ಮಳೆಗಾಗಿ ಗಜಾಪುರದಲ್ಲಿ ಸಂಭ್ರಮದ ಗಂಗಾಮಾತೆಯ ಹಬ್ಬ

KannadaprabhaNewsNetwork |  
Published : Jul 09, 2026, 12:45 AM IST
ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದಲ್ಲಿ ಬುಧವಾರ ಗಂಗಾಮತಸ್ಥರು ಹಾಗೂ ಗ್ರಾಮಸ್ಥರು ಹೊಳೆ ಗಂಗೆಪೂಜೆ ಮಾಡುವ ಮೂಲಕ ಮಳೆಬೆಳೆ ಸಮೃದ್ಧಿಯಾಗಲ ಎಂದು ಗಂಗೆಗೆ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಗಂಗಾಮಾತೆ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಮಾಡಿ ಹೊಳೆಗೆ ಹೋಗುವ ಪಾರಂಪರಿಕೆ ಆಚರಣೆದರು.

ಕೂಡ್ಲಿಗಿ: ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಗಂಗಾಮಾತೆ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಮಾಡಿ ಹೊಳೆಗೆ ಹೋಗುವ ಪಾರಂಪರಿಕೆ ಆಚರಣೆದರು.

ಗಜಾಪುರ ಗ್ರಾಮದ ಗಂಗಾಮತಸ್ಥರ ಮಹಿಳೆಯರು ಹಾಗೂ ಊರಿನ ಇತರೆ ಮಹಿಳೆಯರು ಆರತಿ ಹಿಡಿದು ಊರಿನ ಮಧ್ಯಭಾಗದಲ್ಲಿರುವ ಗಂಗಾಮಾತೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಉರುಮೆ, ಹಲಗೆ ವಾದನಗಳ ಮೂಲಕ ಊರಿಂದ ತುಸು ದೂರ ಇರುವ ಕಲ್ಲುಬಾವಿಯ ಹತ್ತಿರ ಗಂಗಮ್ಮನ ಪಾದಗಟ್ಟೆಗೆ ಬಂದು ಹೊಳೆ ಗಂಗೆಪೂಜೆ ನೆರವೇರಿಸಿದರು.

ತುಪ್ಪಾಕನಹಳ್ಳಿ ರುದ್ರಮುನಿ ಸ್ವಾಮಿ ಗಂಗೆಪೂಜೆಯ ಧಾರ್ಮಿಕ ವಿಧಿವಿಧಾನಗಳ ಪೂಜೆ ಸಲ್ಲಿಸಿದರು. ಕುಂಭ ಹೊತ್ತ ಮಹಿಳೆಯರು ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಗಜಾಪುರದಲ್ಲಿ ಗಂಗಾಮತಸ್ಥ ಸಮುದಾಯ ಸೇರಿದಂತೆ ಎಲ್ಲ ಸಮುದಾಯದ ಮಹಿಳೆಯರು, ರೈತರು ಗಂಗಮ್ಮನ ಪೂಜೆ ಮಾಡುವ ಮೂಲಕ ಉತ್ತಮ ಮಳೆಯಾಗಲಿ, ಎಲ್ಲ ರೈತರು ನೆಮ್ಮದಿಯಾಗಿ ಜೀವನ ಮಾಡಲಿ, ಸುಖ, ಸಮೃದ್ದಿ ತುಂಬಲಿ ಎಂದು ಗಂಗೆಯಲ್ಲಿ ಪ್ರಾರ್ಥಿಸಿದರು. ಕುಂಭದಲ್ಲಿ ಗಂಗೆಯನ್ನು ಹೊತ್ತು ಗ್ರಾಮದ ಬೀದಿಗಳಲ್ಲಿ ಉರುಮೆ ವಾದ್ಯದ ಮೂಲಕ ಮೆರವಣಿಗೆ ಮಾಡಿದರು.

ಗಂಗಾಮತಸ್ಥರು ಹಬ್ಬದ ರೀತಿಯಲ್ಲಿ ಸಿಹಿಭೋಜನ ಹಾಗೂ ಇನ್ನಿತರ ಭೋಜನಗಳನ್ನು ತಯಾರಿಸಿ ಗಂಗೆಗೆ ಎಡೆನೀಡಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು. ಊರಿನ ಎಲ್ಲ ಸಮಾಜದ ಹಿರಿಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಜಾಪುರ ಗ್ರಾಮದ ಗಂಗಾಮತ ಸಮಾಜದ ಮುಖಂಡರಾದ ಬಾರಿಕರ ಗಾಳೆಪ್ಪನವರ ಭೀಮಪ್ಪ, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ಅಧ್ಯಕ್ಷ ಬಾರಿಕರ ಮಂಜುನಾಥ, ಗಂಗಾಮಾತೆ ದೇವಸ್ಥಾನದ ಅರ್ಚಕರಾದ ಗಾಳೆಪ್ಪನವರ ವೆಂಕಟೇಶ್, ಬಾರಿಕರ ದೊಡ್ಡಗೂಳೆಪ್ಪ, ಶ್ಯಾಮನೂರು ಹನುಮಂತಪ್ಪ, ವಾಲ್ಮೀಕಿ ಸಮಾಜದ ಮುಖಂಡರಾದ ನಾಣ್ಯಾಪುರ ಅಂಜಿನಪ್ಪ, ದನಕಾಯುವರ ಗಾಳೆಪ್ಪ, ಬೆಳದೇರಿ ಮಲ್ಲಿಕಾರ್ಜುನ, ಬಾರಿಕರ ಹನುಮಪ್ಪ, ಗಾಳೆಪ್ಪರ ಹುಲುಗಪ್ಪ, ನೀರಗಂಟಿ ಪ್ರಕಾಶ್, ಜೋಗಿ ಮಂಜುನಾಥ, ಬಾರಿಕರ ಸಾಗರ, ಅಂಬಳಿ ಭೀಮಪ್ಪ, ಬಿ. ಅಜೇಯ ಮಾಸ್ತಿ, ಬಾರಿಕರ ಬಸವರಾಜ, ಕುಪ್ಪಿನಕೆರೆ ವಿನಯಕುಮಾರ್, ಶ್ಯಾಮನೂರು ಸೂರಿ ಸೇರಿದಂತೆ ಹಲವು ಮುಖಂಡರು, ಯುವಕರು ಗಂಗಾಮಾತೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹದೇಶ್ವರರು, ಮಂಟೇಸ್ವಾಮಿ, ನೀಲಗಾರರ ಪರಂಪರೆ ಉಳಿಸಿ-ಬೆಳೆಸಿ
ನಾಳೆ ಡಾ.ಜಿ.ಮಾದೇಗೌಡ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಪ್ರದಾನ