ಐರ್ಲೆಂಡ್‌ ನಲ್ಲಿ ಕಡಬದ ಯುವಕ ಸಂಶಯಾಸ್ಪದ ಸಾವು

KannadaprabhaNewsNetwork |  
Published : Feb 23, 2026, 03:00 AM IST
ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕ ನೋರ್ವ  ತಮ್ಮ ನಿವಾಸದಲ್ಲೇ  ಸಂಶಯಾಸ್ಪದ ರೀತಿಯಲ್ಲಿ  ಸಾವನ್ನಪ್ಪಿರುವ ಘಟನೆ  | Kannada Prabha

ಸಾರಾಂಶ

ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕನೊಬ್ಬ ತನ್ನ ನಿವಾಸದಲ್ಲೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಬದ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದು, ಇವರು ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ನಲ್ಲಿ ವಾಸವಾಗಿದ್ದರು.

ಉಪ್ಪಿನಂಗಡಿ: ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕನೊಬ್ಬ ತನ್ನ ನಿವಾಸದಲ್ಲೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಬದ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದು, ಇವರು ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ನಲ್ಲಿ ವಾಸವಾಗಿದ್ದರು.

ಗುರುವಾರ ಸಾಂಜೋ ಸುನಿಲ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಇದನ್ನು ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಂಜೋ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಹಿಂದೆ ಇಸ್ರೆಲ್ ನಲ್ಲಿ ಉದ್ಯೋಗದಲ್ಲಿದ್ದ ಸಾಂಜೋ ಸುನಿಲ್ ಒಂದು ವರ್ಷದ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಪತ್ನಿ ಲಿಷ್ಮಾ ಫಿಲಿಫ್ ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಈ ಕಾರಣಕ್ಕೆ ಇಸ್ರೇಲ್ ಅಲ್ಲಿಯ ಕೆಲಸ ಬಿಟ್ಟು ಮದುವೆಯ ಬಳಿಕ ಐರ್ಲೆಂಡ್‌ನಲ್ಲಿ ಕೆಲಸ ಮಾಡುವುದಾಗಿ ತಿಂಗಳ ಹಿಂದೆಯಷ್ಟೆ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ರೆ ಬೀದಿಗಳಿದು ಹೋರಾಟ: ಬಿ.ಶ್ರೀರಾಮುಲು
ಕಿನ್ನಿಗೋಳಿಯಲ್ಲಿ ಶೀಘ್ರದಲ್ಲಿ ಒಳಚರಂಡಿ ಯೋಜನೆ ಜಾರಿ: ಶಾಸಕ ಉಮಾನಾಥ ಕೋಟ್ಯಾನ್‌