ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!

Published : May 25, 2026, 11:05 AM IST
Kalaburagi Police

ಸಾರಾಂಶ

ಮಹಿಳೆಯೊಬ್ಬಳು 112ಕ್ಕೆ ಕರೆ ಮಾಡಿ ‘ಅಯ್ಯಯ್ಯೋ ಪೊಲೀಸರೇ ನಮ್ಮ ಮನೆಯ ಬಳಿ ದುರ್ವಸನೆ ಬರ್ತಿದೆ, ಹೆಣ ಇದೆಯೋ ಅಥವಾ ಬೆರೆ ಏನಿದೆಯೋ ಬಂದು ಪರಿಶೀಲಿಸಿ’ ಎಂದಿದ್ದಕ್ಕೆ ಬಂದು ನೋಡಿದ ಪೊಲೀಸರಿಗೆ ಹೆಣದ ಬದಲಾಗಿ ಸತ್ತ ಹೆಗ್ಗಣ ದೊರೆತಿರುವ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ :  ಮಹಿಳೆಯೊಬ್ಬಳು 112ಕ್ಕೆ ಕರೆ ಮಾಡಿ ‘ಅಯ್ಯಯ್ಯೋ ಪೊಲೀಸರೇ ನಮ್ಮ ಮನೆಯ ಬಳಿ ದುರ್ವಸನೆ ಬರ್ತಿದೆ, ಹೆಣ ಇದೆಯೋ ಅಥವಾ ಬೆರೆ ಏನಿದೆಯೋ ಬಂದು ಪರಿಶೀಲಿಸಿ’ ಎಂದಿದ್ದಕ್ಕೆ ಬಂದು ನೋಡಿದ ಪೊಲೀಸರಿಗೆ ಹೆಣದ ಬದಲಾಗಿ ಸತ್ತ ಹೆಗ್ಗಣ ದೊರೆತಿರುವ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.

3 ದಿನದಿಂದ ದುರ್ವಾಸನೆ ಹರಡಿತ್ತು

ನಗರದ ಖಾದ್ರಿ ಚೌಕ್ ಬಳಿಯ ಮನೆಯೊಂದರ ಬಳಿ 3 ದಿನದಿಂದ ದುರ್ವಾಸನೆ ಹರಡಿತ್ತು. ಆ ಮನೆಯ ಮಹಿಳೆ, ನಗರ ಪಾಲಿಕೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾರೆ. ತಕ್ಷಣ ಸ್ಪಂದಿಸಿದ ಪೊಲೀಸರು, ಸೈರನ್ ಹಾಕಿಕೊಂಡು ಸ್ಥಳಕ್ಕೆ ಬಂದು ಹುಡುಕಾಡಿದಾಗ ಸತ್ತ ಹೆಗ್ಗಣ ಸಿಕ್ಕಿದೆ.

ಅದನ್ನು ಪೊಲೀಸರೇ ಎತ್ತಿ ವಿಲೇವಾರಿ

ಪೊಲೀಸರು, ವಾಸನೆ ಜಾಡು ಹೀಡಿದು ಪರಿಶೀಲಿಸಿದಾಗ ಸತ್ತ ಹೆಗ್ಗಣ ದೊರೆಯಿದೆ. ಇದು ತಮ್ಮ ವ್ಯಾಪ್ತಿಯ ಕೆಲಸವಲ್ಲದಿದ್ದರೂ, ಸ್ಥಳದಲ್ಲಿದ್ದ ಮಹಿಳೆಯ ಅಸಹಾಯಕತೆಗೆ ಸ್ಪಂದಿಸಿದ್ದು, ತಾವೇ ಖುದ್ದಾಗಿ ಆ ಸತ್ತ ಹೆಗ್ಗಣವನ್ನು ಎತ್ತಿ ವಿಲೇವಾರಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತೆರಿಗೆ ವಸೂಲಿ ಮಾಡುವ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Stay updated with the latest news from Kalaburagi district (ಕಲಬುರಗಿ ಸುದ್ದಿ) — covering agriculture and tur-dal production, local governance, industrial developments, district heritage & tourism, environment, education, community events and social issues across the district on Kannada Prabha.
Read more Articles on

Recommended Stories

ಕಲಬುರಗಿ: ಜಿಲ್ಲೆಯಲ್ಲಿ ಆಕರ್ಷಕ ಮೃಗಾಲಯ ಲೋಕಾರ್ಪಣೆ
ಪೋಲಿಯೋ ಲಸಿಕೆಯಿಂದ ಮಗು ವಂಚಿತವಾಗದಿರಲಿ