A couple united in a worldly court
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಚಿತ್ತಾಪುರದ ನ್ಯಾಯಾಲಯದಲ್ಲಿ ಜು. ೧೧ ರಂದು ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ನ್ಯಾ. ಕಿಶನ್ ಮಾಡಲಗಿ ಅವರ ಮಧ್ಯಸ್ಥಿಕೆಯಲ್ಲಿ ಮತ್ತು ಮಾರ್ಗದರ್ಶನದಿಂದ ಎರಡು ವೈವಾಹಿಕ ಪ್ರಕರಣವು ಯಶಸ್ವಿಯಾಗಿ ರಾಜೀ ಸಂಧಾನಗೊಂಡಿದೆ.ರಾಜೀ ಸಂಧಾನದ ನಂತರ ದಂಪತಿ ಪರಸ್ಪರ ಹೂಮಾಲೆ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡರು.
ಈ ದೃಶ್ಯ ಲೋಕ ಅದಾಲತನಲ್ಲಿ ಹಾಜರಿದ್ದವರ ಗಮನ ಸೆಳೆಯಿತು. ಅವರ ಈ ನಿರ್ಧಾರವು ನ್ಯಾಯಾಲಯದ ಮೂಲಕ ದೂರವಾಗಿದ್ದ ದಂಪತಿ ಮತ್ತೆ ಒಂದಾಗಿ ಬಾಳ್ವೆ ನಡೆಸಲು ಒಪ್ಪಿಕೊಂಡಿದ್ದು ಕೌಟುಂಬಿಕ ವಿವಾದವೊಂದು ಸುಖ್ಯಾಂತ ಕಂಡಿದೆ.ಪ್ರಕರಣದಲ್ಲಿ ದಂಪತಿ ನಡುವಿನ ಭಿನ್ನಾಭಿಪ್ರಾ ತೀವ್ರಗೊಂಡು ವಿಚ್ಛೇದನದ ಹಂತ ತಲುಪಿದ್ದವು. ಆದರೆ, ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ.ಕಿಶನ್ ಮಾಡಲಗಿ ಅವರ ಸೂಕ್ತ ಸಲಹೆ ಮತ್ತು ಸಂಧಾನದ ಮೇರೆಗೆ ನ್ಯಾಯವಾದಿಗಳು ಮತ್ತು ಮಧ್ಯಸ್ಥಿಕೆದಾರರಾಗಿದ್ದ ಎಸ್.ಪಿ ಸಾತನೂರ ಅವರ ಪ್ರಕ್ರಿಯೆಯಿಂದಾಗಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯ ಮರೆತು ಮತ್ತೆ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು.
ಅಪಘಾತ ಪ್ರಕರಣ ಇತ್ಯರ್ಥ: ೨೦೦೮ ರಲ್ಲಾದ ಮೋಟಾರ್ ವಾಹನ ಅಪಘಾತ ಪ್ರಕರಣವನ್ನು ಚಿತ್ತಾಪುರ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.ಮೊಟಾರ್ ವಾಹನ ಅಪಘಾತ ಪ್ರಕರಣದಲ್ಲಿ ನ್ಯಾಯಾಲಯವು ಮಾಲಿಕನಿಗೆ ಪರಿಹಾರ ನೀಡಲು ಆದೇಶಿಸಿತ್ತು. ಅರ್ಜಿದಾರರು ೨೦೧೨ರಲ್ಲಿ ನ್ಯಾಯಾಲಯದ ಆದೇಶ ಜಾರಿ ಮಾಡಲು ಅರ್ಜಿ ಸಲಿಸಿದ್ದು, ಕಳೆದ ೧೪ ವರ್ಷಗಳಿಂದ ಮಾಲಿಕರು ಪರಿಹಾರ ನೀಡಲು ವಿಳಂಬ ಮಾಡಿದ್ದು, ಈ ಪ್ರಕರಣವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರು ಕೈಗೆತ್ತಿಕೊಂಡು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಾಲಿಕರ ಪರ ವಕೀಲರಾದ ನಾಗರಾಜ ಕಡಬೂರ ಮತ್ತು ಎದುರುದಾರ ವಕೀಲರಾದ ಚಂದ್ರಶೇಖರ ಅವಂಟಿ ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಸಂಧಾನದ ಫಲವಾಗಿ ಪರಿಹಾರವನ್ನು ಮಾಲಿಕನಿಂದ ಕೊಡಿಸಿ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಳಿಸಿದರು.
ಪೋಟೋಚಿತ್ತಾಪುರ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಎರಡು ವೈವಾಹಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿದರು.