ರಾಯಚೂರು: ರೈಲಿನಲ್ಲಿ ಕಲಬೆರಕೆ ಸೇಂದಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಆರು ಜನರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದು, ಅವರಿಂದ 150 ಲೀಟರ್ ಕಲಬೆರಕೆ ಸೇಂದಿಯನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ವಿವಿಧ ಬಡಾವಣೆಗಳ ನಿವಾಸಿಗಳಾದ ನರಸಮ್ಮ,ಶಿವರಾಜ, ಬಸವರಾಜ, ಶ್ರೀಕಾಂತ್, ಮಾರೆಪ್ಪ ಮತ್ತು ತಿಮ್ಮಪ್ಪ ಎಂಬುವವರು ಬಂಧಿತ ಆರೋಪಿತರಾಗಿದ್ದಾರೆ. ಸಿಎಚ್ ಪೌಡರ್ ಬಳಸಿದ ಕಲಬೆರಕೆ ಸೇಂದಿಯನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕಾಗಿ ತೆಲಂಗಾಣದ ಕೃಷ್ಣಾದಿಂದ ರಾಯಚೂರಿಗೆ ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಸೇಂದಿಯನ್ನು ಸಾಗಾಣೆ ಮಾಡುತ್ತಿರುವುದರ ಕುರಿತು ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳ ತಂಡವು, ನಗರದ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ 150 ಲೀಟರ್ ಸೇಂದಿಯ ಬಾಟಲಿಗಳನ್ನು ಜಪ್ತಿ ಮಾಡಿ, ಆರು ಜನ ಆರೋಪಿಗಳ ವಿರುದ್ದ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.