ಕನಕದಾಸರ ತತ್ವಗಳು ಮನುಕುಲಕ್ಕೆ ದಾರಿದೀಪ: ರಾಮಚಂದ್ರ

KannadaprabhaNewsNetwork |  
Published : Nov 30, 2026, 02:45 AM IST
 29 ಜೆ.ಎಲ್ ಆರ್.‌ 1)    ಜಗಳೂರು ತಾಲೂಕಿನ ಚಿಕ್ಕಉಜ್ಜಿನಿ ಗ್ರಾಮದಲ್ಲಿ ನಡೆದ ಕನಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಉದ್ಘಾಟಿಸಿದರು. ಸಾಗರ್ ಅಂಜಿನಪ್ಪ, ರಾಜನಹಳ್ಳಿ ಶಿವಕುಮಾರ್, ಬಿಸ್ತುವಳ್ಳಿ ಬಾಬು ಇತರರಿದ್ದರು. | Kannada Prabha

ಸಾರಾಂಶ

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ, ಸಮಾನತೆ, ಮಾನವೀಯತೆ ಮತ್ತು ಸತ್ಯದ ಸಂದೇಶವನ್ನು ಸಾರಿದ್ದಾರೆ. ಜಾತಿ-ಧರ್ಮದ ಭೇದಭಾವವನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದ್ದಾರೆ.

- ಚಿಕ್ಕಉಜ್ಜಿನಿಯಲ್ಲಿ ಕನಕದಾಸ ಹಬ್ಬ, ಕನಕೋತ್ಸವ, ಸಾಂಸ್ಕೃತಿಕ ವೈಭವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಜಗಳೂರು

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ, ಸಮಾನತೆ, ಮಾನವೀಯತೆ ಮತ್ತು ಸತ್ಯದ ಸಂದೇಶವನ್ನು ಸಾರಿದ್ದಾರೆ. ಜಾತಿ-ಧರ್ಮದ ಭೇದಭಾವವನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

​ತಾಲೂಕಿನ ಚಿಕ್ಕಉಜ್ಜಿನಿ ಗ್ರಾಮದಲ್ಲಿ ಆಯೋಜಿಸಿದ್ದ ಕನಕದಾಸ ಹಬ್ಬ, ಕನಕೋತ್ಸವ, ಸಾಂಸ್ಕೃತಿಕ ವೈಭವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸ ಜಯಂತಿ ಆಚರಣೆಯ ಮುಖ್ಯ ಉದ್ದೇಶ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಅವರ ಸಾಹಿತ್ಯ ಮತ್ತು ತತ್ವಗಳು ಉತ್ತಮ ಮನುಷ್ಯರಾಗಿ ಬಾಳಲು ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮ ಆಯೋಜಕ ಚಿಕ್ಕಉಜ್ಜಿನಿ ಸಾಗರ್ ಅಂಜಿನಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯ ಈಶಾನ್ಯ ಮೂಲೆಯಲ್ಲಿರುವ ಚಿಕ್ಕಉಜ್ಜಿನಿ ಗ್ರಾಮವು ರಾಜಕೀಯವಾಗಿ ಮಹತ್ವ ಪಡೆದಿದೆ. ಜನಪ್ರತಿನಿಧಿಗಳು ಚುನಾವಣಾ ಪ್ರಚಾರವನ್ನು ಇಲ್ಲಿಂದಲೇ ಆರಂಭಿಸುತ್ತಾರೆ. ಕುರುಬ ಸಮುದಾಯದವರು ಹೆಚ್ಚಿರುವ ಈ ಗ್ರಾಮದಲ್ಲಿ ಕನಕದಾಸರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಎಲ್ಲ ಸೋದರ ಸಮಾಜಗಳೊಂದಿಗೆ ಅನ್ಯೂನತೆಯಿಂದ ಬದುಕಬೇಕು ಎಂದರು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಜಾತಿ, ಧರ್ಮ, ಭಾಷೆಯ ಭೇದವಿಲ್ಲದೇ ಪ್ರೀತಿ, ಸಹೋದರತ್ವದಿಂದ ಬದುಕುವ ಮೂಲಕ ಕನಕದಾಸರ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸೋಣ ಎಂದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಮಾತನಾಡಿ, ನಗರ ಮತ್ತು ಕಚೇರಿಗಳಿಗೆ ಸೀಮಿತವಾಗಿದ್ದ ಜಯಂತಿಯನ್ನು ಗ್ರಾಮೀಣ ಮಟ್ಟದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಮಾಜಿ ಮೇಯರ್ ಗುರುನಾಥ್, ಕೆಪಿಸಿಸಿ ಎಸ್‌ಟಿ ಘಟಕ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ತಾಲೂಕು ಅಧ್ಯಕ್ಷ ಗೋಡೆ ಸಿದ್ದೇಶ್, ವಕೀಲರ ಸಂಘದ ಅಧ್ಯಕ್ಷ ಡಿ.ವಿ. ನಾಗಪ್ಪ, ಮಾಜಿ ಅಧ್ಯಕ್ಷ ಟಿ. ಬಸವರಾಜ್, ಜಿ.ಪಂ. ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ತಾ.ಪಂ. ಮಾಜಿ ಸದಸ್ಯ ಸಿದ್ದೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಎಂ. ಐಹೊಳೆ, ಮುಖಂಡರಾದ ಎಚ್. ನಾಗರಾಜ್, ಶಾಂತಕುಮಾರಿ ಶಶಿಧರ್, ರಶ್ಮಿ ರಾಜಪ್ಪ, ಗೌಡಗೊಂಡನಹಳ್ಳಿ ನಾಗರಾಜ್, ಶ್ರುತಿ ಮಾಲತೇಶ್ ಅರಸು ಮತ್ತಿತರರು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಕನಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ:

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಮಾಲತೇಶ್ ಅರಸು ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರೂ, ಕುರುಬ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ''''ಕುರುಬ ಅಭಿವೃದ್ಧಿ ನಿಗಮ''''ವನ್ನು ಸ್ಥಾಪಿಸಿ, ಅದಕ್ಕೆ ಸೂಕ್ತ ಅನುದಾನ ಮೀಸಲಿಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿದರು.

- - -

-29ಜೆ.ಎಲ್‌ಆರ್.‌1:

ಚಿಕ್ಕಉಜ್ಜಿನಿಯಲ್ಲಿ ಕನಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಉದ್ಘಾಟಿಸಿದರು. ಸಾಗರ್ ಅಂಜಿನಪ್ಪ, ರಾಜನಹಳ್ಳಿ ಶಿವಕುಮಾರ್, ಬಿಸ್ತುವಳ್ಳಿ ಬಾಬು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ