ಮನುಕುಲಕ್ಕೆ ಕನಕದಾಸರ ಕೊಡುಗೆ ಅಪಾರ: ಶಾಸಕ ಜೆ.ಟಿ.ಪಾಟೀಲ

KannadaprabhaNewsNetwork |  
Published : Nov 19, 2024, 12:50 AM IST
ಬೀಳಗಿ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ನಡೆದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಜೆ.ಟಿ.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನಕದಾಸರು ಸಾಮಾಜಿಕ ಚಿಂತನೆ ಅಭಿವೃದ್ಧಿ ಹರಿಕಾರರು. ಅವರ ತತ್ವ ನಾವೆಲ್ಲರೂ ಪಾಲನೆ ಮಾಡಬೇಕಾಗಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ಲೋಕದ ಅಂಕುಡೊಂಕು ತಿದ್ದಲು ತಮ್ಮ ಜೀವನ ಮುಡುಪಾಗಿಟ್ಟ ಸಂತ ಕವಿ ಕನಕದಾಸರ ಕೊಡುಗೆ ಮನುಕುಲಕ್ಕೆ ಅಪಾರ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಸ್ಥಳೀಯ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಹಾಲುಮತ ಸಮಾಜ ಬಾಂಧವರ ಸಂಯುಕ್ತಾಶ್ರಯಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೀರ್ತನೆ ಹಾಗೂ ಸಾಹಿತ್ಯ ಕೃತಿಗಳಿಂದ ಸಮಾಜದಲ್ಲಿನ ಜಾತಿ ದೋಷಗಳನ್ನು ಕನಕದಾದಸರು ತಿದ್ದಿದರು. ಸಮಾಜ ಸುಧಾರಣಾ ಕಾರ್ಯ ಹಾಗೂ ಜನಮಾನಸಕ್ಕೆ ಅವರು ಕೊಟ್ಟ ವಿಚಾರಧಾರೆಗಳು ಬದುಕಿಗೆ ಮಾರ್ಗದರ್ಶಿ ಸೂತ್ರಗಳಾಗಿವೆ. ಕನಕದಾಸರು ಸಾಮಾಜಿಕ ಚಿಂತನೆ ಅಭಿವೃದ್ಧಿ ಹರಿಕಾರರು. ಅವರ ತತ್ವ ನಾವೆಲ್ಲರೂ ಪಾಲನೆ ಮಾಡಬೇಕಾಗಿದೆ ಎಂದರು.

ದೇಶವು 140 ಕೋಟಿ ಜನಸಂಖ್ಯೆ ಹೊಂದಿದೆ. ಮುಂದಿನ ದಿನಗಳಲ್ಲಿ ಇದು ಅಪಾಯಕಾರಿ, ಪ್ರತಿಯೊಬ್ಬರು ಕಾನೂನು ಪರಿಪಾಲನೆ ಮಾಡಬೇಕಾಗಿದೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರಕಿಸಿ, ಅವರಲ್ಲಿ ಒಳ್ಳೆಯ ಸಂಸ್ಕಾರವುಳ್ಳವರನ್ನಾಗಿ ಮಾಡುವ ಹೊಣೆ ನಮ್ಮೆಲ್ಲರದಾಗ ಬೇಕಾಗಿದೆ. ಕನಕದಾಸರ ಜಯಂತಿ ಇಂದು ಅರ್ಥಪೂರ್ಣ ಆಚರಣೆಗೊಂಡಿದ್ದು ನನಗೆ ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಸತ್ಯಪ್ಪ ಮೇಲ್ನಾಡ ಬೀಳಗಿ ಕ್ರಾಸ್ ಹತ್ತಿರ ಕನಕದಾಸರ ಸಮುದಾಯ ಭವನ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಅದಕ್ಕೆ ಅನುದಾನ ನೀಡಿ ಬರುವ ವರ್ಷದಲ್ಲಿ ಪೂರ್ಣಗೊಳ್ಳವಂತೆ ಮಾಡುವಂತೆ ಶಾಸಕರ ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ಶಾಸಕರು, ಸಮುದಾಯ ಭವನಕ್ಕೆ ₹3 ಕೋಟಿ ಅನುದಾನ ದೊರಕಿಸಲ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಕನಕದಾಸರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ತಹಸೀಲ್ದಾರ್‌ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಬಿಇಒ ಆರ್.ಎಸ್.ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಉಪನೋಂದಣಿ ಅಧಿಕಾರಿ ಎಸ್.ಬಿ.ಮುಂಡರಗಿ, ಕೃಷಿ ಅಧಿಕಾರಿ ಶ್ರೀನಿವಾಸ.ಎಸ್.ಪಾಟೀಲ, ಸಿಡಿಪಿಒ ಬಿ.ಜಿ.ಕವಟೇಕರ, ಹಾಲುಮತ ಸಮಾಜ ಅಧ್ಯಕ್ಷ ಪಡಿಯಪ್ಪ ಕರಿಗಾರ ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ