ಕಿಕ್ಕೇರಿ: ಗ್ರಾಮದ ಬಲುದೊಡ್ಡ ಹಬ್ಬ ಕನ್ನಂಬಾಡಮ್ಮನ ಹಬ್ಬವನ್ನು ವಿಜೃಂಭಣೆಯಿಂದ ಮಂಗಳವಾರ ಆಚರಿಸಿದರು.
ಮುಡಿಪಿನ ಕಾಣಿಕೆಯಿಂದ ದೇವಿಗೆ ಸೀರೆ, ರವಿಕೆ, ಮಡಿಲಕ್ಕಿ, ಬಿಚ್ಚೋಲೆ, ಅರಿಷಿಣ, ಕುಂಕುಮ, ಕಾಯಿ ಮತ್ತಿತರ ಅಷ್ಟದ್ರವ್ಯ ವಸ್ತುಗಳನ್ನು ಖರೀದಿಸಿ ದೇವಿಗೆ ಪೂಜೆ, ಆರತಿ ಬೆಳಗಿ ಕಾಣಿಕೆ ಒಪ್ಪಿಸಿದರು.
ದೇವಿ ಗುಡಿಯಿಂದ ಪ್ರಸಾದ ತಂದು ಗ್ರಾಮದ ಮಾರುಕಟ್ಟೆಗೆ ಆಗಮಿಸಿದರು. ಗ್ರಾಮಸ್ಥ ರುಒಂದೆಡೆ ಸೇರಿದೇವಿ ಗದ್ದುಗೆ ನಿರ್ಮಿಸಿದರು. ಪುಷ್ಪಗಳಿಂದ ಅಲಂಕರಿಸಿ ಮಂಗಳದ್ರವ್ಯದೊಂದಿಗೆ ಪೂಜಿಸಿದರು. ದೇವಿಗೆ ಮಾಂಸದಅಡುಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು.ಭಕ್ತರಿಗೆ ಸಾಮೂಹಿಕ ದೇವಿ ಪ್ರಸಾದವಾಗಿ ಮಾಂಸದೂಟ ಉಣಬಡಿಸಲಾಯಿತು. ಈ ವೇಳೆ ಗ್ರಾಮ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಪಕ್ಷಬೇಧ ಮರೆತು ಹಬ್ಬದಲ್ಲಿ ಭಾಗಿಯಾಗಿದ್ದರು.ಇಂದು ಗುರುಪೂರ್ಣಿಮೆ ಪ್ರಯುಕ್ತ ಗುರುಪೂಜೆ
ಮಂಡ್ಯ: ಜನಪದ ಮತ್ತು ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಮಂಡ್ಯ ಜಿಲ್ಲಾ ಅಧ್ಯಕ್ಷರಾಗಿ ತಡಗವಾಡಿ ಟಿ.ಎಂ. ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಶೇಖರ್ ಹನಿಯಂಬಾಡಿ ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಡಿ. ಉಮಾಪತಿ ಮಂಗಲ, ಖಜಾಂಚಿಯಾಗಿ ವೈರಮುಡಿ, ನಿರ್ದೇಶಕರಾಗಿ ಎಸ್. ರಾಜಣ್ಣ ಸಂತೆಕಸಲಗೆರೆ, ಬಂದೇಶ ಕೊಡಿಯಾಲ, ಎಚ್.ಬಿ.ರಾಮಕೃಷ್ಣ ಹನಿಯಂಬಾಡಿ, ಕೃಷ್ಣ ವೈ.ಸಿ. ವೈ.ಯರಹಳ್ಳಿ, ಹೊನ್ನೇಶ, ವೈ.ಯರಹಳ್ಳಿ, ಜಯಮ್ಮ ಕಾಗೇಹಳ್ಳದದೊಡ್ಡಿ, ಶ್ವೇತಾ ಸಿ.ಎಂ. ತಡಗವಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಎನ್. ಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.