾಸುಗಳಿಗೆ ಮೇವು ವಿತರಣೆ ಹಾಗೂ ಬಹುಮಾನ ವಿತರಿಸುತ್ತಿರುವ ಡಾ.ಸಿ.ಜಯರಾಜರ ಗೋಸೇವಾ ಕಾರ್ಯವನ್ನು ಶಾಸಕ ಶರತ್ ಪ್ರಶಂಸಿಸಿದರು.

ಹೊಸಕೋಟೆ: ಕಳೆದ 29 ವರ್ಷಗಳಿಂದ ರಾಸುಗಳಿಗೆ ಮೇವು ವಿತರಣೆ ಹಾಗೂ ಬಹುಮಾನ ವಿತರಿಸುತ್ತಿರುವ ಡಾ.ಸಿ.ಜಯರಾಜರ ಗೋಸೇವಾ ಕಾರ್ಯವನ್ನು ಶಾಸಕ ಶರತ್ ಪ್ರಶಂಸಿಸಿದರು.

ನಗರದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಆಯೋಜಿಸಿದ್ದ ರಾಸುಗಳ ಪ್ರದರ್ಶನ ಹಾಗೂ ಪಶು ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಗೋಪೂಜೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಕೃಷಿ ಹಾಗೂ ಹೈನೋದ್ಯಮದಿಂದ ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿಯೂ ಡಾ.ಸಿ.ಜಯರಾಜ್ ನಿರಂತರ ಪ್ರತಿ ವರ್ಷ 2 ಸಾವಿರ ರಾಸುಗಳಿಗೆ ಆಹಾರ ವಿತರಿಸಿ ಹೈನೋದ್ಯಮಕ್ಕೆ ಪ್ರೋತ್ಸಾಹಿಸುತ್ತಿರುವುದು ಸುವರ್ಣ ಅಕ್ಷರಗಳಲ್ಲಿ ಬರೆಯುವ ಮಹತ್ಕಾರ್ಯ ಎಂದರು.

ಸಂಕ್ರಾಂತಿ ಆಯೋಜಕ ಡಾ.ಸಿ.ಜಯರಾಜ್ ಮಾತನಾಡಿ, ಮಕರ ಸಂಕ್ರಾಂತಿ ಹಬ್ಬವನ್ನು ಕೇವಲ ಮನೆ ಮಂದಿ ಸೇರಿ ಆಚರಿಸಿದರೆ ಸಾಲದು, ಎಲ್ಲರೂ ಸಾಂಪ್ರದಾಯಕವಾಗಿ ಒಂದೆಡೆ ಸೇರಿ ಆಚರಿಸುವುದರಿಂದ ಹಬ್ಬದ ಮೆರುಗು ಹಾಗೂ ಅದರ ವೈಶಿಷ್ಯತೆ ಜೊತೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದರು.

ಕಾರ್ಯರ್ಕಮದಲ್ಲಿ ತಾಲೂಕಿನ 2,500ಕ್ಕೂ ಹೆಚ್ಚು ಹಸುಗಳು ಭಾಗವಹಿಸಿದ್ದವು. ಇದಕ್ಕೂ ಮುಂಚೆ ಚನ್ನಬೈರೇಗೌಡ ಕ್ರೀಡಾಂಗಣದ ಮುಂದಿರುವ ನಾಗರ ಹುತ್ತಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪಾಲ್ಗೊಂಡಿದ್ದ ರೈತರ ಪ್ರತಿ ಹಸುವಿಗೆ ಒಂದು ಮೂಟೆ ಪಶು ಆಹಾರ ವಿತರಿಸಿದರು. ಅವುಗಳಲ್ಲಿ ಉತ್ತಮ ಹಾಲು ನೀಡುವ 10 ಹಸುಗಳಿಗೆ ಫ್ಯಾಷನ್ ಶೋ, ಮೂರು ಹಸುಗಳಿಗೆ ಹಾಗೂ ಮೂರು ಜೊತೆ ಎತ್ತುಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜ್, ಮುಖಂಡರಾದ ಎಸಿಪಿ ಸುಬ್ಬಣ್ಣ, ಬಿ.ವಿ.ಬೈರೇಗೌಡ, ಉದಯ್ ಕುಮಾರ್, ಸಂದೀಪ್, ಉಮೇಶ್ ಇತರರು ಹಾಜರಿದ್ದರು.

ಫೋಟೋ: 15 ಹೆಚ್‌ಎಸ್‌ಕೆ 1 ಮತ್ತು 2

ಹೊಸಕೋಟೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಗೋಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!