ಕನಕರಿಂದ ಸಮಾಜಕ್ಕೆ ಸಮಾನತೆ ಸಂದೇಶ: ಶಾಸಕ ಚಂದ್ರಪ್ಪ

KannadaprabhaNewsNetwork |  
Published : Nov 09, 2025, 01:30 AM IST
ಸಂತ ಶ್ರೇಷ್ಠ ಭಕ್ತಕನಕದಾಸರ 538 ನೇ ಜಯಂತಿಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. | Kannada Prabha

ಸಾರಾಂಶ

ಮಾನವ ಜಾತಿ ಎಲ್ಲಾ ಒಂದೆ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಿದವರು ಸಂತಶ್ರೇಷ್ಠ ಭಕ್ತ ಕನಕದಾಸ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಮಾನವ ಜಾತಿ ಎಲ್ಲಾ ಒಂದೆ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಿದವರು ಸಂತಶ್ರೇಷ್ಠ ಭಕ್ತ ಕನಕದಾಸ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಸಂವಿಧಾನ ಸೌಧದಲ್ಲಿ ಶನಿವಾರ ನಡೆದ ಭಕ್ತ ಕನಕದಾಸರ 538ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣ ಪರಮಾತ್ಮನನ್ನು ಓಲೈಸಿಕೊಂಡ ಸಂತಶ್ರೇಷ್ಠ ಭಕ್ತ ಕನಕದಾಸರ ಸಂದೇಶವನ್ನು ಎಲ್ಲರೂ ಪಾಲಿಸಬೇಕಿದೆ. ಜಾತಿ ಅಸಮಾನತೆ ವಿರುದ್ದ ಹೋರಾಡಿದ ಕನಕದಾಸರನ್ನು ನಿತ್ಯದ ಬದುಕಿನಲ್ಲಿ ಸ್ಮರಣೆ ಮಾಡಿಕೊಳ್ಳಬೇಕೆಂದು ಹೇಳಿದರು.

ತಾಳಿಕಟ್ಟೆಯಲ್ಲಿ 32 ವರ್ಷಗಳ ನಂತರ ನಡೆದ ತೋಪು ಜಾತ್ರೆಯ ಸಂದರ್ಭದಲ್ಲಿ 30 ಕೋಟಿ ರೂ.ಗಳನ್ನು ಖರ್ಚು ಮಾಡಿ ಆಸ್ಪತ್ರೆ, ಕನಕ ಭವನ ಕಟ್ಟಿಸಿ ಎಲ್ಲಾ ಕಡೆ ಸಿ.ಸಿ.ರಸ್ತೆಗಳನ್ನು ಮಾಡಿ ಪ್ರತಿ ಮನೆ ಮನೆಗೆ ಕುಡಿಯುವ ನೀರು ಒದಗಿಸಿದ್ದೇನೆ. ಎರಡು ಸಾವಿರ ಗುಡಿಸಲುಗಳಿರುವ ಜಾಗದಲ್ಲಿ ಲೈಟಿಂಗ್ ಕೊಟ್ಟು, ಹೆಣ್ಣುಮಕ್ಕಳಿಗೆ ತೊಂದರೆಯಾಗಬಾರದೆಂದು ಬಾಂಬೆ ಮತ್ತು ಪೂನಾದಿಂದ ಟಾಯ್ಲೆಟ್‍ಗಳನ್ನು ತರಿಸಿಕೊಂಡು ಕಟ್ಟಿಸಿದ್ದೇನೆ ಎಂದರು.

ತಹಸೀಲ್ದಾರ್ ವಿಜಯಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ತಿಪ್ಪೇಶಪ್ಪ, ಹಳ್ಳಪ್ಪ, ವೀರೇಶ್, ಡಾ.ಉಮಾಪತಿ, ನುಲೇನೂರು ಶೇಖರ್, ಶ್ರೀನಿವಾಸ್, ಗಾಯತ್ರಿ ಪ್ರಭಾಕರ್, ಪರಮೇಶ್ವರಪ್ಪ, ಪ್ರದೀಪ್‍ಕುಮಾರ್, ಹನುಮಂತಪ್ಪ, ನಾಗಪ್ಪ, ಚಂದ್ರಮೌಳಿ, ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ